Sunday 29 September 2013

ಉಸಿರು

ಉಸಿರು
“Heart ಅನ್ನೋ engine ನಡೀಬೇಕು ಅಂತಾದ್ರೆ ಉಸಿರು ಅನ್ನೋ basic fuel ಬೇಕು ಅಂತಾರೆ!”
ಉಸಿರು ,ಪ್ರಾಣ,ಜೀವ ಎಲ್ಲಾ ಒಂದೇ.. ಹಾಗೇ ಅವಳು ಕೂಡಾ!

ಹಾಗೇ ಮುಚ್ಚಿದ್ದ ಕಣ್ಣನ್ನ ಮೆಲ್ಲನೆ ತೆರೆದೆ! ಎಲ್ಲಾ ಅಸ್ಪಷ್ಟ! ಎಲ್ಲೋ ದೂರದಿಂದ ಧ್ವನಿ ತೇಲಿ ಬರುತ್ತಿತ್ತು.
“Don’t worry oxygen mask ಹಾಕಿದ್ದೀವಿ,ಉಸಿರಾಟಕ್ಕೇನೂ ತೊಂದ್ರೆ ಇಲ್ಲ,ಸ್ವಲ್ಪ ದಿನದಲ್ಲೇ ಮೊದ್ಲಿಂತರ normal ಆಗ್ತಾರೆ” ಅಂತ!
ಕಣ್ರೆಪ್ಪೆ ಭಾರ ಅಂತ ಅನಿಸಿ ಹಾಗೇ ಕಣ್ಣನ್ನ ಮುಚ್ದೆ,ಕಣ್ಣನ್ನ ಮುಚ್ಚಿದ್ರೂ ತೆರೆದ್ರೂ ಕಾಣೋದು ಬರೇ ಅವಳು!ನನ್ನುಸಿರು!

ಹೌದು ನನ್ನುಸಿರಿಗೆ ಹೆಸರಾದವಳು ಅವಳು ಅಂತ ಹೇಳಿದ್ರೆ Dramatic ಅಂತ ಅನ್ನಿಸಿದ್ರೂ ಬೇರೆ ದಾರಿಯಿಲ್ಲ,ಯಾಕಂದ್ರೇ ನಂಗೆ ನನ್ life ಅಲ್ಲಿ ಅವ್ಳಿಗೆ ಕೊಡ್ಬೇಕಾದ importance ಅದು..
ನನ್ನ ಮೊದಲ ಉಸಿರಾಟದ ನೆನಪಿಲ್ಲದಿದ್ದರೂ,ಉಸಿರು ಅಂದ್ರೆ ಏನು ಅಂತ ತಿಳಿಯೋ ವಯಸ್ಸಿನಿಂದ್ಲೇ ನನ್ನುಸಿರಾಗಿದ್ದವಳು ಅವಳು!
ಬಾಲ್ಯದಲ್ಲಿ ಕೈ ಹಿಡಿದು ಆಟವಾಡ್ತಾ ಇದ್ದ ಕಾಲದಿಂದ್ಲೇ ಜೀವನ ಪೂರ್ತಿ ಅವಳ ಕೈ ಹಿಡಿಯುವ ಕನಸನ್ನೇ ಉಸಿರಾಗಿಟ್ಟು ಕೊಂಡವ ನಾನು..
ಕಾಲ ಸರಿದಂತೆಲ್ಲಾ ಕನಸು ಧ್ಯೇಯವಾಯಿತು,ಆ ಧ್ಯೇಯವೇ ಉಸಿರಾಯ್ತು! ನನ್ನುಸಿರಿಗೆ ನನ್ನೆಲ್ಲಾ ಕನಸನ್ನು ಕೂಗಿ ಹೇಳ್ಬೇಕು, ಒಂದೇ ಕನಸನ್ನು ಇಬ್ರೂ ಕಾಣ್ಬೇಕು ಅಂತೆಲ್ಲಾ ಅನಿಸಿದ್ರೂ ಯಾಕೋ ಹೇಳೋಕಾಗ್ತಾ ಇರ್ಲಿಲ್ಲ..
ಯಾಕಂದ್ರೆ ಅವ್ಳು ಹಾಗೇ! ಹತ್ತಿರ ಬಂದ್ರೇ ಗಾಳಿಯಲ್ಲಿ ನಶೆ ಏರುತ್ತಾ ಇತ್ತು,ಆ ನಶೆ ನನ್ನ ಪಾಲಿಗೆ ಪ್ರೀತಿಯಾಗಿತ್ತು,ಆ ಪ್ರೀತಿಯನ್ನೇ ಉಸಿರಾಡುತ್ತಾ ಇದ್ದವನು ನಾನಗಿದ್ದೆ!
ಹಾಗಂತ ಅವ್ಳಿಗೆ ಇದನ್ನೆಲ್ಲಾ ಹೇಳೋಕೆ ನಂಗೆ ಹೆದ್ರಿಕೆ ಇರ್ಲಿಲ್ಲ, ಆ ಹೇಳುವ ಹೊತ್ತನ್ನು ತುಂಬಾ ತುಂಬಾ special ಆಗಿಸ್ಬೇಕು ಅನ್ನೋದು ನನ್ನ ಕನಸಾಗಿತ್ತು!
ಹದಿಹರೆಯದಲ್ಲಿ ಒಮ್ಮೆ ಮೂಡಿ ಮರೆಯಾಗುವ ಕಾಮನಬಿಲ್ಲಿನಂತ ಪ್ರೀತಿಯು ಅದಲ್ಲ.
ಶುಧ್ಧ ಬೆಳದಿಂಗಳಂತ ಪ್ರೀತಿ ಅದು!
ಅವ್ಳ mummy daddy ಒಪ್ಪೇ ಒಪ್ತಾರೆ ಅಂತ ಭರವಸೆ ಇತ್ತು ನಂಗೆ! ಆದ್ರೂ ಅವರ ಪಾಲಿನ ಉಸಿರನ್ನ ನನ್ನದಾಗಿಸಿ ಕೊಳ್ಳುವ ಮೊದ್ಲು ನಾನು ನನ್ನ ಕಾಲ್ಮೇಲೆ ನಿಂತು ಅವ್ಳನ್ನ ಚೆನ್ನಾಗಿ ನೋಡಿಕೊಳ್ತೇನೆ ಅನ್ನೋ ಭರವಸೆಯ ನಿಟ್ಟುಸಿರನ್ನ ಅವ್ರಲ್ಲಿ ಮೂಡಿಸ್ಬೇಕು ಅಂತ decide ಮಾಡಿದ್ದೇ..
ಕಾಲಾನೂ ಹಾಗೇ! ಉಸಿರಾಡಿದಂತೆ ವೇಗವಾಗಿ ಸರಿಯುತ್ತದೆ ಅಂತಾರೆ. ಅವ್ಳನ್ನೇ ಉಸಿರಾಗಿಟ್ಟುಕೊಂಡ ನನಗೆ ಕಾಲ ಸರಿದದ್ದೇ ಗೊತ್ತಾಗ್ಲಿಲ್ಲ..
ಆವತ್ತು interview ಇತ್ತು. ನನ್ನುಸಿರನ್ನ ಪಡೆಯಲು ಇಡ್ಬೇಕಾದ ಮೊದಲ ಹೆಜ್ಜೆ. Confident ಆಗಿ ಎಲ್ಲಾನೂ Handle ಮಾಡ್ದೆ..Select ಕೂಡಾ ಆದೆ!
ಎಲ್ಲಾ ಕನಸು ಆ ಹೊತ್ತಿಗೆ ಸಾಕಾರಗೊಂಡಿತ್ತು..ಅಲ್ಲೆಲ್ಲಾ ಬರೀ ಸಂತೋಷವೇ ತುಂಬಿ ಕೊಂಡಿತ್ತು. ಅವ್ಳನ್ನ ಬಿಟ್ಟು ಆ ದೂರದ ನಗರಕ್ಕೆ ಹೋಗ್ಬೇಕು ಅಂತ ಬೇಜಾರಾದ್ರೂ ಖುಷಿ ಮಾತ್ರಾ ತುಂಬಾನೇ ಇತ್ತು ನನ್ನಲ್ಲಿ..
ಇನ್ನಾದ್ರೂ ಅವ್ಳಿಗೆ ಹೇಳೋಣಾ ಅಂತ ಅಂದ್ಕೊಂಡೆ ಆದ್ರೆ ಯಾಕೋ ಆ moment ನಾ ತುಂಬಾನೇ special ಮಾಡ್ಬೇಕು, offer letter ಬಂದ ತಕ್ಷಣ ಅವ್ಳ ಮುಂದೆ ನಿಂತು ನನ್ನ ಬದುಕು,ಕನಸು,ಉಸಿರು ಎಲ್ಲಾನೂ ಅವ್ಳಿಗೆ offer ಮಾಡ್ಬೇಕು ಅಂತ ನಿರ್ಧರಿಸಿದೆ…
ಆ ದಿನ ಅವ್ಳ call ಬಂದಿತ್ತು “ hey hai party ಎಲ್ಲೋ interview ನಲ್ಲಿ select ಆದ್ಯಂತೇ!! ಹಾಂ ಒಂದು good news ಗೊತ್ತಾ ನಾನ್ ಕೂಡಾ select ಆದೆ. Same ನಿಂದೇ location ಆದ್ರೆ company ಮಾತ್ರ ಬೇರೆ ಅಷ್ಟೇ.. mummy daddy ಎಲ್ಲಾ ಖುಷಿಯಾಗಿದ್ದಾರೆ,ಅವ್ರಿಗೆ ನನ್ನ ಅಲ್ಲಿಗೆ ಕಳ್ಸೋಕೆ ಏನೂ problem ಇಲ್ಲ, ನೀನಿದ್ದಿಯಾ ಅಲ್ಲಿ ಅಲ್ವಾ so…”
ಸಾಮಾನ್ಯವಾಗಿ ನಾವು ಏನನ್ನ ಬಯಸ್ತೀವೋ ಅದ್ರ ಬಗ್ಗೆ ಕನಸು ಕಾಣ್ತೀವಿ ಅಂತಾರೆ.. ಅವ್ಳ ಮಾತನ್ನ ಕೇಳೀ ನನ್ನ ಕನಸ್ಸಿಗೆ ರೆಕ್ಕೆಯೇ ಮೂಡಿತ್ತು..ಅದು ಸ್ವಚ್ಛಂದವಾಗಿ ಹಾರುತಿತ್ತು!

