ಅದೇಕೋ ಕೆಂಪು ಅಂದ್ರೇ ತುಂಬಾ ಇಷ್ಟ..! ಹೃದಯಾನೂ ಕೆಂಪಂತೆ ಅದ್ಕೇ ಏನೋ!! ಹಾ! ಕೆಂಪು ಕೆಂಪು ಆಗಿರೋ ಆಕಾಶಕ್ಕೆ ಮುಂಜಾನೆ ಸೂರ್ಯ ತಾನೇ ಕಾರಣ??! ಅಂತಹುದೇ ಒಂದು ಮುಂಜಾನೆ! ಎದ್ದೆ! ಮೆಸೇಜ್ ನೋಡ್ದೆ. ಮುಖ ತೊಳ್ದು ಪೇಪರ್ ಮುಂದೆ ಕೂತೆ!
ಯಾವತ್ತೂ ಬರೀ ಕ್ರಿಕೆಟ್ ಕಾಲಂ ಓದ್ತಾ ಇದ್ದವ್ನ ಕಣ್ಣಿಗೆ ಆ ಕಾಲಂ ಯಾಕೆ ಬಿತ್ತೋ!? 8 ವರ್ಷದ ಹುಡ್ಗ ಪಾಪ! ಅರ್ಜಂಟ್ ಆಗಿ 0 –ve ಬ್ಲಡ್ ಬೇಕಿತ್ತಂತೆ! ಅವ್ನ ಮುಖ ನೋಡೀನೇ ಪಾಪ ಅನ್ನಿಸ್ತು.
ಮೂಡ್ ಔಟ್ ಆಯ್ತು! ಪೇಪರ್ ಎಸ್ದೆ!
ಆಗ ನೆನ್ಪಾದ್ಳು ನಾಚಿದಾಗ ಕೆಂಪು ಕೆಂಪು ಆಗೋ ಆ ಹುಡ್ಗಿ!! ಅವ್ಳಿಗೆ ಏನಾದ್ರೂ ಹೇಳ್ಬೇಕು. ನಾಚಿದಾಗ ತುಂಬಾ ಚೆನ್ನಾಗಿ ಕಾಣ್ತೀಯಾ ಅಂತ ಹೀಗೆ. ಖಾಲಿ ಪೇಪರ್ ತಗೊಂಡೆ. ಅದೇನ್ ಅನ್ನಿಸ್ತೋ ಕಪ್ಪು ನೀಲಿ ಕಲರ್ ಪೆನ್ ಯಾವ್ದೂ ಹಿಡಿಸ್ಲಿಲ್ಲ! ಕೆಂಪು ಷಾಯಿ ಪೆನ್ನು ಇರ್ಲಿಲ್ಲ. ಮೊದ್ಲೇ ಹೇಳ್ದೆ ನಂಗೆ ಕೆಂಪಂದ್ರೆ ಇಷ್ಟ. ಏನಾದ್ರೂ ಆಗ್ಲಿ ಅಂತ ಶೇವಿಂಗ್ ಬ್ಲೇಡ್ ಹಿಡ್ಕೊಂಡೆ ಅದ್ರಿಂದ ಕೈಗೆ ಒಂದು ಗೀರು ಹಾಕ್ದೆ. ಬಂದದ್ದು ಅದೇ ನನ್ನ ಪ್ರೀತಿಯ ಕೆಂಪು!
ಏನ್ ಅನ್ನಿಸ್ತೋ ಅದನ್ನೆಲ್ಲಾ ಬರ್ದೆ! ಖುಷಿ ಆಯ್ತು! ಕೈಗೆ ಬ್ಯಾಂಡೇಜ್ ಹಾಕಿ ಆ ಲೆಟರ್‍ನ ಅವ್ಳಿಗೆ ಕೊಡ್ಲೇ ಬೇಕು ಅಂತ ಡಿಸೈಡ್ ಮಾಡಿ ಕಾಲೇಜ್‍ಗೆ ಹೊರಟೆ. ಯಾರ್ದೋ ಮನೆಯ ಗುಲಾಬಿ ಕದ್ದೆ, ಲೆಟರ್‍ಗೆ ಕಂಪೆನಿ ಇರ್ಲಿ ಅಂತ.
ಆದದ್ದು ಆಗ್ಲಿ ಅಂತ ಅಂದ್ಕೊಂಡು ಬಹಳ ಕಷ್ಟಪಟ್ಟು ಐ ಲವ್ ಯು ಹೇಳಿ ರೋಸ್ ಕೊಟ್ಟೆ!
