ಸ್ನೇಹಿತರೆ ನೀವು ಭುವನೇಂದ್ರ ವಿದ್ಯಾರ್ಥಿಬಳಗದವರಾಗಿದ್ದಲ್ಲಿ, ನಿಮ್ಮ ಬರಹಗಳನ್ನ ಸ್ಪಂದನದ ಮೂಲಕ ನೀವೂ ಹಂಚಿಕೊಳ್ಳಬಹುದು. ಬರಹಗಳು ಯಾವುದೇ ಭಾಷೆಯದ್ದಾಗಿರಬಹುದು, ಯಾವುದೇ ವಿಷಯಗಳನ್ನೊಳಗೊಂಡಿರಬಹುದು-ಪ್ರಕಟನಾಯೋಗ್ಯವೆನಿಸಿದರೆ ಸ್ಪಂದನದಲ್ಲಿ ಖಂಡಿತ ಪೋಸ್ಟ್ ಮಾಡುತ್ತೇವೆ. ಬರಹಕ್ಕೆ ಪೂರಕವಾದ ಚಿತ್ರಗಳು ಇದ್ದಲ್ಲಿ ಅದನ್ನೂ ಕಳುಹಿಸಿ. ನಿಮ್ಮದೇ ಆದ ಜೋಕ್ಸ್, ಚಿತ್ರ-ಕವನ ಅಥವಾ ನೀವೇ ತೆಗೆದ ಚಿತ್ರಗಳಿದ್ದರೂ ಕಳುಹಿಸಬಹುದು.
ಕನ್ನಡ ಬರಹಗಳಾಗಿದ್ದಲ್ಲಿ, ದಯವಿಟ್ಟು ಮೈಲ್ ಕಂಪೋಸ್ ಮೋಡ್ ನಲ್ಲೋ ಅಥವಾ http://www.quillpad.com/kannada/ ಅಥವಾ ಬರಹ ಸಾಪ್ಟ್‍ವೇರ್‍ನಲ್ಲಿ ಯುನಿಕೋಡ್ ಬಳಸಿ ತುಂಗ (ಅಥವ ಇನ್ಯಾವುದಾದರೂ ಯುನಿಕೋಡ್) ಅಕ್ಷರದಲ್ಲಿ ಟೈಪಿಸಿ ಕಳುಹಿಸಿ.ಯುನಿಕೋಡ್ ಬಳಸದಿದ್ದಲ್ಲಿ, ಕನ್ನಡ ಅಕ್ಷರಗಳಿಲ್ಲದ ಕಂಪ್ಯೂಟರ್ ಬಳಸುವವರು ಅಂತಹ ಪೋಸ್ಟ್ ಗಳನ್ನು ಓದಲಾರರು. ಏನಾದರೂ ತೊಂದರೆಗಳಾದಲ್ಲಿ ಸಹಾಯ, ಸಲಹೆಗಳಿಗೆ ನಮ್ಮನ್ನು ಸಂಪರ್ಕಿಸಬಹುದು.
ನಿಮ್ಮ ಸೃಜನಶೀಲತೆಗೆ ಒಂದು ಮುಕ್ತ ವೇದಿಕೆ ಕಲ್ಪಿಸುವುದಷ್ಟೇ ಸ್ಪಂದನದ ಸದುದ್ದೇಶ.
ಇದರ ಹಿಂದಿರುವುದು-ಒಂದು ವ್ಯಕ್ತಿಯಲ್ಲ, ಅದೊಂದು ವ್ಯವಸ್ಥೆ ಮಾತ್ರವಲ್ಲದೆ ಚಂದನಕ್ಕಿದು ಪರ್ಯಾಯವಲ್ಲ, ಪೂರಕ ಮಾತ್ರ.
MAIL ID: sbc.spandana@gmail.com