ಹಾಗೇ ದಿನಗಳು ಉರುಳಿದ್ವು.. ಅದು ಕಾತರದ ಕಾಲ, ಉಸಿರನ್ನ ಬಿಗಿ ಹಿಡಿದು offer letter ಗಾಗಿ ಕಾಯ್ತಾ ಇದ್ದ ಕಾಲ! ಪ್ರತಿ ಉಸಿರಿನಲ್ಲೂ ತವಕ ಇತ್ತು…
ಅವ್ಳ ಕಾಲ್ ಬಂದಿತ್ತು “ hey ನನ್ನ offer letter ಬಂತು ಕಣೋ 2 weeks ನಲ್ಲಿ joining date ಇದೆ! ಏನು prepare ಆಗಿಲ್ಲಾ ಭಯಾ ಆಗ್ತಾ ಇದೆ, ನೀನ್ ಕೂಡಾ ಇಲ್ಲ ಈವಾಗ ಅಲ್ಲಿ.. please ಬೇಗ ಬಂದ್ಬಿಡು wait ಮಾಡ್ತಾ ಇರ್ತೀನಿ” ಅಂತಾ
ನಾನು ನಿಜವಾಗಿಯೂ ಖುಷಿಯಾಗಿದ್ದೆ! ಅವ್ಳ ಖುಷಿಗೋಸ್ಕರ!
ಅವ್ಳು ಹೋದ್ಲು!,ನಾನು ಹೇಳ್ಬೇಕು ಅಂತಾ ಇರೋದೆಲ್ಲಾ ತುಂಬಾ ಹಾಗೇ ಇತ್ತು…
ಯಾಕೋ ಅವ್ಳನ್ನ ಬಿಟ್ಟು ಇರೋದು ಆಗ್ತಾ ಇರ್ಲಿಲ್ಲ.. ನೀರಿಂದ ದೂರ ಆದಾ ಮೀನಿನ ತರಾ ಉಸಿರಾಡೋಕೆ ಕಷ್ಟ ಪಡ್ತಾ ಇದ್ದೆ!!
ಅವ್ಳು ಇದ್ದಲ್ಲಿಗೆ ತೆರಳಿದೆ,ಉಸಿರಿನ ಅನ್ವೇಷಣೆಯಲ್ಲಿ…

