Tuesday, 4 October 2011

ಅದ್ಭುತ ಪ್ರಕೃತಿ

ಅದ್ಭುತ ಪ್ರಕೃತಿ 



ಪ್ರಕೃತಿಯ ಕಾರಣದಿಂದ ಸುರಿಯುವ ಮಳೆಗೆ,
ಧರೆ ಮುಟ್ಟುವ ಪ್ರತಿಯೊಂದು ಹನಿಗೆ,
ಮರ-ಗಿಡ-ಭುವಿಯ ಅದ್ಭುತ ಸ್ಪಂದನ,
ಇದುವೇ ಪ್ರಕೃತಿಗೆ ಹೊಂದಿರುವವುಗಳ ಮಧ್ಯೆ ಇರುವ ಭಂದನ.




ಆಗಸದಿಂದ ಉದುರುವ ಪ್ರತಿ ಹನಿ ಮಳೆಗೂ,
ಮರದಲ್ಲಿ ಚಿಗುರುವ ಪ್ರತಿ ಎಳೆ ಎಳೆಗೂ,
ಇರುವಂತಹ  ಜನ್ಮ ಜನ್ಮದ ಭಂದನ,
ಇದುವೇ ಪ್ರಕೃತಿ ಸ್ಪಂದನದ ಚಂದನ .




ಧರೆಯ ಕಡೆ ಸಾಗುವ ಸೂರ್ಯ ರಶ್ಮಿಯು,
ಧರೆಯಲ್ಲಿ ತಲೆಯೆತ್ತಿ ನಿಂತ ಮರದ, ಕೆಲವು ..
ಚಿಗುರೆಲೆಗಳ ದಾಟಿ ನೆಲ ಮುಟ್ಟುವ ಅಂದವ ,
ಹೊಗಳಲು ಪದ ಸಾಲದೆನ್ನುವ ಅದ ನೋಡಿ ಸವಿದವ .





ನೀಲ ಮೇಘವ ಕೆಂಪಾಗಿಸಿ ಆ ಬೆಂಕಿಯ ಚೆಂಡು,
ಭುವಿಯಿಂದ ಕಣ್ಮರೆಯಾಗಲು ಸಿದ್ದವಾದಾಗ , ಹಕ್ಕಿಗಳ..
ಸವಿ ಗಾನದೊಂದಿಗೆ ತಂಗಾಳಿಯಿಂದ ಕೂಡಿದ ಸಂಜೆಯ ಸೊಬಗು.
ನೀಡುವುದು ಅಲ್ಲಿ ನೆರೆದಿರುವವರ ಮನಸ್ಸಿಗೆ ಸೊಗಸು.


ಗೀಚಿದ್ದು :-ರಂಜಿತಾ ಹೆಗ್ಡೆ .ಆರ್ 
         (೧೮/೦೪/೨೦೧೧)




2 comments:

  1. ಚೆನ್ನಾಗಿದೆ...
    ವಿಶೇಷವಾಗಿ ಪೋಸ್ಟ್ ಮಾಡಿದ ರೀತಿ ಮತ್ತು ಚಿತ್ರಗಳ ಆಯ್ಕೆ ಚೆನ್ನಾಗಿದೆ.
    ಹೀಗೇ ಬರೆಯುತ್ತಿರಿ... ಬರೆದದ್ದನ್ನು ಹಂಚುತ್ತಿರಿ ರಂಜಿತಾ.

    ReplyDelete