ಈ ಬಾರೀನೂ ಅವ್ಳು ಕೆಂಪಾದ್ಳು!!! ನಾಚಿಕೆಯಿಂದ ಅಲ್ಲ! ಕೋಪದಿಂದ!! ಆ ಲೆಟರ್‍ನ ಕೆಂಪು ಅಕ್ಷರಕ್ಕಿಂತ, ನಾನು ಕೊಟ್ಟ ಗುಲಾಬಿಗಿಂತ ಕೆಂಪಾದ್ಳು! ನಾನ್ ಹೇಳಿದ್ದ ಐ ಲವ್ ಯು ಒಂದನ್ನು ಬಿಟ್ಟು ಉಳಿದ ಲೆಟರ್, ರೋಸ್ ಅನ್ನು ವಾಪಾಸು ಮಾಡಿದ್ಳು!! ಅರ್ಥಾಥ್ ಮುಖಕ್ಕೆ ಎಸೆದ್ಳು!!!
ಬಹಳ ಕಷ್ಟದಲ್ಲಿ ಬಂಕ್ ಮಾಡ್ದೇ ಬಯೋಲಾಜಿ ಲ್ಯಾಬ್‍ಗೆ ಹೋದೆ! ನನ್ ಹಣೆಬರಹಕ್ಕೆ ಅಲ್ಲೂ ಬ್ಲಡ್!!! ಎಲ್ರೂ ತಮ್ಮ ತಮ್ಮ ಬ್ಲಡ್ ಗ್ರೂಪ್ ಚೆಕ್ ಮಾಡ್ಕೋಬೇಕು ಅಂತ ಹೇಳಿದ್ರು ನಮ್ ಲೆಕ್ಚರರ್!!
ಈ ದಿನ ಎರಡ್ನೇ ಸಾರಿ ಬೇಕಂತ್ಲೇ ಕೈ ಕೊಯ್ಕೊಂಡೆ!!
ಎಲ್ರೂ ನನ್ ಬ್ಲಡ್ದನ್ನೇ ನೋಡೋವ್ರು! ನಮ್ ಬಯೋ ಲೆಕ್ಚರರ್ ಬಂದು ನಿಂದು 0 –ve ಬ್ಲಡ್ ಗ್ರೂಪ್ ತುಂಬಾ ಕಡಿಮೆ ಇರೋ ಬ್ಲಡ್ ಗ್ರೂಪ್ ಅಂತೆಲ್ಲಾ ಅಂದ್ರು!!
ಎಲ್ಲಾದ್ರಲ್ಲೂ –ve ಆಗಿರೋ ನಂಗೆ ಇದ್ರಲ್ಲೂ –ve ಅಂದಾಗ ಆಶ್ಚರ್ಯ ಆಗ್ಲಿಲ್ಲ!! 0 –ve ನೆನಪಾಯ್ತು!! ಅದೇ ೮ ವರ್ಷದ ಹುಡ್ಗ! ಹೇಳ್ದೇ ಕೇಳ್ದೇ ಲ್ಯಾಬ್ ಬಿಟ್ಟು ಲೈಬ್ರೆರಿಗೆ ಹೋಗಿ ಪೇಪರ್ ಓದಿ ಅವ್ನು ಇರೋ ಹಾಸ್ಪಿಟಲ್ ಅಡ್ರೆಸ್ ತಿಳ್ಕೊಂಡು ಅಲ್ಲಿಗೇ ಹೋದೆ!
ಅವ್ನ ವಾರ್ಡ್ ನಂ ತಿಳ್ಕೊಂಡು ಅವ್ನ ಟ್ರೀಟ್ ಮಾಡ್ತಾ ಇದ್ದ ಡಾಕ್ಟರ್‍ನ ಮೀಟ್ ಮಾಡಿ ನಂದೂ 0 –ve ನಾನು ಬ್ಲಡ್ ಕೊಡ್ತೇನೆ ಅಂತ ಅಂದೆ!
ಆದ್ರೆ ಆ ಡಾಕ್ಟರ್ ಅವ್ರ ಮಾಮೂಲಿ ಡೈಲಾಗ್ ಬಿಟ್ರು!!!!
“You Are too late, Patient is no more!!” ಅಂತ!!
ಅಲ್ಲೇ ಒಂದ್ಸಲ ಭೂಮಿ ಕುಸಿದ ಹಾಗೆ ಅನ್ನಿಸ್ತು!!
ಆ ಡಾಕ್ಟರ್ ನನ್ನ ಅವ್ನ ಡೆಡ್ ಬಾಡಿ ಹತ್ರ ಕರ್ಕೊಂಡು ಹೋದ್ರು!!
ನಂಗೆ ಅವ್ನ ಮುಖ ನೋಡೋ ಧೈರ್ಯ ಇರ್ಲಿಲ್ಲ!! ಅವ್ನ ಕಾಲ ಬಳಿ ಕುಸಿದು ಕೂತೆ! ಅದೇ ನನ್ನ ಕೆಂಪು ಹುಡುಗಿ ಎಸ್ದ ಗುಲಾಬೀನ ಅವ್ನ ಕಾಲ ಬಳಿ ಇಟ್ಟೆ! “ ನನ್ನ ಕ್ಷಮಿಸು” ಅಂತ ಅಂದೆ!
