ನೀಲಿ
“ನೀಲೆ ನೀಲೆ ಅಂಬರ್ ಸೇ ಚಾಂದ್ ಜಬ್ ಆಯಾ ಹೇ!”
old ಹಿಂದಿ ಸಾಂಗ್ ಅವ್ಯಾಹತವಾಗಿ FM ನಲ್ಲಿ ಬರ್ತಾ ಇತ್ತು.!
ಒಂದ್ ಟೈಮ್ ನಲ್ಲಿ ನನ್ನ ರಿಂಗ್ ಟೋನ್ ಆಗಿದ್ದ ಸಾಂಗ್!
ಈ ಎಲ್ಲಾ ನೀಲಿ ಹುಚ್ಚಿನ ಆರಂಭ ಆ ಹುಡುಗಿಯ ನೀಲಿ
ಕಣ್ಗಳಿಂದ!!... ಸಾಗರದಷ್ಟು ನೀಲಿಯಾಗಿದ್ದ ಅವಳ ಕಣ್ಗಳಲ್ಲೇ ಮುಳ್ಗಿ ಹೋಗಿದ್ದೆ.!! ಅವ್ಳ ಕಣ್ಗಳಲ್ಲೇ
ಕಣ್ಣಿಟ್ಟು,ಅವ್ಳ ನೀಲಿ ಕಂಗಳಲ್ಲಿ ನನ್ನೇ ನೋಡ್ತಾ
“ ಈ ಕಣ್ಣಿಗೆ Full time ರೆಪ್ಪೆ ಆಗೋ ಚಾನ್ಸ್
ಸಿಕ್ಕಿದ್ರೇ ಈಗ್ಲೇ ರೆಡಿ” ಅಂತ ಗುನುಗಿದ್ದೆ,,, ಅದ್ಕೆ ಅವ್ಳು ನಕ್ಕು “ ಹಾಗಾದ್ರೆ ನಾನ್ಯಾವತ್ತೂ
ಕಣ್ಮುಚ್ಚಿನೇ ಇರ್ತೀನಿ, ಯಾವತ್ತೂ ಕಣ್ಣು ಮತ್ತು ರೆಪ್ಪೆನಾ ದೂರಾ ಮಾಡೋದೇ ಇಲ್ಲ” ಅಂದ್ಲು!!!
ಯಾಕೋ ಕಣ್ಮುಚ್ಚೋ ವಾಕ್ಯ ಕೇಳಿ ನೋವಾಯ್ತು! “ಇಲ್ವೇ ಈ ಕಣ್ಣಲ್ಲೇ ನನ್ ಜೀವಾ ಇರೋದು, ಯಾವತ್ತೂ ಇದ್ರೊಂದಿಗೆ
ಕಣ್ಣಾ ಮುಚ್ಚಾಲೆ ಆಡ್ಬೇಡಾ” ಅಂತ ಅತ್ಬಿಟ್ಟೇ… ಹುಡ್ಗ ಆಗಿ ನಾನು ಅಳೋದನ್ನ ನೋಡಿ ಅವ್ಳು ನಗೋಕೆ ಷುರು
ಮಾಡಿದ್ಲು.. ಆ ನಗುವಿಗೋಸ್ಕರ ಲೈಫ್ ಟೈಮ್ ಅಳೋಕೂ ರೆಡಿ ಅನ್ನಿಸ್ಬಿಟ್ಟಿತ್ತು..!
ಹೀಗೆ ಪ್ರೀತಿಯ ವಸಂತ ಕಾಲ ಸಾಗ್ತಾ ಇರೋವಾಗ ಮಳೆಗಾಲ
ಬಂತು.! ನೀಲಿ ಆಕಾಶದ ತುಂಬಾ ಕಪ್ಪು ಮೋಡ.! ನಮ್ ಪ್ರಿತಿಲೂ!! “ಬ್ರೇಕ್ ಅಪ್” ಅಂತಾ ಹೇಳೀ ಸಿಡಿಲು
ಸಿಡಿಸಿದ್ಲು!!.. ಪ್ರೀತೀಲಿ ನೆಂದಿದ್ದವ ಹಾಳು ಮಳೇಲಿ ಒಳ್ಳೆ ಕಾಗೆ ತರಾ ನೆಂದೆ!!!
