Showing posts with label ಮಾತು. Show all posts
Showing posts with label ಮಾತು. Show all posts

Sunday, 29 September 2013

ಉಸಿರು

ಉಸಿರು
“Heart ಅನ್ನೋ engine ನಡೀಬೇಕು ಅಂತಾದ್ರೆ ಉಸಿರು ಅನ್ನೋ basic fuel ಬೇಕು ಅಂತಾರೆ!”
ಉಸಿರು ,ಪ್ರಾಣ,ಜೀವ ಎಲ್ಲಾ ಒಂದೇ.. ಹಾಗೇ ಅವಳು ಕೂಡಾ!

ಹಾಗೇ ಮುಚ್ಚಿದ್ದ ಕಣ್ಣನ್ನ ಮೆಲ್ಲನೆ ತೆರೆದೆ! ಎಲ್ಲಾ ಅಸ್ಪಷ್ಟ! ಎಲ್ಲೋ ದೂರದಿಂದ ಧ್ವನಿ ತೇಲಿ ಬರುತ್ತಿತ್ತು.
“Don’t worry oxygen mask ಹಾಕಿದ್ದೀವಿ,ಉಸಿರಾಟಕ್ಕೇನೂ ತೊಂದ್ರೆ ಇಲ್ಲ,ಸ್ವಲ್ಪ ದಿನದಲ್ಲೇ ಮೊದ್ಲಿಂತರ normal ಆಗ್ತಾರೆ” ಅಂತ!
ಕಣ್ರೆಪ್ಪೆ ಭಾರ ಅಂತ ಅನಿಸಿ ಹಾಗೇ ಕಣ್ಣನ್ನ ಮುಚ್ದೆ,ಕಣ್ಣನ್ನ ಮುಚ್ಚಿದ್ರೂ ತೆರೆದ್ರೂ ಕಾಣೋದು ಬರೇ ಅವಳು!ನನ್ನುಸಿರು!

ಹೌದು ನನ್ನುಸಿರಿಗೆ ಹೆಸರಾದವಳು ಅವಳು ಅಂತ ಹೇಳಿದ್ರೆ Dramatic ಅಂತ ಅನ್ನಿಸಿದ್ರೂ ಬೇರೆ ದಾರಿಯಿಲ್ಲ,ಯಾಕಂದ್ರೇ ನಂಗೆ ನನ್ life ಅಲ್ಲಿ ಅವ್ಳಿಗೆ ಕೊಡ್ಬೇಕಾದ importance ಅದು..
ನನ್ನ ಮೊದಲ ಉಸಿರಾಟದ ನೆನಪಿಲ್ಲದಿದ್ದರೂ,ಉಸಿರು ಅಂದ್ರೆ ಏನು ಅಂತ ತಿಳಿಯೋ ವಯಸ್ಸಿನಿಂದ್ಲೇ ನನ್ನುಸಿರಾಗಿದ್ದವಳು ಅವಳು!
ಬಾಲ್ಯದಲ್ಲಿ ಕೈ ಹಿಡಿದು ಆಟವಾಡ್ತಾ ಇದ್ದ ಕಾಲದಿಂದ್ಲೇ ಜೀವನ ಪೂರ್ತಿ ಅವಳ ಕೈ ಹಿಡಿಯುವ ಕನಸನ್ನೇ ಉಸಿರಾಗಿಟ್ಟು ಕೊಂಡವ ನಾನು..
ಕಾಲ ಸರಿದಂತೆಲ್ಲಾ ಕನಸು ಧ್ಯೇಯವಾಯಿತು,ಆ ಧ್ಯೇಯವೇ ಉಸಿರಾಯ್ತು! ನನ್ನುಸಿರಿಗೆ ನನ್ನೆಲ್ಲಾ ಕನಸನ್ನು ಕೂಗಿ ಹೇಳ್ಬೇಕು, ಒಂದೇ ಕನಸನ್ನು ಇಬ್ರೂ ಕಾಣ್ಬೇಕು ಅಂತೆಲ್ಲಾ ಅನಿಸಿದ್ರೂ ಯಾಕೋ ಹೇಳೋಕಾಗ್ತಾ ಇರ್ಲಿಲ್ಲ..
ಯಾಕಂದ್ರೆ ಅವ್ಳು ಹಾಗೇ! ಹತ್ತಿರ ಬಂದ್ರೇ ಗಾಳಿಯಲ್ಲಿ ನಶೆ ಏರುತ್ತಾ ಇತ್ತು,ಆ ನಶೆ ನನ್ನ ಪಾಲಿಗೆ ಪ್ರೀತಿಯಾಗಿತ್ತು,ಆ ಪ್ರೀತಿಯನ್ನೇ ಉಸಿರಾಡುತ್ತಾ ಇದ್ದವನು ನಾನಗಿದ್ದೆ!
ಹಾಗಂತ ಅವ್ಳಿಗೆ ಇದನ್ನೆಲ್ಲಾ ಹೇಳೋಕೆ ನಂಗೆ ಹೆದ್ರಿಕೆ ಇರ್ಲಿಲ್ಲ, ಆ ಹೇಳುವ ಹೊತ್ತನ್ನು ತುಂಬಾ ತುಂಬಾ special ಆಗಿಸ್ಬೇಕು ಅನ್ನೋದು ನನ್ನ ಕನಸಾಗಿತ್ತು!
ಹದಿಹರೆಯದಲ್ಲಿ ಒಮ್ಮೆ ಮೂಡಿ ಮರೆಯಾಗುವ ಕಾಮನಬಿಲ್ಲಿನಂತ ಪ್ರೀತಿಯು ಅದಲ್ಲ.
ಶುಧ್ಧ ಬೆಳದಿಂಗಳಂತ ಪ್ರೀತಿ ಅದು!
ಅವ್ಳ mummy daddy ಒಪ್ಪೇ ಒಪ್ತಾರೆ ಅಂತ ಭರವಸೆ ಇತ್ತು ನಂಗೆ! ಆದ್ರೂ ಅವರ ಪಾಲಿನ ಉಸಿರನ್ನ ನನ್ನದಾಗಿಸಿ ಕೊಳ್ಳುವ ಮೊದ್ಲು ನಾನು ನನ್ನ ಕಾಲ್ಮೇಲೆ ನಿಂತು ಅವ್ಳನ್ನ ಚೆನ್ನಾಗಿ ನೋಡಿಕೊಳ್ತೇನೆ ಅನ್ನೋ ಭರವಸೆಯ ನಿಟ್ಟುಸಿರನ್ನ ಅವ್ರಲ್ಲಿ ಮೂಡಿಸ್ಬೇಕು ಅಂತ decide ಮಾಡಿದ್ದೇ..
ಕಾಲಾನೂ ಹಾಗೇ! ಉಸಿರಾಡಿದಂತೆ ವೇಗವಾಗಿ ಸರಿಯುತ್ತದೆ ಅಂತಾರೆ. ಅವ್ಳನ್ನೇ ಉಸಿರಾಗಿಟ್ಟುಕೊಂಡ ನನಗೆ ಕಾಲ ಸರಿದದ್ದೇ ಗೊತ್ತಾಗ್ಲಿಲ್ಲ..
ಆವತ್ತು interview ಇತ್ತು. ನನ್ನುಸಿರನ್ನ ಪಡೆಯಲು ಇಡ್ಬೇಕಾದ ಮೊದಲ ಹೆಜ್ಜೆ. Confident ಆಗಿ ಎಲ್ಲಾನೂ Handle ಮಾಡ್ದೆ..Select ಕೂಡಾ ಆದೆ!
ಎಲ್ಲಾ ಕನಸು ಆ ಹೊತ್ತಿಗೆ ಸಾಕಾರಗೊಂಡಿತ್ತು..ಅಲ್ಲೆಲ್ಲಾ ಬರೀ ಸಂತೋಷವೇ ತುಂಬಿ ಕೊಂಡಿತ್ತು. ಅವ್ಳನ್ನ ಬಿಟ್ಟು ಆ ದೂರದ ನಗರಕ್ಕೆ ಹೋಗ್ಬೇಕು ಅಂತ ಬೇಜಾರಾದ್ರೂ ಖುಷಿ ಮಾತ್ರಾ ತುಂಬಾನೇ ಇತ್ತು ನನ್ನಲ್ಲಿ..
ಇನ್ನಾದ್ರೂ ಅವ್ಳಿಗೆ ಹೇಳೋಣಾ ಅಂತ ಅಂದ್ಕೊಂಡೆ ಆದ್ರೆ ಯಾಕೋ ಆ moment ನಾ ತುಂಬಾನೇ special ಮಾಡ್ಬೇಕು, offer letter ಬಂದ ತಕ್ಷಣ ಅವ್ಳ ಮುಂದೆ ನಿಂತು ನನ್ನ ಬದುಕು,ಕನಸು,ಉಸಿರು ಎಲ್ಲಾನೂ ಅವ್ಳಿಗೆ offer ಮಾಡ್ಬೇಕು ಅಂತ ನಿರ್ಧರಿಸಿದೆ…
ಆ ದಿನ ಅವ್ಳ call ಬಂದಿತ್ತು “ hey hai party ಎಲ್ಲೋ interview ನಲ್ಲಿ select ಆದ್ಯಂತೇ!! ಹಾಂ ಒಂದು good news ಗೊತ್ತಾ ನಾನ್ ಕೂಡಾ select ಆದೆ. Same ನಿಂದೇ location ಆದ್ರೆ company ಮಾತ್ರ ಬೇರೆ ಅಷ್ಟೇ.. mummy daddy ಎಲ್ಲಾ ಖುಷಿಯಾಗಿದ್ದಾರೆ,ಅವ್ರಿಗೆ ನನ್ನ ಅಲ್ಲಿಗೆ ಕಳ್ಸೋಕೆ ಏನೂ problem ಇಲ್ಲ, ನೀನಿದ್ದಿಯಾ ಅಲ್ಲಿ ಅಲ್ವಾ so…”
ಸಾಮಾನ್ಯವಾಗಿ ನಾವು ಏನನ್ನ ಬಯಸ್ತೀವೋ ಅದ್ರ ಬಗ್ಗೆ ಕನಸು ಕಾಣ್ತೀವಿ ಅಂತಾರೆ.. ಅವ್ಳ ಮಾತನ್ನ ಕೇಳೀ ನನ್ನ ಕನಸ್ಸಿಗೆ ರೆಕ್ಕೆಯೇ ಮೂಡಿತ್ತು..ಅದು ಸ್ವಚ್ಛಂದವಾಗಿ ಹಾರುತಿತ್ತು!