ಅನ್ವೇಷಣೆ ಕೇವಲ ಉಸಿರಿಗಾಗಿ ಇರಲಿಲ್ಲ, ಆ ಉಸಿರನ್ನು ಪಡೆಯುವ ಅರ್ಹತೆಗಾಗಿ ಕೂಡಾ ಇತ್ತು.. ಅರ್ಥಾತ್ ಉದ್ಯೋಗಕ್ಕಾಗಿ..
ಕಾಲ ಯಾರಿಗೂ ಕಾಯಲ್ಲ..ಅದು ಉರುಳ್ತಾನೇ ಇತ್ತು. ಅವ್ಳನ್ನ ಸಿಕ್ಕಾಗೆಲ್ಲಾ ನನ್ನೊಳಗೆ ಇರೋ ಪ್ರೀತಿಯ ಆಳಾನಾ ತೋರಿಸ್ಬೇಕು ಅಂತಾ ಅನ್ನಿಸ್ತಾ ಇತ್ತು, ಆದ್ರೆ ಅದು ಸಾಧ್ಯ ಆಗ್ತಾ ಇರ್ಲಿಲ್ಲ..ಕನಸು ಕನಸಾಗೇ ಉಳಿದು ಬಿಡುತ್ತೇನೋ ಅನ್ನಿಸ್ತಾ ಇತ್ತು…..
ಕನಸು! ಕನಸು ನನಸಾಗೋ ದಿನಾನೇ ಬಂದಿತ್ತು.. ಉಸಿರು ಬಿಗಿ ಹಿಡಿದು ಕಾಯ್ತಾ ಇದ್ದ ದಿನ! Offer letter ಕೈಗೆ ಬಂದಿತ್ತು! ಇದುವರೆಗೆ ಕಂಡ ಕನಸೆಲ್ಲಾ ವಾಸ್ತವ ಅನ್ನಿಸೋಕೆ ಶುರುವಾಯ್ತು..ಅದೇ ದಿನ ಅವ್ಳಿಗೆ call ಮಾಡಿ ಹೇಳ್ದೆ “ ನಿಂಗೊಂದು surprise ಇದೆ, please meet ಆಗು ಈವತ್ತು” ಅಂದೆ…
ಆ ಮುಂಜಾನೆ ಯಾಕೋ ನಂಗೋಸ್ಕರನೇ ಮೂಡಿತ್ತು ಅನ್ನಿಸ್ತಾ ಇತ್ತು ! ತುಂಬಾ ಖುಷಿಯಿಂದ ಅವ್ಳನ್ನ meet ಆಗ್ಬೇಕು ಅಂತಾ prepare ಆಗಿ bike ಮೇಲೆ ಕೂತೆ..ಎಷ್ಟು kick ಹೊಡ್ದ್ರೂ start ಆಗ್ತಾ ಇರ್ಲಿಲ್ಲ.. engine ನಲ್ಲಿ problem ಇರ್ಬೇಕು ಅಂತ ಅನ್ನಿಸ್ತು… ಆದ್ರೆ ಪ್ರೀತಿಗಿರೋ ಜಾದೂನೋ ಏನೋ ನಿರ್ಜೀವ engine ಕೂಡಾ start ಆಯ್ತು…

ನನ್ನ ಉಸಿರಾಟ ಜೋರಾಗಿ ನಂಗೇ ಕೇಳಿಸ್ತಾ ಇತ್ತು,ಯಾಕಂದ್ರೇ ಅವ್ಳು ನನ್ನ ಮುಂದೆ ನಿಂತಿದ್ಲು! ವರ್ಷಗಳಿಂದ ಕೂಡಿಟ್ಟ ಕಾತರತೆಯ ಅಣೆಕಟ್ಟನ್ನ ಒಡೆದು ಅಲ್ಲೆಲ್ಲಾ ಪ್ರೇಮದ ಪ್ರವಾಹವನ್ನ ಹರಿಸೋ ತವಕ ಇತ್ತು ನನ್ನಲ್ಲಿ..
ಅವ್ಳೇ ಷುರು ಮಾಡಿದ್ಲು “ಏನೋ surprise ಕೊಡ್ಬೇಕು ಅಂತಾ ಇದ್ದೀಯಾ? ನಂಗೂ ಕೂಡಾ surprise ಕೊಡೋದಿದೆ ನಿಂಗೆ!”
ಅಂತ ತುಂಬಾನೇ ಖುಷಿಯಲ್ಲಿ ಹೇಳಿದ್ಲು..ಯಾಕೋ ಜೀವನ ತುಂಬಾ ಸುಂದರ ಅಂತಾ ಅನ್ನಿಸ್ತು.. first ಅವ್ಳು ಏನು ಹೇಳ್ತಾಳೆ ಅನ್ನೋದನ್ನ ಕೇಳೋಣ ಅಂತಾ “ ಮೊದ್ಲು ತಮ್ಮ surprise ಏನು ಅಂತಾ ಹೇಳೀ ladies first ನಂದು ದೊಡ್ಡ surprise so ಅದನ್ನ last ಗೆ ಇಡೋಣಾ ನಿಂದು ಹೇಳು “ ಅಂತಾ ಅಂದೇ
ಅವ್ಳು ನನ್ ಕೈಗೆ letter ಕೊಡ್ತಾ “ನನ್ marriage fix ಆಗಿದೆ ! next month ನನ್ marriage..ಇದು first invitation, Mummy daddy ಎಲ್ಲಾ first invitation ನಾ ದೇವ್ರ ಮುಂದೆ ಇಡ್ಬೇಕೂ ಹಾಗೇ ಹೀಗೆ ಅಂತಾರೆ ಆದ್ರೆ ಇದು ನಿಂಗೆ because you are most important person ನನ್ life ಅಲ್ಲಿ ಅಂತ….

