Monday, 2 January 2012

ನೋವು

ನೋವು
ತನ್ನ ನೋವು ತನಗೇ ಅದು ಅರ್ಥವಾಗುವುದು. ನೋವು... ಅದನ್ನ ಹೋಲಿಸಲಾಗದು.
 ಜೀವನವೆಂಬ ಪಯಣದಲ್ಲಿ,
ತಮ್ಮವರಿಂದ ದೂರವಾದಲ್ಲಿ,
ಅನುಭವಿಸುವಂತಹ ನೋವು,
ಅನುಭವಿಸಿದವರಿಗೇ ಅದರ ಅರಿವು.
ಹಲವು ಸಮಯಗಳುರುಳಿದ ನಂತರ,
ತನ್ನವರನ್ನು ಸಿಕ್ಕಿ ಮತ್ತೆ ದೂರವಾಗುವಾಗ ,
ಆಕೆಯು ಮನದಲ್ಲಿ ಪಡುವ ವ್ಯಸನ,
ಉಂಟುಮಾಡುವುದು ಮನಸ್ಸಿನ ದಹನ .
ತನ್ನ ಜೀವನದ ಕೊನೆಗಾಲದಲ್ಲಿ,
ಇದ್ದೊರ್ವ ಮಗನನ್ನು ಕಳೆದುಕೊಂಡಲ್ಲಿ,
ಆ ತಾಯಿಯು ಪಡುವಂತಹ ಅಳಲು,
ಅದನ್ನು ಆಕೆಯೇ ಬಲ್ಲಳು .
ಭುವಿಯಲ್ಲಿ ಮಗುವಾಗಿ ಜನ್ಮ ತಾಳಿದಲ್ಲಿ,
ಹೆತ್ತವರ ಮೊಗವನ್ನೇ ನೋಡದಲ್ಲಿ,
ಆಕೆಯ ಜೀವನವೇ ಒಂದು ದುರಂತ,
ಆಕೆಗೇ ಗೊತ್ತು ಆ ನೂವೇನಂತ.
ಹೆಣ್ಣೆಂದು ತನ್ನವರಿಂದ ಶೋಷಿತಳಾದಲ್ಲಿ,
ಶೈಶವದಲ್ಲೇ ದುಃಖಅನುಭವಿತಳಾದಲ್ಲಿ,
ಅವಳು ಪಡುವಂತಹ ಆಂತರಿಕ ಶೋಕ,
ಅವಳಿಗೇ ತಿಳಿದಿಹುದು ಆಕೆಯ ದುಃಖ.
ಪ್ರಿಯ ಪ್ರಾಣಿಯ ದೇಹಾಂತ್ಯವಾದಲ್ಲಿ ,
ತನ್ನ ಕಂಬನಿಯು ಪರರಿಗೆ ಹಾಸ್ಯವಾದಲ್ಲಿ,
ಅವಳು ಪಡುವಂತಹ ವೈರಾಗ್ಯ,
ತರುವುದು ಅವಳಲ್ಲಿ ನೈಜ್ಯ ನೈಚ್ಯ .

                                                            - ರಂಜಿತಾ ಹೆಗ್ಡೆ.ಆರ್

No comments:

Post a Comment