ಹಾಗೇ ದಿನಗಳು ಉರುಳಿದ್ವು.. ಅದು ಕಾತರದ ಕಾಲ, ಉಸಿರನ್ನ ಬಿಗಿ ಹಿಡಿದು offer letter ಗಾಗಿ ಕಾಯ್ತಾ ಇದ್ದ ಕಾಲ! ಪ್ರತಿ ಉಸಿರಿನಲ್ಲೂ ತವಕ ಇತ್ತು…
ಅವ್ಳ ಕಾಲ್ ಬಂದಿತ್ತು “ hey ನನ್ನ offer letter ಬಂತು ಕಣೋ 2 weeks ನಲ್ಲಿ joining date ಇದೆ! ಏನು prepare ಆಗಿಲ್ಲಾ ಭಯಾ ಆಗ್ತಾ ಇದೆ, ನೀನ್ ಕೂಡಾ ಇಲ್ಲ ಈವಾಗ ಅಲ್ಲಿ.. please ಬೇಗ ಬಂದ್ಬಿಡು wait ಮಾಡ್ತಾ ಇರ್ತೀನಿ” ಅಂತಾ
ನಾನು ನಿಜವಾಗಿಯೂ ಖುಷಿಯಾಗಿದ್ದೆ! ಅವ್ಳ ಖುಷಿಗೋಸ್ಕರ!
ಅವ್ಳು ಹೋದ್ಲು!,ನಾನು ಹೇಳ್ಬೇಕು ಅಂತಾ ಇರೋದೆಲ್ಲಾ ತುಂಬಾ ಹಾಗೇ ಇತ್ತು…
ಯಾಕೋ ಅವ್ಳನ್ನ ಬಿಟ್ಟು ಇರೋದು ಆಗ್ತಾ ಇರ್ಲಿಲ್ಲ.. ನೀರಿಂದ ದೂರ ಆದಾ ಮೀನಿನ ತರಾ ಉಸಿರಾಡೋಕೆ ಕಷ್ಟ ಪಡ್ತಾ ಇದ್ದೆ!!
ಅವ್ಳು ಇದ್ದಲ್ಲಿಗೆ ತೆರಳಿದೆ,ಉಸಿರಿನ ಅನ್ವೇಷಣೆಯಲ್ಲಿ…

ಅನ್ವೇಷಣೆ ಕೇವಲ ಉಸಿರಿಗಾಗಿ ಇರಲಿಲ್ಲ, ಆ ಉಸಿರನ್ನು ಪಡೆಯುವ ಅರ್ಹತೆಗಾಗಿ ಕೂಡಾ ಇತ್ತು.. ಅರ್ಥಾತ್ ಉದ್ಯೋಗಕ್ಕಾಗಿ..
ಕಾಲ ಯಾರಿಗೂ ಕಾಯಲ್ಲ..ಅದು ಉರುಳ್ತಾನೇ ಇತ್ತು. ಅವ್ಳನ್ನ ಸಿಕ್ಕಾಗೆಲ್ಲಾ ನನ್ನೊಳಗೆ ಇರೋ ಪ್ರೀತಿಯ ಆಳಾನಾ ತೋರಿಸ್ಬೇಕು ಅಂತಾ ಅನ್ನಿಸ್ತಾ ಇತ್ತು, ಆದ್ರೆ ಅದು ಸಾಧ್ಯ ಆಗ್ತಾ ಇರ್ಲಿಲ್ಲ..ಕನಸು ಕನಸಾಗೇ ಉಳಿದು ಬಿಡುತ್ತೇನೋ ಅನ್ನಿಸ್ತಾ ಇತ್ತು…..
ಕನಸು! ಕನಸು ನನಸಾಗೋ ದಿನಾನೇ ಬಂದಿತ್ತು.. ಉಸಿರು ಬಿಗಿ ಹಿಡಿದು ಕಾಯ್ತಾ ಇದ್ದ ದಿನ! Offer letter ಕೈಗೆ ಬಂದಿತ್ತು! ಇದುವರೆಗೆ ಕಂಡ ಕನಸೆಲ್ಲಾ ವಾಸ್ತವ ಅನ್ನಿಸೋಕೆ ಶುರುವಾಯ್ತು..ಅದೇ ದಿನ ಅವ್ಳಿಗೆ call ಮಾಡಿ ಹೇಳ್ದೆ “ ನಿಂಗೊಂದು surprise ಇದೆ, please meet ಆಗು ಈವತ್ತು” ಅಂದೆ…
ಆ ಮುಂಜಾನೆ ಯಾಕೋ ನಂಗೋಸ್ಕರನೇ ಮೂಡಿತ್ತು ಅನ್ನಿಸ್ತಾ ಇತ್ತು ! ತುಂಬಾ ಖುಷಿಯಿಂದ ಅವ್ಳನ್ನ meet ಆಗ್ಬೇಕು ಅಂತಾ prepare ಆಗಿ bike ಮೇಲೆ ಕೂತೆ..ಎಷ್ಟು kick ಹೊಡ್ದ್ರೂ start ಆಗ್ತಾ ಇರ್ಲಿಲ್ಲ.. engine ನಲ್ಲಿ problem ಇರ್ಬೇಕು ಅಂತ ಅನ್ನಿಸ್ತು… ಆದ್ರೆ ಪ್ರೀತಿಗಿರೋ ಜಾದೂನೋ ಏನೋ ನಿರ್ಜೀವ engine ಕೂಡಾ start ಆಯ್ತು…

ನನ್ನ ಉಸಿರಾಟ ಜೋರಾಗಿ ನಂಗೇ ಕೇಳಿಸ್ತಾ ಇತ್ತು,ಯಾಕಂದ್ರೇ ಅವ್ಳು ನನ್ನ ಮುಂದೆ ನಿಂತಿದ್ಲು! ವರ್ಷಗಳಿಂದ ಕೂಡಿಟ್ಟ ಕಾತರತೆಯ ಅಣೆಕಟ್ಟನ್ನ ಒಡೆದು ಅಲ್ಲೆಲ್ಲಾ ಪ್ರೇಮದ ಪ್ರವಾಹವನ್ನ ಹರಿಸೋ ತವಕ ಇತ್ತು ನನ್ನಲ್ಲಿ..
ಅವ್ಳೇ ಷುರು ಮಾಡಿದ್ಲು “ಏನೋ surprise ಕೊಡ್ಬೇಕು ಅಂತಾ ಇದ್ದೀಯಾ? ನಂಗೂ ಕೂಡಾ surprise ಕೊಡೋದಿದೆ ನಿಂಗೆ!”
ಅಂತ ತುಂಬಾನೇ ಖುಷಿಯಲ್ಲಿ ಹೇಳಿದ್ಲು..ಯಾಕೋ ಜೀವನ ತುಂಬಾ ಸುಂದರ ಅಂತಾ ಅನ್ನಿಸ್ತು.. first ಅವ್ಳು ಏನು ಹೇಳ್ತಾಳೆ ಅನ್ನೋದನ್ನ ಕೇಳೋಣ ಅಂತಾ “ ಮೊದ್ಲು ತಮ್ಮ surprise ಏನು ಅಂತಾ ಹೇಳೀ ladies first ನಂದು ದೊಡ್ಡ surprise so ಅದನ್ನ last ಗೆ ಇಡೋಣಾ ನಿಂದು ಹೇಳು “ ಅಂತಾ ಅಂದೇ
ಅವ್ಳು ನನ್ ಕೈಗೆ letter ಕೊಡ್ತಾ “ನನ್ marriage fix ಆಗಿದೆ ! next month ನನ್ marriage..ಇದು first invitation, Mummy daddy ಎಲ್ಲಾ first invitation ನಾ ದೇವ್ರ ಮುಂದೆ ಇಡ್ಬೇಕೂ ಹಾಗೇ ಹೀಗೆ ಅಂತಾರೆ ಆದ್ರೆ ಇದು ನಿಂಗೆ because you are most important person ನನ್ life ಅಲ್ಲಿ ಅಂತ….

ಉಸಿರು ನಿಂತ ಹಾಗಾಯ್ತು!!! ವಾಸ್ತವ ಅಂದುಕೊಂಡ ಕನಸು ಮತ್ತೆ ಕನಸಾಯ್ತು! ಉಸಿರಾಡೋದನ್ನೇ ಮರೆತು ಲಗ್ನಪತ್ರಿಕೆಯನ್ನು ನೋಡ್ತಾ ಇದ್ದೆ…ಆಗ ತಾನೇ print ಮಾಡಿಸಿಕೊಂಡು ಬಂದಿದ್ರಿಂದ್ಲೇನೋ ಸ್ವಲ್ಪ ಬಿಸಿಯಾಗಿತ್ತು.. ಆ ಶಾಖ ನನ್ನನ್ನೂ ಆವರಿಸಿತು!!!
“hey ನಿನ್ surprise ಏನೋ?” ಅಂತ ಕೇಳಿದ್ಲು .. offer letter ನಾ ಅವ್ಳ ಕೈಗೆ ಕೊಟ್ಟು “ನಿನ್ದಕ್ಕಿಂತ ದೊಡ್ಡ surprise ಅಲ್ಲಾ” ಅಂತ ಅಂದೇ…
ಅವ್ಳ ಖುಷಿ ಜಾಸ್ತಿ ಆಯ್ತು!! “wow really ಇವತ್ತು ನಂಗೆ lucky day, I am really Happy” ಅಂದ್ಲು…
ಅವ್ಳ ಖುಷಿ ನೋಡಿ ಖುಷಿ ಪಡ್ಲಾ ಇಲ್ಲಾ ನನ್ ಅವಸ್ಥಗೆ ಅಳ್ಲಾ ಅಂತ ಅರ್ಥ ಆಗ್ಲಿಲ್ಲ..
ಏನೋ ನೆಪ ಹೇಳಿ ಅಲ್ಲಿಂದ ಹೊರಗೆ ಬಂದು bike start ಮಾಡ್ದೆ!...ನಂಗೆ ಇನ್ನೂ ಕಷ್ಟ ಕೊಡ್ಬಾರ್ದೂ ಅಂತಾ ಏನೋ ಒಂದೇ kick ಗೆ start ಆಯ್ತು…
ತುಂಬಾ fast ಆಗಿ ಹೋಗ್ತಾ ಇದ್ದೆ…ಎಲ್ಲಾ ನೆನಪುಗಳನ್ನ,ಕನಸನ್ನ ತುಂಬಾ ತುಂಬಾ ಹಿಂದೆ ಬಿಡ್ಬೇಕು ಅಂತಾ fast ಆಗಿ ಹೋಗ್ತಾ ಇದ್ದೆ…
“heart ಅನ್ನೋ engineಗೆ ಉಸಿರು ಅನ್ನೋ basic fuel ಬೇಕು ಅಂತಾರೆ… ಉಸಿರೇ ಇಲ್ಲಾ ಅಂದ್ರೇ heart break ಆಗೋದು ಸಾಮಾನ್ಯ…ಹಾಗೇ ನನ್ bike engine ಕೂಡಾ ! ಜೀವಾ ಇರೋ heart ತಾನೇ damage ಆಗಿರೋವಾಗಾ ನಿರ್ಜೀವ engine ಏನು ಮಾಡುತ್ತೇ…ತುಂಬಾ speed ಆಗಿ ಹೋಗ್ತಾ ಇರೋವಾಗ engine ಹಾಳಾಯ್ತು.. ನೆನಪುಗಳಿಗೇ break ಹಾಕೋಕೆ ಆಗದವನಿಗೆ bike ನಾ break press ಮಾಡ್ಬೇಕು ಅನ್ನೋದೇ ಮರೆತು ಹೋಯ್ತು…ನನ್ life ತರಾನೇ bike ಕೂಡಾ skid ಆಯ್ತು… ಮುಂದಿಂದ ಬರ್ತಾ ಇದ್ದ bus ಒಂದೇ ನೆನಪು....