ನನ್ನ ಕಣ್ಣೀರಿನೊಂದಿಗೆ ನನ್ನ ಕೈಯ ಗಾಯದಿಂದ ತೊಟ್ಟಿಕ್ಕುತ್ತಿದ್ದ ರಕ್ತ ಕಲೆತು ಅವನ ಕಾಲಿಲ್ಲಾ ಕೆಂಪಾಯ್ತು!!
ಅದೇ ನನ್ನ ಪ್ರೀತಿಯ ಕೆಂಪು ಬಣ್ಣ!!!!!!!
ಗೀಚಿದ್ದು : Shivanandan Rao
ಗೀಚಿದ್ದು : Shivanandan Rao
ಚೆನ್ನಾಗಿ ಬರೆದಿದ್ದೀರ ಶಿವು. ಒಳ್ಳೆಯ ಭಾಷೆ, ಪ್ರಸ್ತಾಪ ಮಾಡಿದ ರೀತಿನೂ ಚೆನ್ನಾಗಿದೆ. ಕೈಗೆ ಗೀರಿಕೊಂಡದ್ದು ಯಾಕೋ ಉತ್ಪ್ರೇಕ್ಷೆ ಅನ್ನಿಸಿದರೂ ಸಹ "ಯಾರ್ದೋ ಮನೆಯ ಗುಲಾಬಿ ಕದ್ದೆ, ಲೆಟರ್‍ಗೆ ಕಂಪೆನಿ ಇರ್ಲಿ ಅಂತ" ಮತ್ತು "ನಾನ್ ಹೇಳಿದ್ದ ಐ ಲವ್ ಯು ಒಂದನ್ನು ಬಿಟ್ಟು ಉಳಿದ ಲೆಟರ್, ರೋಸ್ ಅನ್ನು ವಾಪಾಸು ಮಾಡಿದ್ಳು!!" ಹಾಗೂ "ಎಲ್ಲಾದ್ರಲ್ಲೂ –ve ಆಗಿರೋ ನಂಗೆ ಇದ್ರಲ್ಲೂ –ve ಅಂದಾಗ ಆಶ್ಚರ್ಯ ಆಗ್ಲಿಲ್ಲ", "ಈ ಬಾರೀನೂ ಅವ್ಳು ಕೆಂಪಾದ್ಳು!!! ನಾಚಿಕೆಯಿಂದ ಅಲ್ಲ! ಕೋಪದಿಂದ!!" ಇತ್ಯಾದಿ ಸಾಲುಗಳು ಬರಹಕ್ಕೆ ಹೊಸ ನಿಲುವನ್ನೂ ನೀಡಿ, ಅಂದವನ್ನೂ ಹೆಚ್ಚಿಸಿವೆ. ಕೇರ್ ಮಾಡದೆ ಎಸೆದಿದ್ದ ಪೇಪರ್ ನ ಅಡ್ದ್ರೆಸ್ ಗಾಗಿ ಮತ್ತೆ ಲೈಬ್ರೆರಿಗೆ ಹೋದದ್ದು ಬರಹದ ಮೇಲಿನ ನಿಮ್ಮ ಕೇರ್ ಅನ್ನ ತೋರಿಸುತ್ತೆ.
ReplyDeleteಎಲ್ಲಕ್ಕಿಂತ ಇಷ್ಟವಾಗೋ ವಿಷ್ಯ ಅಂದ್ರೆ ಇದು ಸುಮ್ನೆ ಟೈಮ್ ಪಾಸ್ ಲೇಖನ ಅನ್ನಿಸದೆ- ಬ್ಲಡ್ ಕೊಡುವಂತ ಒಳ್ಳೆ ಕೆಲಸದ ನಿರ್ಧಾರ ಮಾಡೋದಿದ್ರೆ ತಡ ಮಾಡಬಾರದು ಅನ್ನೋ ಮೆಸ್ಸೇಜ್ ಕೂಡ ಕೊಡುತ್ತೆ.
ತುಂಬಾ ಮೆಚ್ಯೂರ್ಡ್ ಬರಹ.... ಲೇಖನದ ವಿಷಯ ಸಾಮಾನ್ಯ ಅನಿಸಿದ್ರೂ ಪ್ರಸ್ತುತ ಪಡಿಸಿದ ರೀತಿ ಸೂಪರ್... ರತ್ನಾಕರ್ ಹೇಳಿದ ಹಾಗೆ ಕೈಗೆ ಗೀರಿಕೊಂಡಿದ್ದು ನಾಟಕೀಯ ಅನಿಸಿದರೂ ಉಳಿದ ಘಟನೆಗಳನ್ನು ವಿವರಿಸಿಲು ಬಳಸಿದ ಭಾಷೆ ಹೊಸತನದಿಂದ ಕೂಡಿದೆ
ReplyDeletewww.sumageetha.blogspot.com