ನೀ ಹೋದೆ ತುಂಬಾ ದೂರ
ನೀ ಹೋದ ಸ್ಥಳವ ನಾ ಬಲ್ಲೆ
ಆದರೆ....
ಆದರೆ.... ನಾ ಬರಲಾರೆ ನಿನ್ನಲ್ಲಿಗೆ...
ನಾ ನಿನ್ನ ನೋಡಬಲ್ಲೆ ಈಗ
ಅಸಂಖ್ಯ ನಕ್ಷತ್ರಗಳ ನಡುವೆ
ಕುಳಿತು ನೀ ನೋಡುವ...
ಪರಿ ತುಂಬಾ ಭಿನ್ನ....
ಎಂತಹ ಮಧುರಾನುಭೂತಿ....
ಆದರೆ....ಮನದ ಮೂಲೆಯಲ್ಲಿ
ಸೂಜಿ ಚುಚ್ಚಿದ ಹಾಗೆ...
ನಿನ್ನ ಅಗಲಿಕೆಯ ನೋವು...
ಇನ್ನೂ ಕಾಡುತಿದೆ.
ಗೀಚಿದ್ದು :~ Niketha Hegde
ಕವನದಲ್ಲೇನೂ ಮಹಾ ವಿಷಯವಿಲ್ಲ...
ReplyDeleteಆದರೂ ಅದನ್ನು ಬರೆದ ರೀತಿ ಉಂಟಲ್ಲ..
ಅದು ಮನಮುಟ್ಟುವಂತಿದೆ....
ಎಲ್ಲೋ ಇರುವ ನಮ್ಮವರು ನಮ್ಮನ್ನೇ ನೆನೆಯುತ್ತಾರೆ ಮತ್ತು ಅದರ ಅರಿವು ನಮಗೆ ಮಧುರಾನುಭೂತಿಯನ್ನ ನೀಡುತ್ತೆ ಅನ್ನೋದನ್ನ ಚಿಕ್ಕದಾಗಿ ಹೇಳಿದ್ದೀರಿ.
ಜೊತೆಗೆ ಮಾನಸಿಕ ಇರುವಿಕೆ ಮಾತ್ರ ಸಾಲದು, ಅಗಲುವಿಕೆ ನೋವನ್ನು ಕೊಡುತ್ತದೆ ಅನ್ನೋದನ್ನೂ ಸೂಚ್ಯವಾಗಿ ಹೇಳಿದ್ದೀರಿ.
"ಸೂಜಿ ಚುಚ್ಚಿದ ಹಾಗೆ... " ಅನ್ನೋ ಪ್ರಯೋಗ ಚೆನ್ನಾಗಿದೆ.
ತುಂಬಾಸಲ ತುಂಬಾ ಚಿಕ್ಕ ಸಾಲುಗಳೂ ತುಂಬಾ ಆಳವಾದ ಭಾವನೆಗಳನ್ನ ವ್ಯಕ್ತಪಡಿಸುತ್ತವೆ.. ಎಲ್ಲಾ ಇರೋದು ಬರಹಗಾರನ ಕೈಯಲ್ಲಿ...
"ಚೆಕ್ ಹಾಳೆ ಎಷ್ಟು ಚಿಕ್ಕದಾದರೇನು? ಅದರಲ್ಲಿ ಬರೆದಿರೋ ಸಂಖ್ಯೆಗೆ ತಾನೇ ತೂಕ"
thank u sir....
ReplyDelete"ಚೆಕ್ ಹಾಳೆ ಎಷ್ಟು ಚಿಕ್ಕದಾದರೇನು? ಅದರಲ್ಲಿ ಬರೆದಿರೋ ಸಂಖ್ಯೆಗೆ ತಾನೇ ತೂಕ"
ಎನ್ನುವ ಹೋಲಿಕೆ ಚೆನ್ನಾಗಿದೆ...