“Don’t worry oxygen mask ಹಾಕಿದ್ದೀವಿ ಉಸಿರಾಟಕ್ಕೇನೂ ತೊಂದರೆ ಇಲ್ಲ.. “
Doctor ಹೇಳ್ತಾ ಇರ್ಬೇಕೂ… ಅವ್ರ ಮಾತು ಕೇಳಿ ನಗು ಬಂತು…”ಉಸಿರಾಟಕ್ಕೇನೂ ತೊಂದ್ರೆ ಇಲ್ಲ ಅನ್ನೋದನ್ನ ಕೇಳಿ!!!
ನನ್ friend ನಿಂತಿದ್ದ ಪಕ್ಕದಲ್ಲಿ..ಅವ್ನು ಇದ್ಕಿಂತ ಜಾಸ್ತಿ ಮಾಡೋದು ಏನೂ ಇರ್ಲಿಲ್ಲ…
ಎಷ್ಟು ದಿನಾ ಹಾಗೇ ಕಳೀತು ಗೊತ್ತಾಗ್ಲಿಲ್ಲ, ಅವ್ಳೂ ಬಂದು ನೋಡಿ ಹೋಗಿರ್ಬೇಕು!!...
ಆವತ್ತು ಮುಂಜಾನೆ oxygen mask ತೆಗೆದ್ರು…ಯಾಕೋ first time ಉಸಿರಾಡೋದು ತುಂಬಾ ಕಷ್ಟ ಅನ್ನಿಸ್ತು….
ಹಾಗೇ ಸ್ವಲ್ಪ ಹೊತ್ತಿನ ನಂತರ ಎದ್ದು ನಡೆಯೋಕೆ try ಮಾಡ್ದೆ….
ಪಕ್ಕದ ವಾರ್ಡನಲ್ಲಿ ಒಬ್ಬ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ bed ಮೇಲೆ ಹೂಗುಚ್ಛ ಇಡ್ತಾ ಇದ್ದ… ಯಾಕೆ ಅಂತ ಕೇಳೋಣಾ ಅನ್ನಿಸ್ತು ಕೇಳ್ದೆ…
ಅದ್ಕೆ ಅವ್ನು “ ನಾನು ನಿನ್ನ ವಯಸ್ನಲ್ಲಿ ಇರೋವಾಗ ನನ್ನ ಹೃದಯಕ್ಕೆ ಒಬ್ಳು ತುಂಬಾ ಹತ್ತಿರದವಳು ಇದ್ಲು.. ಆ ಹೃದಯಕ್ಕೆ ಹತ್ತಿರವಾಗಿದ್ದವಳು ದೂರವಾದ ಜಾಗ ಇದು so ಅವ್ಳ ನೆನಪಿಗೆ ಪ್ರತೀ ಪರ್ಷದ ಆ ದಿನದಂದು ಇಲ್ಲಿ ಹೂ ಗುಚ್ಛ ಇಡ್ತೇನೆ” ಅಂದ…
ಅದ್ಕೆ ನಾನು “ ಅಲ್ಲಾ uncle ಅವ್ಳು ಇಲ್ಲಾ ಅಂದ್ರೂ ಬದ್ಕೋದು ಸಾಧ್ಯಾ ಆಯ್ತಾ ನಿಮ್ಗೆ?”
ಅದ್ಕೆ ಅವ್ನು “ life ನಲ್ಲಿ ಕಳ್ಕೊಳ್ಳೋದು ತುಂಬಾ ಇರುತ್ತೆ,ಹಾಗೇ ಪಡೆಯೋದೂ ಕೂಡಾ..ಅವ್ಳು ಹೋದ ನಂತರ ಅವ್ಳ ಹೆತ್ತವರು
ನನ್ನ ಹೆತ್ತವರಾದ್ರು ಹೀಗೇ ಅವ್ರಂತೇ ಮಕ್ಳನ್ನ ಕಳ್ಕೊಂಡ,ಮಕ್ಳಿಂದ ತಿರಸ್ಕೃತಗೊಂಡ ಹೆತ್ತವರ ಜೊತೆ ಇರ್ತೀನಿ, I mean ವೃಧ್ಧಾಶ್ರಮ ನಡೆಸ್ತಾ ಇದ್ದೀನಿ.. life ಯಾವತ್ತೂ ನಿಲ್ಲೋದಿಲ್ಲ… ಅದು ನಡೆಯೋದು ಕೇವಲ ಒಂದೇ ಒಂದು ಸತ್ಯದಿಂದ ಅದು HOPES ಅಥವಾ ಭರವಸೆ!!!” ಅಂತ ಹೇಳೀ ಹೊರಟು ಹೋದ್ರು….
ಯಾರದ್ದೋ ಹೆತ್ತವರನ್ನ ತನ್ನ ಹೆತ್ತವರಂತೆ ನೋಡ್ಕೊಂಡು ತನ್ನೆಲ್ಲಾ ನೋವನ್ನ ಮರೀತಾ ಇದ್ದ ಅವನನ್ನ ನೋಡಿ ನನ್ ಬಗ್ಗೆ ನಾಚಿಕೆ ಆಯ್ತು….
Life ಅಂದ್ರೇ ಅಷ್ಡೇ full of blessings…. ನನ್ನ ತುಂಬಾನೇ ಪ್ರೀತಿಸೋ parents,ನನ್ನ ಬೇಸರಾನ ಮರೆಸೋಕೆ ಶತಪ್ರಯತ್ನ ಮಾಡೋ friends ಎಲ್ಲಾ ಇದ್ರು…ಇದಕ್ಕಿಂತ ಜಾಸ್ತಿ ಏನು ಬೇಕು ಅನ್ನಿಸ್ತು…
ಹಾಗೇ ಹೊರಗೆ ಬಂದೆ…ಮುಂಜಾನೆ ತಂಗಾಳಿ ಬೀಸುತಿತ್ತು..! ಆ ತಂಗಾಳಿಯಲ್ಲೇನೋ ಬೆರೆತಿತ್ತು…ಅದನ್ನು ಉಸಿರಾಡಿದಾಗಲೆಲ್ಲಾ ಎಲ್ಲಾ ಹಗುರವಾದಂತೆ ಅನ್ನಿಸ್ತು…ಆ ಜೀವನೋತ್ಸಾಹದ ಉಸಿರು ಭರವಸೆ ಆಗಿತ್ತು…
ಹೊಸ ಉಸಿರಿನೊಂದಿಗೆ ಹೊಸ ಸೂರ್ಯೋದಯವಾಗುತ್ತಿತ್ತು…..
ಅಲ್ಲೆಲ್ಲಾ ಹೊಸ ಬೆಳಕು ಆವರಿಸಿತ್ತು…!!!!!!

ಕಥೆಗಾರ : ಶಿವಾನಂದನ ರಾವ್.

ಕಪ್ಪು – ಬಿಳುಪು

ಕಪ್ಪು -- ಬಿಳುಪು

“ You are an escapist” ನೀನು ಒಬ್ಬ ಪಲಾಯನವಾದಿ! “
ಅವ್ಳ ಸಿಹಿಯಾದ ಕಂಠದಿಂದ ಕಂಚಿನಂತ ತೀರ್ಪು ಕೊಟ್ಲು!!
“ಯಾಕ್ ಹೀಗೆ ಹೇಳ್ತೀಯಾ?” ಅಂತ ಕೇಳಿದ್ರೆ ಅವ್ಳು “ಮತ್ತೆ ಕಪ್ಪು ಇಷ್ಟಾನಾ ಬಿಳಿ ಇಷ್ಟಾನಾ ಅಂತ ಕೇಳಿದ್ರೆ ಕಪ್ಪು ಅಂತೀಯಲ್ಲಾ” ಅಂತ ಅವ್ಳು ಅಂದ್ಲು.
ನಾನಂದೇ “ಅಲ್ಲಾ ಕಪ್ಪು ಅಂದ್ರೆ ಕತ್ತಲು ಎಲ್ಲಾ ಮರೆಯಾಗೋ ಹೊತ್ತು,ಕತ್ತಲಲ್ಲಿ ನಮ್ಮ ಮುಖದ ಭಾವನೇನೇ ಕಾಣಲ್ಲ,ಕತ್ಲಲ್ಲಿ ಸತ್ಯ ಸುಳ್ಳು ಎಲ್ಲಾ ಒಂದೇ” ಅಂತ ಅಂದೆ.
ಅದ್ಕೆ ಅವ್ಳು “ಇದ್ಕೇ ನಿನ್ನ ಪಲಾಯನವಾದಿ ಅನ್ನೋದು! ನೀನು ಬೇರೆಯವ್ರಿಂದ ಅಲ್ಲಾ ನಿನ್ನಂದ್ಲೇ ನೀನು ಓಡಿಹೋಗೋಕೆ ನೋಡ್ತೀಯಾ.. ಕತ್ಲು ಎಲ್ಲಾನೂ ಮುಚ್ಚಿಡ್ಬೋದು ಆದ್ರೆ ಅದು ಒಂದು ಚಿಕ್ಕ ಹಣತೆ ಬೆಳಕಿನಂದ ಅದು ಮಾಯ ಆಗುತ್ತೇ..