ಲೈಫ್ ನಿಂದಾ ನೀಲಿ ಕಣ್ಮರೆ ಆಗ್ತಾ ಬಂತು! ಇಷ್ಟ
ಪಟ್ಟು ಕೊಂಡ್ಕೊಂಡಿದ್ದ ಬ್ಲೂ ಷರ್ಟ್ ಗೋದ್ರೇಜ್ ನ ಮೂಲೆಗೆ ಸೇರಿತು!! ನೀಲೆ ನೀಲೆ ಅಂಬರ್ ವಾಲಾ ರಿಂಗ್
ಟೋನ್ ಹೋಗಿ ಮೊಬೈಲ್ ಸೈಲೆಂಟ್ ಆಯ್ತು.! ನನ್ ತರ!!!
ಆದ್ರೂ ಎಲ್ಲೋ ಮೋಡ ಕರಗಿ ಮಳೆಯಾಗಿ ಮತ್ತೆ ನೀಲಿ
ಕಾಣ್ಬಹುದೇನೋ ಅನ್ನೋ ಆಸೇಲಿ ನಿರಂತರವಾಗಿ ಕನ್ವಿನ್ಸ್ ಮಾಡೋಕೆ ನೀಲಿ ಕಣ್ಣಿನ ಹುಡ್ಗೀಗೆ ಮೆಸೇಜ್ ಮಾಡ್ತಾ
ಇದ್ದೆ,, ಆದ್ರೆ Reply ಶೂನ್ಯ!!!!!!!.
ಆವತ್ತು ಏನ್ ಪುಣ್ಯನೋ ಬೆಳಗ್ಗೇನೇ ನೀಲಿ ಆಕಾಶ ನಗ್ತಾ ಇತ್ತು..ಜೊತೇಗೇ ಬೋನಸ್ ಆಗಿ ಅವ್ಳ ಮೆಸೇಜ್ ಬೇರೆ ಇತ್ತು!! ಎದ್ದವ್ನೇ ಪ್ರಭಾತೇ ಮೊಬೈಲ್ ದರ್ಶನ ಮಾಡಿ,ಅದೂ ಅವ್ಳ ಮೆಸೇಜ್ ನೋಡಿ ಪುನೀತನಾದೆ!! ಆತುರದಿಂದ ಮೆಸೇಜ್ ಓಪನ್ ಮಾಡ್ದೇ!!..
ಆವತ್ತು ಏನ್ ಪುಣ್ಯನೋ ಬೆಳಗ್ಗೇನೇ ನೀಲಿ ಆಕಾಶ ನಗ್ತಾ ಇತ್ತು..ಜೊತೇಗೇ ಬೋನಸ್ ಆಗಿ ಅವ್ಳ ಮೆಸೇಜ್ ಬೇರೆ ಇತ್ತು!! ಎದ್ದವ್ನೇ ಪ್ರಭಾತೇ ಮೊಬೈಲ್ ದರ್ಶನ ಮಾಡಿ,ಅದೂ ಅವ್ಳ ಮೆಸೇಜ್ ನೋಡಿ ಪುನೀತನಾದೆ!! ಆತುರದಿಂದ ಮೆಸೇಜ್ ಓಪನ್ ಮಾಡ್ದೇ!!..
“ಸಾರಿ ಡಿಯರ್ ತುಂಬಾ ದಿನದಿಂದ ಮೆಸೇಜ್ ಮಾಡ್ದೇ
ಹರ್ಟ್ ಮಾಡ್ದೇ ಸಾರಿ!,ಈವತ್ತು ಮಾರ್ನಿಂಗ್ 10 ಗಂಟೇಗೆ ಪಾರ್ಕ್ ಗೆ ಬರ್ತೀಯಾ ಅದೇ ಸೇಮ್ ಪಾರ್ಕ್
ಯಾವಾಗ್ಲೂ ಮೀಟ್ ಆಗ್ತಿದ್ದ ಪಾರ್ಕ್!! ಹಾಂ ಪ್ಲೀಸ್
ಫೇವರೇಟ್ ಬ್ಲೂ ಷರ್ಟನ್ನೇ ಹಾಕೊಂಡು ಬಾ..ಮಿಸ್ ಮಾಡ್ಬೇಡಾ ಸೀ ಯೂ!.”