ಉಸಿರು ನಿಂತ ಹಾಗಾಯ್ತು!!! ವಾಸ್ತವ ಅಂದುಕೊಂಡ ಕನಸು ಮತ್ತೆ ಕನಸಾಯ್ತು! ಉಸಿರಾಡೋದನ್ನೇ ಮರೆತು ಲಗ್ನಪತ್ರಿಕೆಯನ್ನು ನೋಡ್ತಾ ಇದ್ದೆ…ಆಗ ತಾನೇ print ಮಾಡಿಸಿಕೊಂಡು ಬಂದಿದ್ರಿಂದ್ಲೇನೋ ಸ್ವಲ್ಪ ಬಿಸಿಯಾಗಿತ್ತು.. ಆ ಶಾಖ ನನ್ನನ್ನೂ ಆವರಿಸಿತು!!!
“hey ನಿನ್ surprise ಏನೋ?” ಅಂತ ಕೇಳಿದ್ಲು .. offer letter ನಾ ಅವ್ಳ ಕೈಗೆ ಕೊಟ್ಟು “ನಿನ್ದಕ್ಕಿಂತ ದೊಡ್ಡ surprise ಅಲ್ಲಾ” ಅಂತ ಅಂದೇ…
ಅವ್ಳ ಖುಷಿ ಜಾಸ್ತಿ ಆಯ್ತು!! “wow really ಇವತ್ತು ನಂಗೆ lucky day, I am really Happy” ಅಂದ್ಲು…
ಅವ್ಳ ಖುಷಿ ನೋಡಿ ಖುಷಿ ಪಡ್ಲಾ ಇಲ್ಲಾ ನನ್ ಅವಸ್ಥಗೆ ಅಳ್ಲಾ ಅಂತ ಅರ್ಥ ಆಗ್ಲಿಲ್ಲ..
ಏನೋ ನೆಪ ಹೇಳಿ ಅಲ್ಲಿಂದ ಹೊರಗೆ ಬಂದು bike start ಮಾಡ್ದೆ!...ನಂಗೆ ಇನ್ನೂ ಕಷ್ಟ ಕೊಡ್ಬಾರ್ದೂ ಅಂತಾ ಏನೋ ಒಂದೇ kick ಗೆ start ಆಯ್ತು…
ತುಂಬಾ fast ಆಗಿ ಹೋಗ್ತಾ ಇದ್ದೆ…ಎಲ್ಲಾ ನೆನಪುಗಳನ್ನ,ಕನಸನ್ನ ತುಂಬಾ ತುಂಬಾ ಹಿಂದೆ ಬಿಡ್ಬೇಕು ಅಂತಾ fast ಆಗಿ ಹೋಗ್ತಾ ಇದ್ದೆ…
“heart ಅನ್ನೋ engineಗೆ ಉಸಿರು ಅನ್ನೋ basic fuel ಬೇಕು ಅಂತಾರೆ… ಉಸಿರೇ ಇಲ್ಲಾ ಅಂದ್ರೇ heart break ಆಗೋದು ಸಾಮಾನ್ಯ…ಹಾಗೇ ನನ್ bike engine ಕೂಡಾ ! ಜೀವಾ ಇರೋ heart ತಾನೇ damage ಆಗಿರೋವಾಗಾ ನಿರ್ಜೀವ engine ಏನು ಮಾಡುತ್ತೇ…ತುಂಬಾ speed ಆಗಿ ಹೋಗ್ತಾ ಇರೋವಾಗ engine ಹಾಳಾಯ್ತು.. ನೆನಪುಗಳಿಗೇ break ಹಾಕೋಕೆ ಆಗದವನಿಗೆ bike ನಾ break press ಮಾಡ್ಬೇಕು ಅನ್ನೋದೇ ಮರೆತು ಹೋಯ್ತು…ನನ್ life ತರಾನೇ bike ಕೂಡಾ skid ಆಯ್ತು… ಮುಂದಿಂದ ಬರ್ತಾ ಇದ್ದ bus ಒಂದೇ ನೆನಪು....