ಹೌದು ಅವ್ಳು ಹೇಳ್ತಾ ಇದಹದ ಹಾಗೆ ನಾನು ಪಲಾಯನವಾದಿ or any escapist.. ! ಮೊದ್ಲಿಂದನೂ ಯಾವುದ್ರಲ್ಲೂ ಗಟ್ಟಿಯಾಗಿ ನಿಂತವನಲ್ಲ.! ಚಂಚಲ ಅಂದ್ರೇ ಚೆನ್ನಾಗಿರುತ್ತೇ.. ಎಲ್ಲರೂ ಬೆಳಕನ್ನ ಇಷ್ಟ ಪಟ್ರೇ ನಾನು ಕತ್ಲನ್ನ ಇಷ್ಟ ಪಟ್ಟೆ. ಬೆಳಕಲ್ಲಿ ಕಾಣುವ ಪರಿಚಿತ ಆದ್ರೇ ಮನಸ್ಸಿಗೆ ಅರ್ಥವಾಗ್ದೇ ಇರೋ ಅಪರಿಚಿತ ಮಿತ್ರರು,ಬಂಧು ಬಳಗ ಎಲ್ಲಕ್ಕಿಂತ ಇವೆಲ್ಲರನ್ನು ಮರೆಸೋ ಕತ್ಲು ಇಷ್ಟಾ ನಂಗೇ!
ಮುಂಜಾನೆ ಮೂಡುವ ಸೂರ್ಯನನ್ನಾ ಆರಾಧಿಸುತ್ತಾ “ಧಿಯೋಯೋನ ಪ್ರಚೋದಯಾತ್” ಜ್ಞಾನದ ಬೆಳಕನ್ನು ಹರಿಸು ಅಂತ ಪ್ರಾರ್ಥಿಸುವ family ಯಲ್ಲಿ ನನ್ನಂತ ತಮಃ ಪ್ರಿಯ ಹೇಗೆ ಹುಟ್ಟಿದ ಅನ್ನೋದೇ ಆಶ್ಚರ್ಯ!.

ಹಾಗಂತ ಅವ್ಳು ಏನೂ ಕಪ್ಪು ಅಲ್ಲ.. ಚಂದ್ರನ ಬೆಳಕಂತೇ ಇದ್ಲು ಅವ್ಳು..
“ಎಲ್ಲದ್ರಲ್ಲೂ ಕಪ್ಪು ಇಷ್ಟ ಪಡ್ತಿರೋ ನಿಂಗೆ ನನ್ನಂತ ಬಿಳಿ ಜಿರಳೆ ಯಾಕಪ್ಪಾ ಇಷ್ಟ ಆದ್ಲು?” ಅಂತ ಕೇಳಿದ್ರೆ, ನಾನು “ನೀನು ತುಂಬಾ ಬೆಳ್ಳಗಿದ್ದೀಯಾ ನೀನು black ಡ್ರೆಸ್ ಹಾಕಿದ್ರೇ ನಿಂಗಿಂತ black ಡ್ರೆಸ್ ಗೇ ಕಳೆ ಬರುತ್ತೇ ಅಂತ ಉತ್ತರ ಕೊಟ್ಟು escape ಆಗ್ತಾ ಇದ್ದ escapist ನಾನು!..
ಹಾ ಕಪ್ಪು ಡ್ರೆಸ್! ನಾನ್ ಇಷ್ಟ ಪಟ್ಟಿದ್ದಕೋ ಅಥ್ವಾ ಪ್ರಪಂಚದ ಕಪ್ಪನ್ನೆಲ್ಲಾ ಕಿತ್ತು ಹಾಕ್ಬೇಕು ಅಂತಾನೇನೋ ಅವ್ಳು ಕಪ್ಪು ಕೋಟು ತೊಟ್ಕೊಂಡ್ಲು ಅರ್ಥಾತ್ law join ಆದ್ಲು..
ಯಾವಾಗ್ಲೂ ಬಿಳಿಯಾದ ನ್ಯಾಯದೇವತೇನ ತೋರಿಸಿ “ ನೋಡು ಸತ್ಯ ಅಂದ್ರೇ ಬಿಳಿ ಅದ್ಕೇ ಅವ್ಳು ಬಿಳಿ ಇನ್ನಾದ್ರೂ ಬೆಳಕನ್ನ ಪ್ರೀತಿಸು ,ಸತ್ಯ ವಾಸ್ತವಾನ ಪ್ರೀತಿಸು! “ ಅಂತ
ಅದ್ಕೆ ನಾನು ಆ ದೇವತೆಯ ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟೀನೇ ಚೆಂದ ಅನ್ತಾ ಇದ್ದೆ..
“ನಂಗೆ ನಿಜವಾಗ್ಲೂ ಭಯ ಆಗ್ತಾ ಇದೆ.. ಎಲ್ಲಾದ್ರಿಂದ್ಲೂ ಓಡಿಹೋಗೋ ನೀನು ನನ್ನ ಬಿಟ್ಟು ಹೋಗಲ್ಲ ಅನ್ನೋದಕ್ಕೆ Guarantee ಏನು?
ಭಯ! ಭಯದ ಬಣ್ಣ ಕಪ್ಪು ಅಂತಾರೆ. ಆ ಕಪ್ಪು ಬಣ್ಣ ಎಲ್ಲಾ ಬಣ್ಣಾನೂ ನುಂಗಿ ಹಾಕ್ತು! ಅವ್ಳ ಭಯ ನಿಜ ಆಯ್ತು!

ಬೆಳದಿಂಗಳಂತ ಪ್ರೀತಿ ಕೊಡ್ತಿದ್ದ ಅವ್ಳನ್ನಾ ಮತ್ತೆ ಎಲ್ಲಾ ಎಲ್ಲಾ ಬಿಟ್ಟು ಓಡಿ ಹೋಗ್ಬೇಕು ಅನ್ನಿಸ್ತಾ ಇತ್ತು.
ಯಾಕಂದ್ರೇ ಹುಟ್ಟಿದಾಗಿನಿಂದ ನಾನು ಪಲಾಯನವಾದಿ!
ನನ್ನಿಂದ್ಲೇ ನಾನು ಆತ್ಮ ಸಾಕ್ಷಿಯ ವಿರುಧ್ಧ ಓಟಕ್ಕಿಳಿದೆ!

ಭಾರತದಲ್ಲಿ ಯಾರಾದ್ರೂ ಎಲ್ಲಾ ಬಿಟ್ಟು ಪಲಾಯನ ಮಾಡಿದ್ರೆ ಅದು ಹಿಮಾಲಯಕ್ಕೇ!.. ನಾನೂ ಓಡಿದ್ದು ಅಲ್ಲಿಗೇ..
ಅಲ್ಲಿ ಹಿಮದಿಂದ ನೆಲಾನೂ ಬಿಳಿ ಮೋಡದಿಂದ ಆಕಾಶಾನೂ ಬಿಳಿ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಹೆದ್ರಿಸಿದ್ದು ಅಲ್ಲಿನ ಜ್ಙಾನದ ಬೆಳಕು.
ಸಾಧು ಸಂತರು ಹರಿಸಿದ ಜ್ಙಾನದ ಬೆಳಕಿನಿಂದಲೋ ಏನೋ ಅಲ್ಲಿ ಎಲ್ಲಾನೂ ಬಿಳಿ..
ನನ್ನೊಳಗಿನ ಕತ್ತಲಿಗೆ ಭಯ ಶುರುವಾಯ್ತು!
ಎಂದಿನಂತೇ ಬೆಳಕಿನಿಂದ ಓಡುವಂತೇ ಮತ್ತೆ ಆ ಬೆಳಕನ್ನು ಬಿಟ್ಟು ಕತ್ತಲನ್ನೇ ಜೀವಾಳವಾಗಿಟ್ಟು ಕೊಂಡ ಆ ಮಹಾನಗರಿಗೆ ಬಂದೆ.
ನಗರದ ಝಗಮಗ ಬೆಳಕಿನಲ್ಲೂ ಜನರ ಮನದ ಕತ್ತಲನ್ನು ಕಂಡು ಖುಷಿ ಪಟ್ಟೆ.
ಕತ್ತಲನ್ನೇ ಅಸ್ತ್ರವಾಗಿಸಿ ಅವರ ಮನದ ಕತ್ತಲನ್ನು ಇನ್ನಷ್ಟು ದಟ್ಟವಾಗಿಸಿದೆ,, ಕಪ್ಪು ಧಂಧೆ,ಕಪ್ಪು ಹಣ ಹೀಗೇ ಎಲ್ಲಾನೂ ಕಪ್ಪಾಯ್ತು.ಜನರ ಮನದ ಕಪ್ಪು ಛಾಯೆಯಾಗಿ ಭಯವನ್ನು ಹುಟ್ಟಿಸಿದ್ದೆ..ಕತ್ತಲು ನನ್ನನ್ನು ಬಾಚಿ ತಬ್ಬಿಕೊಂಡಿತ್ತು..