ಖುಷೀಲೀ ಮೊಬೈಲ್ ಎಸೀದೇ ಇದ್ದದ್ದು ಪುಣ್ಯ!! ನೀಲಿ
ನನ್ ಫೇವರೇಟ್ ಯಾಕಂದ್ರೇ ನಿನ್ ಕಣ್ಣಿನ ಕಾರಣದಿಂದ ಅಂತ ಹೇಳ್ಬೇಕು ಅನ್ದ್ ಕೊಂಡೆ..ಆದ್ರೇ ಆ ಟೈಮಲ್ಲಿ
ಮಾತು ಬೇಡಾ ಆಗಿತ್ತು…
ಹಾಂ! ಟೈಂ!! ನಾನ್ ಎದ್ದ ಶುಭ ಮಹೂರ್ತ ನೋಡ್ದೆ!!
9am!!
ಬಾಂಬ್ ಬಿದ್ಹಾಗೆ ಅನ್ನಿಸ್ತು!! ಟೈಂ ಬಾಂಬ್ ಅಂದ್ರೇ
ಇದೇ ಇರ್ಬೇಕು ಅಂತ ಅನ್ನಿಸ್ತು!! ಒಳ್ಳೇ ಬಾಲಕ್ಕೇ ಬೆಂಕಿ ಬಿದ್ದ ಹನುಮನ ತರ ಓಡಾಡ್ತಾ ಮಾಮೂಲಿ ಕೆಲ್ಸಕ್ಕೆ
ಶುರು ಇಟ್ಟೆ!
9.30am!! ಸ್ನಾನ ಮುಗ್ಸಿ ಷರ್ಟ್ ಬೇಟೇಗೆ ಹೊರ್ಟೆ! ಮೆಸೇಜ್ ನೆನಪಾಯ್ತು!
ಬ್ಲೂಷರ್ಟ್!!!
ಗೋದ್ರೇಜ್ ನ ಬಾಗಿಲು ಮುರಿಯೋ ತರಾ ಓಪನ್ ಮಾಡಿ,ಬೇರೆಲ್ಲಾ
ಷರ್ಟ್ ನಾ ಎಸೀತಾ ಹುಡುಕ್ತಾ ಇದ್ದೆ!ಆದ್ರೆ ಷರ್ಟ್ ಸಿಗ್ತಾನೇ ಇಲ್ಲ!! ಯಕ್ಷಗಾನದ ಮಹಿಷಾಸುರನ ಹಾಗೆ ಬೊಬ್ಬೆ ಇಡ್ತಾ ಅಮ್ಮನನ್ನ
ಕೂಗ್ದೆ!. “ ಅಮ್ಮ ನನ್ ಬ್ಲೂ ಷರ್ಟ್ ಎಲ್ಲಿ?” ಅದ್ಕೇ ಅವ್ಳು “ ಆ ಷರ್ಟ್ ನಾ ಹಾಕೋಳ್ದೆ ತಿಂಗ್ಳಾಯ್ತು
ಅದ್ಕೇ ವಾಷ್ ಗೆ ಹಾಕಿದೀನಿ, ಈ ವೈಟ್ ಷರ್ಟ್ ನಾ ಹಾಕೋ ಕಂದಾ ಚೆನ್ನಾಗಿ ಕಾಣುತ್ತೇ”.
ತಲೆ ತಿರ್ಗೋಕೆ ಶುರು ಆಯ್ತು!! ಎಲ್ಲಿತ್ತೋ ದೂರ್ವಾಸನ
ಕೋಪ! ಸಿಕ್ಕಾಪಟ್ಟೆ ಬೈದು ಬಿಟ್ಟೆ! ನನ್ ಕೇಳ್ದೇ ಷರ್ಟ್ ನಾ ವಾಷ್ ಗೆ ಹಾಕಿದ್ದು ಯಾಕೆ?......!