“Don’t worry oxygen mask ಹಾಕಿದ್ದೀವಿ ಉಸಿರಾಟಕ್ಕೇನೂ ತೊಂದರೆ ಇಲ್ಲ.. “
Doctor ಹೇಳ್ತಾ ಇರ್ಬೇಕೂ… ಅವ್ರ ಮಾತು ಕೇಳಿ ನಗು ಬಂತು…”ಉಸಿರಾಟಕ್ಕೇನೂ ತೊಂದ್ರೆ ಇಲ್ಲ ಅನ್ನೋದನ್ನ ಕೇಳಿ!!!
ನನ್ friend ನಿಂತಿದ್ದ ಪಕ್ಕದಲ್ಲಿ..ಅವ್ನು ಇದ್ಕಿಂತ ಜಾಸ್ತಿ ಮಾಡೋದು ಏನೂ ಇರ್ಲಿಲ್ಲ…
ಎಷ್ಟು ದಿನಾ ಹಾಗೇ ಕಳೀತು ಗೊತ್ತಾಗ್ಲಿಲ್ಲ, ಅವ್ಳೂ ಬಂದು ನೋಡಿ ಹೋಗಿರ್ಬೇಕು!!...
ಆವತ್ತು ಮುಂಜಾನೆ oxygen mask ತೆಗೆದ್ರು…ಯಾಕೋ first time ಉಸಿರಾಡೋದು ತುಂಬಾ ಕಷ್ಟ ಅನ್ನಿಸ್ತು….
ಹಾಗೇ ಸ್ವಲ್ಪ ಹೊತ್ತಿನ ನಂತರ ಎದ್ದು ನಡೆಯೋಕೆ try ಮಾಡ್ದೆ….
ಪಕ್ಕದ ವಾರ್ಡನಲ್ಲಿ ಒಬ್ಬ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ bed ಮೇಲೆ ಹೂಗುಚ್ಛ ಇಡ್ತಾ ಇದ್ದ… ಯಾಕೆ ಅಂತ ಕೇಳೋಣಾ ಅನ್ನಿಸ್ತು ಕೇಳ್ದೆ…
ಅದ್ಕೆ ಅವ್ನು “ ನಾನು ನಿನ್ನ ವಯಸ್ನಲ್ಲಿ ಇರೋವಾಗ ನನ್ನ ಹೃದಯಕ್ಕೆ ಒಬ್ಳು ತುಂಬಾ ಹತ್ತಿರದವಳು ಇದ್ಲು.. ಆ ಹೃದಯಕ್ಕೆ ಹತ್ತಿರವಾಗಿದ್ದವಳು ದೂರವಾದ ಜಾಗ ಇದು so ಅವ್ಳ ನೆನಪಿಗೆ ಪ್ರತೀ ಪರ್ಷದ ಆ ದಿನದಂದು ಇಲ್ಲಿ ಹೂ ಗುಚ್ಛ ಇಡ್ತೇನೆ” ಅಂದ…
ಅದ್ಕೆ ನಾನು “ ಅಲ್ಲಾ uncle ಅವ್ಳು ಇಲ್ಲಾ ಅಂದ್ರೂ ಬದ್ಕೋದು ಸಾಧ್ಯಾ ಆಯ್ತಾ ನಿಮ್ಗೆ?”
ಅದ್ಕೆ ಅವ್ನು “ life ನಲ್ಲಿ ಕಳ್ಕೊಳ್ಳೋದು ತುಂಬಾ ಇರುತ್ತೆ,ಹಾಗೇ ಪಡೆಯೋದೂ ಕೂಡಾ..ಅವ್ಳು ಹೋದ ನಂತರ ಅವ್ಳ ಹೆತ್ತವರು
ನನ್ನ ಹೆತ್ತವರಾದ್ರು ಹೀಗೇ ಅವ್ರಂತೇ ಮಕ್ಳನ್ನ ಕಳ್ಕೊಂಡ,ಮಕ್ಳಿಂದ ತಿರಸ್ಕೃತಗೊಂಡ ಹೆತ್ತವರ ಜೊತೆ ಇರ್ತೀನಿ, I mean ವೃಧ್ಧಾಶ್ರಮ ನಡೆಸ್ತಾ ಇದ್ದೀನಿ.. life ಯಾವತ್ತೂ ನಿಲ್ಲೋದಿಲ್ಲ… ಅದು ನಡೆಯೋದು ಕೇವಲ ಒಂದೇ ಒಂದು ಸತ್ಯದಿಂದ ಅದು HOPES ಅಥವಾ ಭರವಸೆ!!!” ಅಂತ ಹೇಳೀ ಹೊರಟು ಹೋದ್ರು….
ಯಾರದ್ದೋ ಹೆತ್ತವರನ್ನ ತನ್ನ ಹೆತ್ತವರಂತೆ ನೋಡ್ಕೊಂಡು ತನ್ನೆಲ್ಲಾ ನೋವನ್ನ ಮರೀತಾ ಇದ್ದ ಅವನನ್ನ ನೋಡಿ ನನ್ ಬಗ್ಗೆ ನಾಚಿಕೆ ಆಯ್ತು….
Life ಅಂದ್ರೇ ಅಷ್ಡೇ full of blessings…. ನನ್ನ ತುಂಬಾನೇ ಪ್ರೀತಿಸೋ parents,ನನ್ನ ಬೇಸರಾನ ಮರೆಸೋಕೆ ಶತಪ್ರಯತ್ನ ಮಾಡೋ friends ಎಲ್ಲಾ ಇದ್ರು…ಇದಕ್ಕಿಂತ ಜಾಸ್ತಿ ಏನು ಬೇಕು ಅನ್ನಿಸ್ತು…
ಹಾಗೇ ಹೊರಗೆ ಬಂದೆ…ಮುಂಜಾನೆ ತಂಗಾಳಿ ಬೀಸುತಿತ್ತು..! ಆ ತಂಗಾಳಿಯಲ್ಲೇನೋ ಬೆರೆತಿತ್ತು…ಅದನ್ನು ಉಸಿರಾಡಿದಾಗಲೆಲ್ಲಾ ಎಲ್ಲಾ ಹಗುರವಾದಂತೆ ಅನ್ನಿಸ್ತು…ಆ ಜೀವನೋತ್ಸಾಹದ ಉಸಿರು ಭರವಸೆ ಆಗಿತ್ತು…
ಹೊಸ ಉಸಿರಿನೊಂದಿಗೆ ಹೊಸ ಸೂರ್ಯೋದಯವಾಗುತ್ತಿತ್ತು…..
ಅಲ್ಲೆಲ್ಲಾ ಹೊಸ ಬೆಳಕು ಆವರಿಸಿತ್ತು…!!!!!!

ಕಥೆಗಾರ : ಶಿವಾನಂದನ ರಾವ್.

ಕಪ್ಪು – ಬಿಳುಪು

ಕಪ್ಪು -- ಬಿಳುಪು

“ You are an escapist” ನೀನು ಒಬ್ಬ ಪಲಾಯನವಾದಿ! “
ಅವ್ಳ ಸಿಹಿಯಾದ ಕಂಠದಿಂದ ಕಂಚಿನಂತ ತೀರ್ಪು ಕೊಟ್ಲು!!
“ಯಾಕ್ ಹೀಗೆ ಹೇಳ್ತೀಯಾ?” ಅಂತ ಕೇಳಿದ್ರೆ ಅವ್ಳು “ಮತ್ತೆ ಕಪ್ಪು ಇಷ್ಟಾನಾ ಬಿಳಿ ಇಷ್ಟಾನಾ ಅಂತ ಕೇಳಿದ್ರೆ ಕಪ್ಪು ಅಂತೀಯಲ್ಲಾ” ಅಂತ ಅವ್ಳು ಅಂದ್ಲು.
ನಾನಂದೇ “ಅಲ್ಲಾ ಕಪ್ಪು ಅಂದ್ರೆ ಕತ್ತಲು ಎಲ್ಲಾ ಮರೆಯಾಗೋ ಹೊತ್ತು,ಕತ್ತಲಲ್ಲಿ ನಮ್ಮ ಮುಖದ ಭಾವನೇನೇ ಕಾಣಲ್ಲ,ಕತ್ಲಲ್ಲಿ ಸತ್ಯ ಸುಳ್ಳು ಎಲ್ಲಾ ಒಂದೇ” ಅಂತ ಅಂದೆ.
ಅದ್ಕೆ ಅವ್ಳು “ಇದ್ಕೇ ನಿನ್ನ ಪಲಾಯನವಾದಿ ಅನ್ನೋದು! ನೀನು ಬೇರೆಯವ್ರಿಂದ ಅಲ್ಲಾ ನಿನ್ನಂದ್ಲೇ ನೀನು ಓಡಿಹೋಗೋಕೆ ನೋಡ್ತೀಯಾ.. ಕತ್ಲು ಎಲ್ಲಾನೂ ಮುಚ್ಚಿಡ್ಬೋದು ಆದ್ರೆ ಅದು ಒಂದು ಚಿಕ್ಕ ಹಣತೆ ಬೆಳಕಿನಂದ ಅದು ಮಾಯ ಆಗುತ್ತೇ..