ನನ್ನ ಕಪ್ಪಿನ ಮೇಲಿನ ಕುರುಡು ಪ್ರೀತಿ ಸಾವಿರಾರು ಅಮಾಯಕರನ್ನು ಬಲಿ ತೆಗೆದು ಕೊಂಡಿತ್ತು! ಅಂತ ಅಮಾಯಕರಲ್ಲಿ ಅವನೂ ಒಬ್ಬ..
ಆ ಅಮಾಯಕನ ಶವ ಸಂಸ್ಕಾರಕ್ಕಾಗಿ ಹೀಗೇ ತೆರಳಿದ್ದೆ.. ಮೊದಲ ಬಾರಿ ನನ್ನ ಸಾಧನೆಯ ಫಲಿತಾಂಶ ನೋಡಲು…
ಅಲ್ಲಿ ಅವನನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಬಿತೆಯ ಮೇಲೆ ಇಟ್ಟಿದ್ದರು !
ಸಂಜೆಯ ನಸುಗತ್ತಲನ್ನು ಬಿಟ್ಟರೆ ಬೇರೆ ಎಲ್ಲಾ ಬಿಳಿ ಅಲ್ಲಿ. ಬಂದು ಬಾಂಧವರೆಲ್ಲಾ ಬಿಳಿ ವಸ್ತ್ರ ಉಟ್ಟಿದ್ದರು.ನಾನೇ ಅವನ ಸಾವಿಗೆ ಕಾರಣ ಅಂತ ಗೊತ್ತಿದ್ದರೂ ಅವರೊಳಿಗಿನ ಕಪ್ಪು ಭಯ ನನ್ನಿಂದ ಅವರನ್ನು ದೂರ ಇಟ್ಟಿತ್ತು.
ಅಷ್ಟರಲ್ಲಿ ಪುಟ್ಟ ಬಾಲಕ ಒಬ್ಬ ಬಂದು “ ಅಂಕಲ್ ನನ್ನ dady ಸತ್ತು ಹೋಗಿದ್ದಾರೆ ಅಂತೆ ಅದ್ಕೇ ಎಲ್ಲಾರೂ ಬಿಳಿ ಬಟ್ಟೆ ಹಾಕಿಕೊಂಡಿದ್ದಾರೆ ನೀವ್ಯಾಕೆ ಕಪ್ಪು ಬಟ್ಟೆ ಹಾಕಿಕೊಂಡಿದ್ದೀರಾ “
ಅಲ್ಲೆಲ್ಲೋ ಬೆಳ್ಳಿ ಮಿಂಚು ಹೊಳೆದಂತಾಯ್ತು.. ಎಲ್ಲಿ ಅಂತ ನೋಡಿದ್ರೆ ಅದು ಆ ಹುಡುಗನ ಕಣ್ಣಲ್ಲಿ.. ಸತ್ಯ ಮತ್ತು ಮುಗ್ಧತೆಯ ಬೆಳಕು, ಅದು ಸ್ಪಷ್ಟವಾಗಿ ಕಾಣುತ್ತಿತ್ತು..
ನನ್ನೊಳಗಿನ ಕಪ್ಪು ಕೂಡ ಅದುರಿ ಹೋಯ್ತು. ಆ ಅಮಾಯಕನ ಶವ ಉರಿದಂತೆಲ್ಲಾ ಅಲ್ಲಿದ್ದ ಕತ್ತಲು ಮಾಯವಾಗ್ತಾ ಇತ್ತು. ನನ್ನೊಳಗಿನ ಕತ್ತಲು ಕೂಡಾ,,
ನನ್ನೊಳಗಿನ ಕತ್ತಲನ್ನೆಲ್ಲಾ ಕಳೆದು ಕೊಳ್ಳ ಬೇಕೆಂದು ನ್ಯಾಯಕ್ಕೆ ಶರಣಾದೆ….
ಅದು ನ್ಯಾಯಾಲಯ. ಏನೋ ಅಲ್ಲಿದ್ದ ಬೆಳಕು ಇಷ್ಟವಾಗ್ತಾ ಇತ್ತು..
ಅಷ್ಟರಲ್ಲಿ ಅವಳು ಬಂದಳು.. ಅದೇ ಬಿಳಿ ಹುಡುಗಿ.. ನ್ಯಾಯಾಧೀಶರ ಪೀಠದಲ್ಲಿ ಕುಳಿತುಕೊಂಡ್ಳು..

ಹೇಳಲು ಏನಾ ಇರ್ಲಿಲ್ಲ! ಅವಳು ಕಪ್ಪು ಕೋಟಿನಲ್ಲಿ 20 ವರ್ಷದ ನಂತರನೂ ಸುಂದರವಾಗಿ ಕಾಣ್ತಾ ಇದ್ಲು.
ಕಲಾಪ ಶುರುವಾಯ್ತು.ನಾನೇ ಅಪರಾಧಿ ಅಂತೆಲ್ಲಾ ನನ್ನ ಅಪರಾಧವನ್ನೆಲ್ಲಾ ಒಪ್ಪಿಕೊಣಡ್ರೂ ನನ್ನ ಸುತ್ತಲಿನ ನಾನೇ ನಿರ್ಮಿಸಿದ ಕಪ್ಪು ಸೈನ್ಯ ಬಿಡಲಿಲ್ಲ. ನಾನು ಶರಣಾದರೆ ನನ್ನ ಕಪ್ಪು ಹಣದ ಚಿಂತೆ ಅವರಿಗೆ.
ನಾನು ಮತಿವಿಕಲ,ಭ್ರಾಂತ ಅಂತ ಕಪ್ಪು ಕೋಟಿನ ವಕೀಲರು ವಾದಿಸುತ್ತಾ ನಾನು ಶಿಕ್ಷೆಗೆ ಅರ್ಹನಲ್ಲ ಅಂತ ವಾದಿಸಿದ್ರು,ಸಾಬೀತು ಪಡಿಸಿದ್ರೂ ಕೂಡಾ!
“ಶಿಕ್ಷಿಸಿ ಶಿಕ್ಷಿಸಿ ಅಂತ ಅತ್ತು ಕೊಂಡ್ರೂ ಕೂಡಾ ಅದು ವ್ಯರ್ಥವಾಯ್ತು…
ಅವಳು “ನೀನು ಒಬ್ಬ ಮತಿ ವಿಕಲ ಭ್ರಾಂತ ಇರದೇ ಇರಬಹುದು. ಆದ್ರೆ ನೀನು ಒಬ್ಬ escapist. ಇದುವರೆಗೂ ಪ್ರೀತಿಸುತ್ತಾ ಬಂದ ಕಪ್ಪನ್ನಾದರೂ ಶಾಶ್ವತವಾಗಿ ಇಟ್ಟು ಕೊಂಡಿದ್ದೀಯಾ? ಅದರಿಂದಲೂ ಪಲಾಯನ. ವಾದ ಪ್ರತಿವಾದದಿಂದ ನೀನು ಮತಿವಿಕಲ ಎಂದು ಸಾಬೀತಾಗಿರುವುದರಿಂದ ನೀನು ಶಿಕ್ಷೆಗೆ ಅರ್ಹನಲ್ಲ,ನಿನ್ನನ್ನು ಶಿಕ್ಷಿಸದೇ ಬಿಡುವುದೇ ನಿಂಗೆ ಅತಿ ದೊಡ್ಡ ಶಿಕ್ಷೆ!…

ನಾನು ಪ್ರಯತ್ನಿಸಿದಷ್ಟು ಕಪ್ಪು ಮತ್ತೆ ನನ್ನ ಆವರಿಸುತಿತ್ತು…
ಅಷ್ಟರಲ್ಲಿ ಏನೋ ದೊಡ್ಡ ಸದ್ದು! ಗುಂಡಿನ ಸದ್ದು.. ನಾನು ನನ್ನ ಎದೆ ನೋಡಿಕೊಂಡ್ರೆ ಅಲ್ಲಿ ಕಪ್ಪು ರಂಧ್ರ. ಯಾರೋ ಅಮಾಯಕನ ಸಾವಿಗೆ ಪ್ರತೀಕಾರವಾಗಿತ್ತು!
ಎದೆಯಿಂದ ಸುರಿಯುತ್ತಿರುವ ರಕ್ತ ಕೂಡಾ ಕಪ್ಪು ಅನ್ನಿಸ್ತಾ ಇತ್ತು.. ಹೌದು ಕಪ್ಪು ಹೃದಯದ ಕಪ್ಪು ರಕ್ತ!
ಆದ್ರೂ ಏನೋ ತಂಪಾದಂತೆ ಅನ್ನಿಸ್ತಾ ಇತ್ತು.. ಎಲ್ಲಾ ಕಡೆ ಕತ್ತಲು ಆವರಿಸಿದಂತೆ ಅನ್ನಿಸ್ತು!
ನ್ಯಾಯದೇವತೆಯನ್ನ ನೋಡಿದೆ. ಆ ದೇವತೆಯ ಕಣ್ಣಿಗೆ ಕಟ್ಟಿದ್ದ ಕಪ್ಪು ಪಟ್ಟಿ ಹಾರಿ ಹೋಗಿತ್ತು. ಆ ದೇವತೆಯ ಬಿಳಿ ಬಣ್ಣವೇ ಕೊನೆಯ ಬಣ್ಣ!

ನನ್ನೊಳಗೆ ಜನ್ಮದಿಂದ ಆವರಿಸಿದ್ದ ಕತ್ತಲು ಮಾಯವಾಗಿ ಅಲ್ಲಿ ಕೇವಲ ಶುಭ್ರ,ಶಾಂತ,ಶ್ವೇತ ವರ್ಣ ಮಿನುಗುತ್ತಿತ್ತು!!!!!.....


ಕಥೆಗಾರ : ಶಿವಾನಂದನ ರಾವ್.

Wednesday, 8 August 2012

ಮನದಲ್ಲಿ ಮುದ್ರಿತ ಕಥೆ



ಮನದಲ್ಲಿ ಮುದ್ರಿತ ಕಥೆ


ಒಬ್ಬ೦ಟಿ ನಾನು,
ಜೊತೆಗಿರಲು ನೀನು,
ನಾನಾದಾಗ ನಾವು,
ಒಬ್ಬ೦ಟಿತನವೆ೦ದರೇನು?!!!