ಹಾಗೇ ಹಿಗೇ!!
9.45! ಇನ್ನು ತಡ ಮಾಡಿದ್ರೇ ಆಗಲ್ಲ ಅಂತ ಅಮ್ಮ
ಐರನ್ ಮಾಡಿ ಇಟ್ಟಿದ್ದಾ ವೈಟ್ ಷರ್ಟ್ ನೇ ಹಾಕೊಂಡು ಓಟಕಿತ್ತೇ..ತಿಂಡಿ ತಿಂದು ಹೋಗು ಅಂತ ಅಮ್ಮ ಹೇಳಿದ್ದು
ಆ ಕಿವಿಯಿಂದ ಕೇಳಿ ಈ ಕಿವಿಯಿಂದ ಹೊರ್ಟು ಹೋಯ್ತು!
10.15! ಮೊದ್ಲೇ ಬ್ಲೂ ಷರ್ಟ್ ಹಾಕಿಲ್ಲಾ,15 ನಿಮಿಷ
ಲೇಟ್ ಬೇರೆ! ಅವಳ ಕೈಲಿ ಬೈಸಿ ಕೊಳ್ಳೋದು ಗ್ಯಾರಂಟಿ ಅಂತ ಅಂದ್ಕೊಂಡ್ರೂ ಅವಳ ಬೈಗುಳ ನಂಗೆ ಪ್ರೀತಿ
ಅಂತ ಸಮಾಧಾನ ಪಟ್ಕೊಂಡೆ! ಮೊಬೈಲ್ ನ ಸೈಲೆಂಟ್ ಮೋಡ್ ನಿಂದ ಚೇಂಜ್ ಮಾಡ್ದೇ ಖುಷೀಲೀ!!
ಆಕಾಶ ಎಲ್ಲಾ ಕಪ್ಪಾಯ್ತು! ಥೂ ಈ ಮಳೆ ಯಾವಾಗ್ಲೂ
ಬರ್ಬೋದು ಅಂತ ಬೈಕೊಂಡು ಪಾರ್ಕ್ ಗೆ ಎಂಟ್ರಿ ಕೊಟ್ಟೆ!!
ಎದುರಲ್ಲೇ ಒಬ್ಬ ಬ್ಲೂ ಷರ್ಟ ಹುಡ್ಗ ಪಾಸ್ ಆದ!
ಅವನ್ನ ಹಿಡ್ದು ಷರ್ಟ್ ಕಿತ್ಕೊಂಡು ನಾನ್ ಹಾಕ್ಲಾ ಅಂತ ಬಂದ ಯೋಚನೆಗೆ ಬ್ರೇಕ್ ಕೊಡ್ತಾ ಮುಂದೆ ಹೆಜ್ಜೆ
ಇಟ್ಟೆ.!
ಯಾರೋ ಕಿರುಚಿದ ಹಾಗೆ ಕೇಳಿಸ್ತು! ಯಾರಪ್ಪಾ ಅಂತ
ನೋಡಿದ್ರೇ ಬ್ಲೂ ಷರ್ಟ್ ಹುಡ್ಗಂಗೆ ಮತ್ತೊಬ್ಬ ಮಾತಾಡೋಕೂ ಅವಕಾಶ ಕೊಡ್ದೆ ಚೆನ್ನಾಗಿ ತದಕ್ತಾ ಇದ್ದ.!