ಹೌದು ಅವ್ಳು ಹೇಳ್ತಾ ಇದಹದ ಹಾಗೆ ನಾನು ಪಲಾಯನವಾದಿ or any escapist.. ! ಮೊದ್ಲಿಂದನೂ ಯಾವುದ್ರಲ್ಲೂ ಗಟ್ಟಿಯಾಗಿ ನಿಂತವನಲ್ಲ.! ಚಂಚಲ ಅಂದ್ರೇ ಚೆನ್ನಾಗಿರುತ್ತೇ.. ಎಲ್ಲರೂ ಬೆಳಕನ್ನ ಇಷ್ಟ ಪಟ್ರೇ ನಾನು ಕತ್ಲನ್ನ ಇಷ್ಟ ಪಟ್ಟೆ. ಬೆಳಕಲ್ಲಿ ಕಾಣುವ ಪರಿಚಿತ ಆದ್ರೇ ಮನಸ್ಸಿಗೆ ಅರ್ಥವಾಗ್ದೇ ಇರೋ ಅಪರಿಚಿತ ಮಿತ್ರರು,ಬಂಧು ಬಳಗ ಎಲ್ಲಕ್ಕಿಂತ ಇವೆಲ್ಲರನ್ನು ಮರೆಸೋ ಕತ್ಲು ಇಷ್ಟಾ ನಂಗೇ!
ಮುಂಜಾನೆ ಮೂಡುವ ಸೂರ್ಯನನ್ನಾ ಆರಾಧಿಸುತ್ತಾ “ಧಿಯೋಯೋನ ಪ್ರಚೋದಯಾತ್” ಜ್ಞಾನದ ಬೆಳಕನ್ನು ಹರಿಸು ಅಂತ ಪ್ರಾರ್ಥಿಸುವ family ಯಲ್ಲಿ ನನ್ನಂತ ತಮಃ ಪ್ರಿಯ ಹೇಗೆ ಹುಟ್ಟಿದ ಅನ್ನೋದೇ ಆಶ್ಚರ್ಯ!.

ಹಾಗಂತ ಅವ್ಳು ಏನೂ ಕಪ್ಪು ಅಲ್ಲ.. ಚಂದ್ರನ ಬೆಳಕಂತೇ ಇದ್ಲು ಅವ್ಳು..
“ಎಲ್ಲದ್ರಲ್ಲೂ ಕಪ್ಪು ಇಷ್ಟ ಪಡ್ತಿರೋ ನಿಂಗೆ ನನ್ನಂತ ಬಿಳಿ ಜಿರಳೆ ಯಾಕಪ್ಪಾ ಇಷ್ಟ ಆದ್ಲು?” ಅಂತ ಕೇಳಿದ್ರೆ, ನಾನು “ನೀನು ತುಂಬಾ ಬೆಳ್ಳಗಿದ್ದೀಯಾ ನೀನು black ಡ್ರೆಸ್ ಹಾಕಿದ್ರೇ ನಿಂಗಿಂತ black ಡ್ರೆಸ್ ಗೇ ಕಳೆ ಬರುತ್ತೇ ಅಂತ ಉತ್ತರ ಕೊಟ್ಟು escape ಆಗ್ತಾ ಇದ್ದ escapist ನಾನು!..
ಹಾ ಕಪ್ಪು ಡ್ರೆಸ್! ನಾನ್ ಇಷ್ಟ ಪಟ್ಟಿದ್ದಕೋ ಅಥ್ವಾ ಪ್ರಪಂಚದ ಕಪ್ಪನ್ನೆಲ್ಲಾ ಕಿತ್ತು ಹಾಕ್ಬೇಕು ಅಂತಾನೇನೋ ಅವ್ಳು ಕಪ್ಪು ಕೋಟು ತೊಟ್ಕೊಂಡ್ಲು ಅರ್ಥಾತ್ law join ಆದ್ಲು..
ಯಾವಾಗ್ಲೂ ಬಿಳಿಯಾದ ನ್ಯಾಯದೇವತೇನ ತೋರಿಸಿ “ ನೋಡು ಸತ್ಯ ಅಂದ್ರೇ ಬಿಳಿ ಅದ್ಕೇ ಅವ್ಳು ಬಿಳಿ ಇನ್ನಾದ್ರೂ ಬೆಳಕನ್ನ ಪ್ರೀತಿಸು ,ಸತ್ಯ ವಾಸ್ತವಾನ ಪ್ರೀತಿಸು! “ ಅಂತ
ಅದ್ಕೆ ನಾನು ಆ ದೇವತೆಯ ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟೀನೇ ಚೆಂದ ಅನ್ತಾ ಇದ್ದೆ..
“ನಂಗೆ ನಿಜವಾಗ್ಲೂ ಭಯ ಆಗ್ತಾ ಇದೆ.. ಎಲ್ಲಾದ್ರಿಂದ್ಲೂ ಓಡಿಹೋಗೋ ನೀನು ನನ್ನ ಬಿಟ್ಟು ಹೋಗಲ್ಲ ಅನ್ನೋದಕ್ಕೆ Guarantee ಏನು?
ಭಯ! ಭಯದ ಬಣ್ಣ ಕಪ್ಪು ಅಂತಾರೆ. ಆ ಕಪ್ಪು ಬಣ್ಣ ಎಲ್ಲಾ ಬಣ್ಣಾನೂ ನುಂಗಿ ಹಾಕ್ತು! ಅವ್ಳ ಭಯ ನಿಜ ಆಯ್ತು!

ಬೆಳದಿಂಗಳಂತ ಪ್ರೀತಿ ಕೊಡ್ತಿದ್ದ ಅವ್ಳನ್ನಾ ಮತ್ತೆ ಎಲ್ಲಾ ಎಲ್ಲಾ ಬಿಟ್ಟು ಓಡಿ ಹೋಗ್ಬೇಕು ಅನ್ನಿಸ್ತಾ ಇತ್ತು.
ಯಾಕಂದ್ರೇ ಹುಟ್ಟಿದಾಗಿನಿಂದ ನಾನು ಪಲಾಯನವಾದಿ!
ನನ್ನಿಂದ್ಲೇ ನಾನು ಆತ್ಮ ಸಾಕ್ಷಿಯ ವಿರುಧ್ಧ ಓಟಕ್ಕಿಳಿದೆ!