ಇದೇನಪ್ಪಾ ಇದು ಅನ್ನೊ ಪ್ರಶ್ನೆನಾ? ಇದು ನಮ್ಮ ಕಥಾ ನಾಯಕಿ ಗೊಣಗುತ್ತಿದ್ದ ಗೆರೆಗಳು. ದಾರಿಯಲ್ಲಿ ಹೋಗುತ್ತಿರಬೇಕಾದರೆ ಅವಳನ್ನು ಕ೦ಡೆ. ವಿಚಿತ್ರವಾಗಿ ಯೋಚಿಸುತಿದ್ದಳು. ನನ್ನ ಬಳಿ ಬ೦ದು ಈ ಸಾಲುಗಳನ್ನು ಓದಲು ಹೇಳಿದಳು. ನಾನು ಓದಿದೆ. ನನ್ನೊಳಗೂ ನಿಮ್ಮ೦ತೆಯೇ ಸಾವಿರಾರು ಪ್ರಶ್ನೆಗಳು ಮೂಡಿದವು. ಡೈರೆಕ್ಟಾಗಿ ಎನು ಎತ್ತ ಎ೦ದು ವಿಚಾರಿಸಲು ಸ೦ಕೋಚ. ಅದಕ್ಕೆ-"ಚೆನ್ನಾಗಿದೆ. ನೀನು ಬರೆದದ್ದೆ?", ಅ೦ತ ಕೇಳ್ದೆ. 
"ನಾನು ಬರೆದದ್ದಲ್ಲ, ಬಟ್ ಚೆನ್ನಾಗಿದೆಯಲ್ಲ?",ಅ೦ದ್ಲು. ಒ೦ದೆರಡು ಸೆಕೆ೦ಡುಗಳ ಕಾಲ ನಾನು ಕಾದೆ, ಇವಳು ಈ ಕವನ ಬರೆದವರು ಯಾರು? ಇದರ ಹಿ೦ದಿರುವ ಕಥೆ ಎನು ಅನ್ನೋದನ್ನ ಈಗ ಹೆಳ್ತಾಳೆ ಈಗ ಹೆಳ್ತಾಳೆ ಅ೦ತ. ಆದರೆ ಅವಳು ಈ ವಿಚಾರವಾಗಿ ಬಾಯಿ ಬಿಡಲಿಲ್ಲ. ಅವಳಷ್ಟಕ್ಕೆ ಮತ್ತೆ ಮತ್ತೆ ಆ ಕವನವನ್ನು ಓದುತ್ತಿದ್ದಳು. ಅವಳು ನನ್ನಲ್ಲಿ ಬ೦ದು ಕವನ ಓದಲು ಹೇಳಿದ್ದು, ಅದು ಚೆನ್ನಾಗಿದೆ ಅ೦ತ ನಾನು ಕಾ೦ಪ್ಲಿಮೆ೦ಟ್ ಮಾಡಿದಾಗ ಅವಳ ಮುಖದಲ್ಲಿ ನಾನು ಕ೦ಡ ಸ೦ತೋಷ, ಪದೇ ಪದೇ ಆ ನಲ್ಕು ಗೆರೆಯನ್ನು ಓದುತ್ತಿದದ್ದು, ಇದನ್ನೆಲ್ಲಾ ನೋಡಿದಾಗ ವಿಚಿತ್ರ ಅನ್ನಿಸ್ತು.  ನನ್ನ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲೆ೦ದು ಅವಳ ಬಳಿಗೆ ಹೋಗಿ-"ನಿನ್ನ ಹೆಸರೇನು? ಆ ಕವನ ಬರೆದವರು ಯಾರು?", ಎ೦ದು ಕೇಳಿದೆ. ಆದರೆ ಈ ಬಾರಿ ಅವಳು ಗಾಬರಿಗೊ೦ಡ ಮುಖಭಾವದಿ೦ದ ನಿ೦ತಲ್ಲಿ೦ದ ನಾಲ್ಕು ಹೆಜ್ಜೆ ದೂರ ಸರಿದಳು. ಈ ಮಧ್ಯೆ ನನ್ನ ಕಾನ್ಸ೦ಟ್ರೆಷನ್ ಹೋದದ್ದು ಕವನವಿದ್ದ ಪೇಪರಿನ ಐದನೇ ಗೆರೆಗೆ. ಯಾಕೆ ಕ್ವಷ್ಚನ್ ಮಾರ್ಕಾ?!!! ಮತ್ತೆ ಓದಬೇಡಿ ಆ ಸಾಲನ್ನು. ನೀವು ಓದಿದ್ದು ಸರಿ. ಐದನೇ ಗೆರೆ; ಆ ಪೇಪರಿನಲ್ಲಿ ಐದು ಗೆರೆಗಳಿದ್ದವು. ನಾಲ್ಕು ಗೆರೆಗಳ ಕವನದೊ೦ದಿಗೆ ,"ಇತೀ ನಿನ್ನ ಮಿತ್ರ", ಅನ್ನೋ ಕೊನೆಯ ಸಾಲು. ಇದೇನೋ ಲವ್ ಫ಼ೈಲ್ಯುರ್ ಕೇಸ್ ಇರಬೇಕು ಅ೦ತ ಅನ್ನಿಸ್ತು.

ಹೂವು ಮುಳ್ಳಿ೦ದ ಮಾಡಿದ ಚಾಪೆ ಈ ಜೀವನ. ನಮ್ಮ ಜೀವನದ೦ತೆ ಎಲ್ಲರ ಜೀವನದಲ್ಲೂ ವಿಭಿನ್ನ ಸ೦ಧರ್ಭಗಳು, ಘಟನೆಗಳು ಹಾಗು ಪಾತ್ರಧಾರಿಗಳು. ಇವಳ ಜೀವನದ ಕಥೆಯೂ ವಿಭಿನ್ನವಾಗಿರಬೇಕು ಅ೦ತ ಅನಿಸಿತು. ಈ ಹ೦ತದಲ್ಲಿ ಇವಳ ಬಗ್ಗೆ ತಿಳಿದುಕೊಳ್ಳಬೇಕು ಅನ್ನುವ ನನ್ನ ಕುತೂಹಲವು ತು೦ಬಾ ಹೆಚ್ಚಿತ್ತು. ಆದರೆ ಇವಳಿ೦ದ ಅದನ್ನು ತಿಳಿಯಳು ಸಾಧ್ಯವಿಲ್ಲ ಅ೦ತ ನನಗೆ ಖಚಿತವಾಗಿ ಗೊತ್ತಿತ್ತು. ಆಚೆ ಈಚೆ ಕಣ್ಣು ಹಾಯಿಸಿದೆ. ಅಲ್ಲಿದ್ದವರಲ್ಲಿ ಯಾರು ಕೂಡಾ ಇವಳ ಕೇರ್ ಟೇಕರ್ ಅ೦ತ ಅನ್ನಿಸಲಿಲ್ಲ. ಅನಾಥೆಯೋ ಅಥವಾ ಮನೆ/ಮೆ೦ಟಲ್ ಹಾಸ್ಪಿಟಲ್ಲಿ೦ದ ತಪ್ಪಿಸಿಕೊ೦ಡು ಬ೦ದಿರಬೇಕು ಅ೦ತ ಅನ್ನಿಸಿತು. ಕಾಇನ್ ಬಾಕ್ಸ್ ಬಳಸಿ ನ೦ಬರ್ ೧೦೦ ಡೈಯಲ್ ಮಾಡಿ ತಿಳಿಸಲು ನಿರ್ಧರಿಸಿದೆ. ರಿಸಿವರ್ ಎತ್ತಿ ಕಾಇನ್ ಹಾಕಿದೆ. ಇನ್ನೇನು ಡೈಯಲ್ ಮಾಡ್ಬೆಕೂ೦ತ ನ೦ಬರ್ ಬಟನ್ ಕಡೆ ಕೈ ಹಾಯಿಸಿದಾಗ, "ವೆರಿ ಗೂಡ್ ಗರ್ಲ್", ಅನ್ನೊ ಯಾರದೋ ಮಾತುಗಳ ಜೊತೆಗೆ ಆ ಹುಡುಗಿಯ ನಗುವಿನ ಸದ್ದು ಕೇಳಿಸಿತು. ಹಿ೦ತಿರುಗಿ ನೋಡಿದಾಗ ೪೦-೪೫ರ ವೊಳಗಿನ ವಯಸ್ಸಿನ ಹೆ೦ಗಸು ಈ ಹುಡುಗಿಯ ಜೊತೆ ಮಾತನಾಡುತ್ತಿದ್ದರು.

ನಾನು ಅವರ ಬಳಿ ಹೋಗಿ ಕೇಳಿದೆ-" ಇವರು ನಿಮಗೆ ಪರಿಚಿತರೇ?". ಅದಕ್ಕೆ ಅವರು ಗಾಬರಿ ಹಾಗು ಅಸಹಾಯಕ ಮುಖಭಾವದಿ೦ದ-"ಹೌದಮ್ಮಾ. ಯಾಕೆ ನಿನಗೇನಾದರೂ ತೊ೦ದರೆ ಕೊಟ್ಟಳೇ?!!!"-ಎ೦ದು ಕೇಳಿದರು. "ಹಾಗೇನಿಲ್ಲ ಅಮ್ಮಾ", ಎ೦ದು ಇಷ್ಟರವರೆಗೆ ನೆಡೆದ ಘಟನೆಯನ್ನು ಅವರಿಗೆ ವಿವರಿಸಿ," ನೀವು ಬರಲು ಸ್ವಲ್ಪ ತಡವಾಗುತ್ತಿದ್ದರೂ ನಾನು ಪೋಲೀಸರಿಗೆ ಕಾಲ್ ಮಾಡಿ ಬಿಡುತ್ತಿದ್ದೆ, ದಯವಿಟ್ಟು ನನ್ನನ್ನು ಕ್ಷಮಿಸಿ. " ಎ೦ದೆ. ಅವರು ಚಿ೦ತೆಯನ್ನು ಮುಸುಕಿದ ನಗುವಿನೊ೦ದಿಗೆ- "ಕ್ಷಮೆಯಾಕೆ ಕೆಳುತ್ತಿರುವೇ? ತಪ್ಪು ನಿನ್ನದಲ್ಲ." ಎ೦ದು ನನ್ನ ಮನೆಯ ದಾರಿಯತ್ತ ಹೆಜ್ಜೆ ಹಾಕಿದರು. ನಾನು ಅವರನ್ನು ಕರೆದು ಎತ್ತ ಕಡೆ ನಡೆಯುತ್ತಿರುವರು ಎ೦ದು ವಿಚಾರಿಸಿದೆ. ಅವರ ಉತ್ತರದಿ೦ದ ಅವರು ನಮ್ಮ ಮನೆಯ ಸ್ವಲ್ಪ ದೂರದಲ್ಲಿರುವುದೆ೦ದು ತಿಳಿಯಿತು. ನನ್ನ ಮನೆಯೂ ಅದೇ ದಾರಿಯಲ್ಲಿ ಬರುವುದು ಎ೦ದು ಹೇಳಿ ನಾನು ಅವರ ಜೊತೆ ಮನೆಯತ್ತ ನಡೆಯಲು ಪ್ರಾರ೦ಭಿಸಿದೆ.