ಲವ್ ಸೀನ್ ಇರ್ಬೇಕಾದಲ್ಲಿ ಆ್ಯಕ್ಷನ್ ಸೀನ್ ಯಾಕಪ್ಪಾ
ಅಂತಾ ಗೊಣಗ್ತಾ ಹತ್ರ ಹೋಗಿ ಅವನನ್ನ ಕೇಳ್ದೆ “ಯಾಕ್ ಅವನ್ಗೆ ಚಚ್ತಾ ಇದ್ದಿಯಾ?.” ಅದ್ಕೇ ಅವ್ನು
“ನೋಡಿ ಸಾರ್ ನನ್ ಗರ್ಲ್ ಫ್ರೆಂಡಿಗೆ ಸುಮ್ನೆ ಮೆಸೇಜ್ ಮಾಡಿ ತೊಂದ್ರೇ ಕೊಡ್ತಾನೆ, ಅದ್ಕೇ ಬ್ಲೂ ಷರ್ಟ್
ಹಾಕೊಂಡು ಬಾ ಅಂತ ಮೆಸೇಜ್ ಮಾಡೋಕೆ ಇವ್ಳಿಗೆ ಹೇಳ್ದೆ ಇನ್ಮುಂದೆ ತಂಟೆಗೆ ಬರ್ಬಾರ್ದು” ಅಂತ ಹೇಳಿ
ಹೊರ್ಟು ಹೋದ!
ಮತ್ತೊಂದು ಸಿಡಿಲು ಎಲ್ಲೋ ಹತ್ರಾನೇ ಬಿತ್ತು!!
ಆ ಬ್ಲೂ ಷರ್ಟ್ ಹುಡ್ಗನ್ನ ಎತ್ತಿ ಹಿಡ್ದೆ!. ಮುಖಾ ಎಲ್ಲಾ ಪೆಟ್ಟು ತಿಂದು ನೀಲಿ ಕಟ್ಟಿತ್ತು!!
ನಂಗೇ ತಿಳಿಯದಾ ಹಾಗೆ ನನ್ ಕಣ್ಣಿಂದ ನೀರು ಇಳಿಯೋಕೆ
ಷುರು ಆಯ್ತು.! ಅವ್ನು ಕೇಳ್ದ “ ಅಲ್ಲಾ ಅವ್ನು ಕಾರಣ ಇಲ್ದೇ ನಂಗೆ ಹೊಡ್ದ ನೀವ್ಯಾಕೆ ಅಳ್ತಾ ಇದ್ದೀರಾ?”.
ಅದ್ಕೆ ನಾನು ನಡ್ಗೋ ಧ್ವನೀಲೀ “ಅವನು ನಿಂಗೆ ಹೊಡ್ದ,
ಆದ್ರೆ ಅವ್ಳು ನನ್ನ ಕೊಂದೇ ಬಿಟ್ಲು” ಅಂತ ಹೇಳಿ
ತಿರುಗಿ ನೋಡ್ದೆ ಹೊರಟೆ!
ಅಷ್ಟರಲ್ಲೇ ಮತ್ತೇ ಅದೇ ಹಾಡನ್ನ ಹಾಳು ಮೊಬೈಲ್
ಹೊಡ್ಕೊಳ್ಳೋಕೆ ಶುರು ಮಾಡಿತು!! “ನೀಲೆ ನೀಲೆ ಅಂಬರ್ ಸೇ”
ರಿಸೀವ್ ಮಾಡ್ದೇ, ಆ ಕಡೆಯಿಂದ ಅಮ್ಮ “ಅಲ್ವೋ ಮನೇಗೆ ಬಾರೋ ಬೆಳಗ್ಗೆ ಏನೂ ತಿಂದಿಲ್ಲ,ಮಳೆ ಸುರೀತಾ
ಇದೆ ಕೊಡೇನೂ ಬಿಟ್ಟು ಹೋಗಿದೀಯಾ ಬೇಗ ಬಾರೋ”!
ಕಪ್ಪು ಮೋಡ ಕರಗಿ ನೀಲಿ ಆಕಾಶದಿಂದ ಬಿದ್ದ ಮಳೆ
ಹನಿಯೊಂದು ನನ್ನ ಕಣ್ಣೀರಿನ ಜೊತೆ ಸೇರಿ ನೆಲಕ್ಕೆ ಬಿದ್ದು ತನ್ನ ನೀಲಿ ಬಣ್ಣವನ್ನ ಕಳಚಿಕೊಂಡಿತು!!!!!!!!.......
ಕಥೆಗಾರ : ಶಿವಾನಂದನ ರಾವ್.
No comments:
Post a Comment