ಭಾರತದಲ್ಲಿ ಯಾರಾದ್ರೂ ಎಲ್ಲಾ ಬಿಟ್ಟು ಪಲಾಯನ ಮಾಡಿದ್ರೆ ಅದು ಹಿಮಾಲಯಕ್ಕೇ!.. ನಾನೂ ಓಡಿದ್ದು ಅಲ್ಲಿಗೇ..
ಅಲ್ಲಿ ಹಿಮದಿಂದ ನೆಲಾನೂ ಬಿಳಿ ಮೋಡದಿಂದ ಆಕಾಶಾನೂ ಬಿಳಿ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಹೆದ್ರಿಸಿದ್ದು ಅಲ್ಲಿನ ಜ್ಙಾನದ ಬೆಳಕು.
ಸಾಧು ಸಂತರು ಹರಿಸಿದ ಜ್ಙಾನದ ಬೆಳಕಿನಿಂದಲೋ ಏನೋ ಅಲ್ಲಿ ಎಲ್ಲಾನೂ ಬಿಳಿ..
ನನ್ನೊಳಗಿನ ಕತ್ತಲಿಗೆ ಭಯ ಶುರುವಾಯ್ತು!
ಎಂದಿನಂತೇ ಬೆಳಕಿನಿಂದ ಓಡುವಂತೇ ಮತ್ತೆ ಆ ಬೆಳಕನ್ನು ಬಿಟ್ಟು ಕತ್ತಲನ್ನೇ ಜೀವಾಳವಾಗಿಟ್ಟು ಕೊಂಡ ಆ ಮಹಾನಗರಿಗೆ ಬಂದೆ.
ನಗರದ ಝಗಮಗ ಬೆಳಕಿನಲ್ಲೂ ಜನರ ಮನದ ಕತ್ತಲನ್ನು ಕಂಡು ಖುಷಿ ಪಟ್ಟೆ.
ಕತ್ತಲನ್ನೇ ಅಸ್ತ್ರವಾಗಿಸಿ ಅವರ ಮನದ ಕತ್ತಲನ್ನು ಇನ್ನಷ್ಟು ದಟ್ಟವಾಗಿಸಿದೆ,, ಕಪ್ಪು ಧಂಧೆ,ಕಪ್ಪು ಹಣ ಹೀಗೇ ಎಲ್ಲಾನೂ ಕಪ್ಪಾಯ್ತು.ಜನರ ಮನದ ಕಪ್ಪು ಛಾಯೆಯಾಗಿ ಭಯವನ್ನು ಹುಟ್ಟಿಸಿದ್ದೆ..ಕತ್ತಲು ನನ್ನನ್ನು ಬಾಚಿ ತಬ್ಬಿಕೊಂಡಿತ್ತು..

ನನ್ನ ಕಪ್ಪಿನ ಮೇಲಿನ ಕುರುಡು ಪ್ರೀತಿ ಸಾವಿರಾರು ಅಮಾಯಕರನ್ನು ಬಲಿ ತೆಗೆದು ಕೊಂಡಿತ್ತು! ಅಂತ ಅಮಾಯಕರಲ್ಲಿ ಅವನೂ ಒಬ್ಬ..
ಆ ಅಮಾಯಕನ ಶವ ಸಂಸ್ಕಾರಕ್ಕಾಗಿ ಹೀಗೇ ತೆರಳಿದ್ದೆ.. ಮೊದಲ ಬಾರಿ ನನ್ನ ಸಾಧನೆಯ ಫಲಿತಾಂಶ ನೋಡಲು…
ಅಲ್ಲಿ ಅವನನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಬಿತೆಯ ಮೇಲೆ ಇಟ್ಟಿದ್ದರು !
ಸಂಜೆಯ ನಸುಗತ್ತಲನ್ನು ಬಿಟ್ಟರೆ ಬೇರೆ ಎಲ್ಲಾ ಬಿಳಿ ಅಲ್ಲಿ. ಬಂದು ಬಾಂಧವರೆಲ್ಲಾ ಬಿಳಿ ವಸ್ತ್ರ ಉಟ್ಟಿದ್ದರು.ನಾನೇ ಅವನ ಸಾವಿಗೆ ಕಾರಣ ಅಂತ ಗೊತ್ತಿದ್ದರೂ ಅವರೊಳಿಗಿನ ಕಪ್ಪು ಭಯ ನನ್ನಿಂದ ಅವರನ್ನು ದೂರ ಇಟ್ಟಿತ್ತು.
ಅಷ್ಟರಲ್ಲಿ ಪುಟ್ಟ ಬಾಲಕ ಒಬ್ಬ ಬಂದು “ ಅಂಕಲ್ ನನ್ನ dady ಸತ್ತು ಹೋಗಿದ್ದಾರೆ ಅಂತೆ ಅದ್ಕೇ ಎಲ್ಲಾರೂ ಬಿಳಿ ಬಟ್ಟೆ ಹಾಕಿಕೊಂಡಿದ್ದಾರೆ ನೀವ್ಯಾಕೆ ಕಪ್ಪು ಬಟ್ಟೆ ಹಾಕಿಕೊಂಡಿದ್ದೀರಾ “
ಅಲ್ಲೆಲ್ಲೋ ಬೆಳ್ಳಿ ಮಿಂಚು ಹೊಳೆದಂತಾಯ್ತು.. ಎಲ್ಲಿ ಅಂತ ನೋಡಿದ್ರೆ ಅದು ಆ ಹುಡುಗನ ಕಣ್ಣಲ್ಲಿ.. ಸತ್ಯ ಮತ್ತು ಮುಗ್ಧತೆಯ ಬೆಳಕು, ಅದು ಸ್ಪಷ್ಟವಾಗಿ ಕಾಣುತ್ತಿತ್ತು..
ನನ್ನೊಳಗಿನ ಕಪ್ಪು ಕೂಡ ಅದುರಿ ಹೋಯ್ತು. ಆ ಅಮಾಯಕನ ಶವ ಉರಿದಂತೆಲ್ಲಾ ಅಲ್ಲಿದ್ದ ಕತ್ತಲು ಮಾಯವಾಗ್ತಾ ಇತ್ತು. ನನ್ನೊಳಗಿನ ಕತ್ತಲು ಕೂಡಾ,,
ನನ್ನೊಳಗಿನ ಕತ್ತಲನ್ನೆಲ್ಲಾ ಕಳೆದು ಕೊಳ್ಳ ಬೇಕೆಂದು ನ್ಯಾಯಕ್ಕೆ ಶರಣಾದೆ….
ಅದು ನ್ಯಾಯಾಲಯ. ಏನೋ ಅಲ್ಲಿದ್ದ ಬೆಳಕು ಇಷ್ಟವಾಗ್ತಾ ಇತ್ತು..
ಅಷ್ಟರಲ್ಲಿ ಅವಳು ಬಂದಳು.. ಅದೇ ಬಿಳಿ ಹುಡುಗಿ.. ನ್ಯಾಯಾಧೀಶರ ಪೀಠದಲ್ಲಿ ಕುಳಿತುಕೊಂಡ್ಳು..