"ನಿಮಗೇನು ಅಭ್ಯ೦ತರವಿಲ್ಲದಿದ್ದರೆ ನಾನು ನಿಮ್ಮೊಡನೆ ಒ೦ದು ಪ್ರಶ್ನೆ ಕೇಳಬಹುದೇ?" ಎ೦ಬ ಸ೦ಕೋಚದ ಪ್ರಶ್ನೆಯಿ೦ದ ನಾನು ನಮ್ಮಿಬ್ಬರ ಮಧ್ಯೆ ಇದ್ದ ಮೌನವನ್ನು ಮುರಿದೆ. "ಹಾ... ಕೇಳಿ. ನನಗೇನೂ ಅಭ್ಯ೦ತರವಿಲ್ಲ. ಇವಳ ಬಗ್ಗೆ ಕೇಳುವವರ ಸ೦ಖ್ಯೆ ಒ೦ದಲ್ಲ ಎರಡಲ್ಲ, ಹಲವು. ಈಗೀಗ ನನಗೂ ಅಭ್ಯಾಸವಾಗಿ ಬಿಟ್ಟಿದೆ.", ಎ೦ದರು. ಅವರ ಈ ಉತ್ತರ ಮುಖಕ್ಕೆ ಹೊಡೆದ೦ತಿತ್ತು. " ನೀವು ಇವರಿಗೆ ಏನಾಗಬೇಕು? ಇವರು ಹೀಗಾಗಲು ಕಾರಣವೇನು? ಆ ಕವನ ಬರೆದವರು ಯಾರು?", ಒ೦ದು ಪ್ರಶ್ನೆ ಎ೦ದು ಹೇಳಿದ ನನ್ನ ಬಾಯಿಯಿ೦ದ ಪ್ರಶ್ನೆಗಳ ಮಾಲೆಯೇ ಉದುರಿತು. ಅವರು ಚಿಕ್ಕ ನಗೆಯೊ೦ದಿಗೆ ವ್ಯ೦ಗ್ಯವಾಗಿ, "ಈ ನಿಮ್ಮ ಪ್ರಶ್ನೆಗೆ ಒ೦ದು ಉತ್ತರ ನೀಡಲಾ... ಇಲ್ಲಾ ಮೂರು ಉತ್ತರಾನಾ?!!!", ಎ೦ದು ಕೇಳಿದರು. ನಾನು ಅವರತ್ತ ಕಣ್ಣು ಹಾಯಿಸಿ ಸ್ಮೈಲ್ ಮಾಡಿದೆ. "ಹೀಗೆ ತಮಾಷೆಗೆ ಹೇಳಿದೆ. ಬೇಜಾರು ಮಾಡಿಕೊಳ್ಳಬೇಡಿ.", ಎ೦ದ ಅವರು ಅವರ ಜೀವನದ ಕಥೆಯನ್ನು ಹೇಳಲು ಪ್ರಾರ೦ಭಿಸಿದರು. "ನಾನು ಸ೦ಹಿತಾ. ಈಕೆಯ ತಾಯಿ. ಈಕೆ ಸಮಾಯ. ಇವಳಿಗೀಗ ೨೪ ವರ್ಷ. ನಮ್ಮಿಬ್ಬರನ್ನು ಬಿಟ್ಟರೆ ನಮ್ಮ ಮನೆಯಲ್ಲಿ ನನ್ನ ಯಜಮಾನರಿದ್ದಾರೆ. ನಾಲ್ಕು ಜನ ನೋಡಿ ಹೊಗಳುವ೦ತಹ ಕುಟು೦ಬವಾಗಿತ್ತು ನಮ್ಮ ಕುಟು೦ಬ. ಈವತ್ತು ನಮ್ಮನ್ನು ನೂಡಿದರೆ ಅದೇ ಜನರು ಅಯ್ಯೊ ಪಾಪ ಅನ್ನುತ್ತಾರೆ. ಇವಳು ಎ೦ಟು ವರ್ಷದವಳಾಗಿದ್ದಾಗ ನಮ್ಮ ಪಕ್ಕದ ಮನೆಯನ್ನು ಒ೦ದು ಕುಟು೦ಬದವರು ಕೊ೦ಡುಕೊ೦ಡರು. 
ಅನ೦ತರ ಅವರು ಅದೇ ಮನೆಯಲ್ಲಿ ವಾಸ ಮಾಡಲು ಪ್ರಾರ೦ಭಿಸಿದರು. ಅವರದು ನಾಲ್ಕು ಮ೦ದಿಯಿ೦ದ ಕೂಡಿದ ಕುಟು೦ಬ. ತ೦ದೆ, ತಾಯಿ ಮತ್ತು ಎರಡು ಗ೦ಡು ಮಕ್ಕಳು. ಅವರ ಕಿರಿಯ ಮಗನ ಹೆಸರು ಶಮಿತ್. ಅವರು ನಮ್ಮ ಮನೆಯ ಪಕ್ಕದ ಮನೆಗೆ ಶಿಫ಼್ಟ್ ಆದ ಮೊದಲನೆ ದಿನ ಜೊತೆಗೆ ಆಡಿ ಆದ ಪರಿಚಯ ಸಮಾಯ ಮತ್ತು ಶಮಿತ್ನದ್ದು. ಆ ಮೇಲೆ ಕ್ಲಾಸ್ನಲ್ಲಿ ಬೆಳೆದ ಸ್ನೇಹ. ಮೊದಲನೇ ಮಾತಿನಲ್ಲಿ ಬಹುಶಹ ಇವಳೂ ಕೂಡಾ ಈ ಸ್ನೇಹ ದ್ರಢವಾದ ಸ್ನೇಹಕ್ಕೆ ಬದಲಾಗುತ್ತೆ ಅ೦ತ ಅ೦ದುಕೊ೦ಡಿರಲಿಲ್ಲ ಅನ್ಸುತ್ತೆ. ಒ೦ದೇ ಸ್ಕೂಲಲ್ಲಿ, ಒ೦ದೇ ಕ್ಲಾಸಲ್ಲಿ, ಒ೦ದೇ ಬೆನ್ಚಲ್ಲಿ ಕೂತು ಓದಿದರು. ಅವರು ಕಾಲೇಜಿನಲ್ಲಿ ಓದುತ್ತಿದ್ದಾಗ ಕೆಲವರು ಇವರು ಅಣ್ಣಾ-ತ೦ಗಿ ಅ೦ದುಕೊಳ್ಳುತ್ತಿದ್ದರೆ ಇನ್ನೂ ಕೆಲವರು ಇವರು ಪ್ರೇಮಿಗಳು ಅ೦ದುಕೊಳ್ಳುತ್ತಿದ್ದರು. ಇಬ್ಬರಿಗೂ ಇವರ ಸ್ನೇಹ ಅತ್ಯಮೂಲ್ಯವಾಗಿತ್ತು.".

ಅವರ ಜೀವನದಲ್ಲಿ ಅವರಿಬ್ಬರ ಮಧ್ಯೆ ಜಗಳವಾದದ್ದು ಒ೦ದೇ ಸಲ. ಕಾರಣ ಶಮಿತ್ ಈಕೆಯನ್ನು ಸಿಗುತ್ತೇನೆ೦ದು ಇವಳಿಗೆ ಕಾಲೇಜಿನ ಆವರಣದಲ್ಲಿ ಕಾಯಲು ಹೇಳಿ ಬಾರದೇ ಇದ್ದದ್ದು. ಇವಳು ಅವನಿಗೆ ಕಾದು ಕಾದು ಕತ್ತಲಾಯಿತೆ೦ದು ಮನೆಗೆ ಬ೦ದವಳು ಬ್ಯಾಗ್ ಇಟ್ಟು ಅವನು ಬರುತ್ತೇನೆ೦ದು ಬರಲಿಲ್ಲ, ಎನಾಯ್ತೊ ಎನೋ, ವಿಚಾರಿಸಿಕೊ೦ಡು ಬರ್ತಿನಿ ಅ೦ತ ಅವನ ಮನೆಗೆ ಹೋದಳು. ಹಿ೦ದೆ ಬರುವಾಗ ಅಳುತ್ತಾ ಬ೦ದಳು. ಎನಾಯ್ತು ಅ೦ತ ಕೇಳಿದಾಗ ನಾನು ಅವನ ಮನೆಗೆ ಹೋಗುತ್ತಿರಬೇಕಾದರೆ ದಾರಿಯಲ್ಲಿ ಅವನು ಹಾಗು ಅವನ ಪ್ರೇಯಸಿ ಹರಟೇ ಹೊಡೆಯುತ್ತಾ ಬರುತ್ತಿದ್ದರು.
ಈಗ ಅವನಿಗೆ ನನ್ನ ಸ್ನೇಹ ಬೇಡ ಅ೦ತ ಅನ್ನಿಸುತ್ತೆ. ಅಟ್ಲೀಸ್ಟ್ ನ೦ಗೆ ಹೇಳಿ ಅದ್ರು ಹೊಗಬಹುದಿತ್ತಲ್ಲ. ಬರಲ್ಲ ಅ೦ತ ಹೇಳೊವಷ್ಟು ನನ್ನ ನೆನಪಿರಲಿಲ್ಲ ಅ೦ತ ಅನ್ಸುತ್ತೆ . ನಾನೇ ಹುಚ್ಚಿ, ಅವನು ಬರಲಿಲ್ಲ ಅ೦ತ ಗಾಬರಿಗೊ೦ಡದ್ದು ನನ್ನ ತಪ್ಪು ಅ೦ದಳು. ನಾನು ಹೋಗಿ ವಿಚಾರಿಸಿದಾಗ ತಿಳಿಯಿತು ಅವನು ಇವಳನ್ನು ಸಿಗಲೆ೦ದು ಹೊರಡುತ್ತಿರುವಾಗ ಅವನ ಗೆಳೆಯರು ಅವನಿಗೆ ಕಾಲ್ ಮಾಡಿ ಅವನ ಪ್ರೆಯಸಿಗೆ ಅಕ್ಸಿಡೆ೦ಟ್ ಆಗಿದೆ ಎ೦ದು ಹೇಳಿದ್ದರು. ವಿಷಯ ತಿಳಿದು ಗಾಬರಿಗೊ೦ಡ ಶಮಿತ್ ಅವಳನ್ನು ನೋಡಲೆ೦ದು ಹಾಸ್ಪಿಟಲ್ಗೆ ಹೋದನು. ಆಮೆಲೆ ತಿಳಿಯಿತು ಅ೦ದು ಎಪ್ರಿಲ್ ಒ೦ದು. ಅವರು ಕಪಿ ಚೇಷ್ಟೆ ಮಾಡಿದ್ದರು ಅಷ್ಟೆ. ಅದೊ೦ದು ಚಿಕ್ಕ ಮಿಸ್ ಅ೦ಡರ್ಸ್ಟಾ೦ಡಿ೦ಗ್ನಿ೦ದ ಆದ ದೊಡ್ಡ ಜಗಳ. ಆ ಸ೦ಧರ್ಭದಲ್ಲಿ ಇವಳ ಕೋಪ ಇಳಿಸಲು ಅವನು ಪಟ್ಟ ಕಷ್ಟ ಅವನಿಗೇ ಗೊತ್ತು. ಕೊನೆಗೆ ಈ ನಾಲ್ಕು ಗೆರೆಯ ಕವನ ಅವಳನ್ನ ಕನ್ವಿ೦ಸ್ ಮಾಡಿತು.", ಎ೦ದು ಆ ಕವನವಿದ್ದ ಪೇಪರ್ ತೋರಿಸುತ್ತಾ ಹೇಳಿದರು.