ಹೇಳಲು ಏನಾ ಇರ್ಲಿಲ್ಲ! ಅವಳು ಕಪ್ಪು ಕೋಟಿನಲ್ಲಿ 20 ವರ್ಷದ ನಂತರನೂ ಸುಂದರವಾಗಿ ಕಾಣ್ತಾ ಇದ್ಲು.
ಕಲಾಪ ಶುರುವಾಯ್ತು.ನಾನೇ ಅಪರಾಧಿ ಅಂತೆಲ್ಲಾ ನನ್ನ ಅಪರಾಧವನ್ನೆಲ್ಲಾ ಒಪ್ಪಿಕೊಣಡ್ರೂ ನನ್ನ ಸುತ್ತಲಿನ ನಾನೇ ನಿರ್ಮಿಸಿದ ಕಪ್ಪು ಸೈನ್ಯ ಬಿಡಲಿಲ್ಲ. ನಾನು ಶರಣಾದರೆ ನನ್ನ ಕಪ್ಪು ಹಣದ ಚಿಂತೆ ಅವರಿಗೆ.
ನಾನು ಮತಿವಿಕಲ,ಭ್ರಾಂತ ಅಂತ ಕಪ್ಪು ಕೋಟಿನ ವಕೀಲರು ವಾದಿಸುತ್ತಾ ನಾನು ಶಿಕ್ಷೆಗೆ ಅರ್ಹನಲ್ಲ ಅಂತ ವಾದಿಸಿದ್ರು,ಸಾಬೀತು ಪಡಿಸಿದ್ರೂ ಕೂಡಾ!
“ಶಿಕ್ಷಿಸಿ ಶಿಕ್ಷಿಸಿ ಅಂತ ಅತ್ತು ಕೊಂಡ್ರೂ ಕೂಡಾ ಅದು ವ್ಯರ್ಥವಾಯ್ತು…
ಅವಳು “ನೀನು ಒಬ್ಬ ಮತಿ ವಿಕಲ ಭ್ರಾಂತ ಇರದೇ ಇರಬಹುದು. ಆದ್ರೆ ನೀನು ಒಬ್ಬ escapist. ಇದುವರೆಗೂ ಪ್ರೀತಿಸುತ್ತಾ ಬಂದ ಕಪ್ಪನ್ನಾದರೂ ಶಾಶ್ವತವಾಗಿ ಇಟ್ಟು ಕೊಂಡಿದ್ದೀಯಾ? ಅದರಿಂದಲೂ ಪಲಾಯನ. ವಾದ ಪ್ರತಿವಾದದಿಂದ ನೀನು ಮತಿವಿಕಲ ಎಂದು ಸಾಬೀತಾಗಿರುವುದರಿಂದ ನೀನು ಶಿಕ್ಷೆಗೆ ಅರ್ಹನಲ್ಲ,ನಿನ್ನನ್ನು ಶಿಕ್ಷಿಸದೇ ಬಿಡುವುದೇ ನಿಂಗೆ ಅತಿ ದೊಡ್ಡ ಶಿಕ್ಷೆ!…

ನಾನು ಪ್ರಯತ್ನಿಸಿದಷ್ಟು ಕಪ್ಪು ಮತ್ತೆ ನನ್ನ ಆವರಿಸುತಿತ್ತು…
ಅಷ್ಟರಲ್ಲಿ ಏನೋ ದೊಡ್ಡ ಸದ್ದು! ಗುಂಡಿನ ಸದ್ದು.. ನಾನು ನನ್ನ ಎದೆ ನೋಡಿಕೊಂಡ್ರೆ ಅಲ್ಲಿ ಕಪ್ಪು ರಂಧ್ರ. ಯಾರೋ ಅಮಾಯಕನ ಸಾವಿಗೆ ಪ್ರತೀಕಾರವಾಗಿತ್ತು!
ಎದೆಯಿಂದ ಸುರಿಯುತ್ತಿರುವ ರಕ್ತ ಕೂಡಾ ಕಪ್ಪು ಅನ್ನಿಸ್ತಾ ಇತ್ತು.. ಹೌದು ಕಪ್ಪು ಹೃದಯದ ಕಪ್ಪು ರಕ್ತ!
ಆದ್ರೂ ಏನೋ ತಂಪಾದಂತೆ ಅನ್ನಿಸ್ತಾ ಇತ್ತು.. ಎಲ್ಲಾ ಕಡೆ ಕತ್ತಲು ಆವರಿಸಿದಂತೆ ಅನ್ನಿಸ್ತು!
ನ್ಯಾಯದೇವತೆಯನ್ನ ನೋಡಿದೆ. ಆ ದೇವತೆಯ ಕಣ್ಣಿಗೆ ಕಟ್ಟಿದ್ದ ಕಪ್ಪು ಪಟ್ಟಿ ಹಾರಿ ಹೋಗಿತ್ತು. ಆ ದೇವತೆಯ ಬಿಳಿ ಬಣ್ಣವೇ ಕೊನೆಯ ಬಣ್ಣ!

ನನ್ನೊಳಗೆ ಜನ್ಮದಿಂದ ಆವರಿಸಿದ್ದ ಕತ್ತಲು ಮಾಯವಾಗಿ ಅಲ್ಲಿ ಕೇವಲ ಶುಭ್ರ,ಶಾಂತ,ಶ್ವೇತ ವರ್ಣ ಮಿನುಗುತ್ತಿತ್ತು!!!!!.....


ಕಥೆಗಾರ : ಶಿವಾನಂದನ ರಾವ್.