"ಓಹೋ... ಹಾಗಾದರೆ ಇವಳು ಹೀಗಾಗಲಿಕ್ಕೆ ಕಾರಣ?", ಎ೦ದು ಮಧ್ಯೆ ಬಾಯಿ ಹಾಕಿ ನಾನು ಕೇಳಿದೆ.

"ಹೀಗೆ ಇದ್ದ ಇವರ ಸ್ಟ್ರಾ೦ಗ್ ಫ಼್ರೆ೦ಡ್ಷಿಪಿಗೆ ಯಾರ ದ್ರುಷ್ಠಿ ತಾಗಿತೋ ಯೇನೋ. ಒ೦ದು ವರ್ಷದ ಹಿ೦ದೆ ಒ೦ದು ದಿನ ಸ೦ಜೆ ನಾನು ಕಿಚನಲ್ಲಿ ಟೀ ಮಾಡ್ತಾ ಇದ್ದೆ. ಸಮಾಯ ಹಾಲ್ನಲ್ಲಿ ಟಿ.ವಿ. ನೋಡ್ತಾ ಇದ್ಲು. ಫೋನ್ ರಿ೦ಗ್ ಆಯ್ತು. ಫೊನ್ ಎತ್ತಿ ಮಾತನಾಡಿದವಳು, ಆಚೆಗಡೆಯಿ೦ದ ಬ೦ದ ಸುದ್ದಿ ಕೇಳಿ ನಿ೦ತ೦ತೇ ನಿ೦ತಳು. ನಾನು ಫೋನ್ ತೆಗೆದುಕೊ೦ಡು ಮಾತನಾಡಿದೆ. ಆವಾಗ ತಿಳೀತು ಶಮಿತ್ ಆಕ್ಸಿಡೆ೦ಟ್ನಲ್ಲಿ ತೀರಿ ಹೋಗಿದ್ದಾನ್ನೆ೦ದು. ತನ್ನ ಪ್ರಾಣ ಸ್ನೇಹಿತನ ತಾಯಿ ಆತನು ಅಗಲಿ ಹೊಗಿದ್ದಾನೆ೦ದು ಹೇಳಿದ್ದು ಕೇಳಿ ಶಾಕ್ ಆದ ನನ್ನ ಸಮಾಯ, ಆವತ್ತಿನಿ೦ದ ಈವತ್ತಿನವರೆಗೆ ಹೀಗಿದ್ದಾಳೆ.", ಎ೦ದರು. ಇದುವರೆಗು ತನ್ನ ನೋವನ್ನು ಮನದಲ್ಲಿ ಬಚಿಟ್ಟಿದ್ದ ಆ ತಾಯಿ ಈ ಕೊನೆಯ ಮಾತು ಹೇಳುತ್ತಿದ್ದ೦ತೆ ಜೋರಾಗಿ ಅತ್ತರು. ನನಗೆ ಏನು ಹೇಳಬೆಕೆ೦ದು ತೋಚದೆ ಹೋಯಿತು. ಹೇಗೋ ಒ೦ದೆರಡು ಸಮಾಧಾನದ ಮಾತುಗಳನ್ನು ಹೇಳಿ ಅವರನ್ನು ಅವರ ಮನೆಗೆ ಬಿಟ್ಟು ನಾನು ನಮ್ಮ ಮನೆಯ ಕಡೆಗೆ ನಡೆದೆ.

ನಾನೇನೋ ಅವರನ್ನು ಅವರ ಮನೆಗೆ ಬಿಟ್ಟು ನನ್ನ ಮನೆಯ ದಾರಿ ಹಿಡಿದೆ. ಆದರೆ ಅವರು ಹೇಳಿದ ಆ ದಾರುಣ ಕಥೆ ನನ್ನ ಮನದಲ್ಲಿ ಮುದ್ರಿತ ಕಥೆಯಾಗಿ ಉಳಿಯಿತು.


 ಗೀಚಿದ್ದು :~ ರಂಜಿತಾ ಹೆಗ್ಡೆ. ಆರ್

Tuesday, 17 July 2012

ನೀಲಿ

ನೀಲಿ

“ನೀಲೆ ನೀಲೆ ಅಂಬರ್ ಸೇ ಚಾಂದ್ ಜಬ್ ಆಯಾ ಹೇ!” old ಹಿಂದಿ ಸಾಂಗ್ ಅವ್ಯಾಹತವಾಗಿ FM ನಲ್ಲಿ ಬರ್ತಾ ಇತ್ತು.!
ಒಂದ್ ಟೈಮ್ ನಲ್ಲಿ ನನ್ನ  ರಿಂಗ್ ಟೋನ್ ಆಗಿದ್ದ ಸಾಂಗ್!
ನೀಲಿ ಅಂದ್ರೆ ಅಷ್ಟು ಇಷ್ಟ ಪಡ್ತಿದ್ದೆ! ನೀಲಿ ನೀಲಿ ಆಗಿರೋ ಆಕಾಶಕ್ಕೆ ಸ್ವಲ್ಪ ಮೋಡಾ ಬಂದ್ರೂ ಸಪ್ಪೆಯಾಗ್ತಿದ್ದ ಕಾಲ.!

ಈ ಎಲ್ಲಾ ನೀಲಿ ಹುಚ್ಚಿನ ಆರಂಭ ಆ ಹುಡುಗಿಯ ನೀಲಿ ಕಣ್ಗಳಿಂದ!!... ಸಾಗರದಷ್ಟು ನೀಲಿಯಾಗಿದ್ದ ಅವಳ ಕಣ್ಗಳಲ್ಲೇ ಮುಳ್ಗಿ ಹೋಗಿದ್ದೆ.!! ಅವ್ಳ ಕಣ್ಗಳಲ್ಲೇ ಕಣ್ಣಿಟ್ಟು,ಅವ್ಳ ನೀಲಿ ಕಂಗಳಲ್ಲಿ ನನ್ನೇ ನೋಡ್ತಾ  “ ಈ  ಕಣ್ಣಿಗೆ Full time ರೆಪ್ಪೆ ಆಗೋ ಚಾನ್ಸ್ ಸಿಕ್ಕಿದ್ರೇ ಈಗ್ಲೇ ರೆಡಿ”  ಅಂತ  ಗುನುಗಿದ್ದೆ,,, ಅದ್ಕೆ ಅವ್ಳು ನಕ್ಕು “ ಹಾಗಾದ್ರೆ ನಾನ್ಯಾವತ್ತೂ ಕಣ್ಮುಚ್ಚಿನೇ ಇರ್ತೀನಿ, ಯಾವತ್ತೂ ಕಣ್ಣು ಮತ್ತು ರೆಪ್ಪೆನಾ ದೂರಾ ಮಾಡೋದೇ ಇಲ್ಲ”  ಅಂದ್ಲು!!!
ಯಾಕೋ ಕಣ್ಮುಚ್ಚೋ ವಾಕ್ಯ ಕೇಳಿ ನೋವಾಯ್ತು!  “ಇಲ್ವೇ ಈ ಕಣ್ಣಲ್ಲೇ ನನ್ ಜೀವಾ ಇರೋದು, ಯಾವತ್ತೂ ಇದ್ರೊಂದಿಗೆ ಕಣ್ಣಾ ಮುಚ್ಚಾಲೆ ಆಡ್ಬೇಡಾ” ಅಂತ ಅತ್ಬಿಟ್ಟೇ… ಹುಡ್ಗ ಆಗಿ ನಾನು ಅಳೋದನ್ನ ನೋಡಿ ಅವ್ಳು ನಗೋಕೆ ಷುರು ಮಾಡಿದ್ಲು.. ಆ ನಗುವಿಗೋಸ್ಕರ ಲೈಫ್ ಟೈಮ್ ಅಳೋಕೂ ರೆಡಿ ಅನ್ನಿಸ್ಬಿಟ್ಟಿತ್ತು..!
ಹೀಗೆ ಪ್ರೀತಿಯ ವಸಂತ ಕಾಲ ಸಾಗ್ತಾ ಇರೋವಾಗ ಮಳೆಗಾಲ ಬಂತು.! ನೀಲಿ ಆಕಾಶದ ತುಂಬಾ ಕಪ್ಪು ಮೋಡ.! ನಮ್ ಪ್ರಿತಿಲೂ!! “ಬ್ರೇಕ್ ಅಪ್” ಅಂತಾ ಹೇಳೀ ಸಿಡಿಲು ಸಿಡಿಸಿದ್ಲು!!.. ಪ್ರೀತೀಲಿ ನೆಂದಿದ್ದವ ಹಾಳು ಮಳೇಲಿ ಒಳ್ಳೆ ಕಾಗೆ ತರಾ ನೆಂದೆ!!!
ಲೈಫ್ ನಿಂದಾ ನೀಲಿ ಕಣ್ಮರೆ ಆಗ್ತಾ ಬಂತು! ಇಷ್ಟ ಪಟ್ಟು ಕೊಂಡ್ಕೊಂಡಿದ್ದ ಬ್ಲೂ ಷರ್ಟ್ ಗೋದ್ರೇಜ್ ನ ಮೂಲೆಗೆ ಸೇರಿತು!! ನೀಲೆ ನೀಲೆ ಅಂಬರ್ ವಾಲಾ ರಿಂಗ್ ಟೋನ್ ಹೋಗಿ ಮೊಬೈಲ್ ಸೈಲೆಂಟ್ ಆಯ್ತು.! ನನ್ ತರ!!!
ಆದ್ರೂ ಎಲ್ಲೋ ಮೋಡ ಕರಗಿ ಮಳೆಯಾಗಿ ಮತ್ತೆ ನೀಲಿ ಕಾಣ್ಬಹುದೇನೋ ಅನ್ನೋ ಆಸೇಲಿ ನಿರಂತರವಾಗಿ   ಕನ್ವಿನ್ಸ್ ಮಾಡೋಕೆ ನೀಲಿ ಕಣ್ಣಿನ ಹುಡ್ಗೀಗೆ ಮೆಸೇಜ್ ಮಾಡ್ತಾ ಇದ್ದೆ,, ಆದ್ರೆ Reply ಶೂನ್ಯ!!!!!!!.
ಆವತ್ತು ಏನ್ ಪುಣ್ಯನೋ ಬೆಳಗ್ಗೇನೇ ನೀಲಿ ಆಕಾಶ ನಗ್ತಾ ಇತ್ತು..ಜೊತೇಗೇ ಬೋನಸ್ ಆಗಿ ಅವ್ಳ ಮೆಸೇಜ್ ಬೇರೆ ಇತ್ತು!! ಎದ್ದವ್ನೇ ಪ್ರಭಾತೇ ಮೊಬೈಲ್ ದರ್ಶನ ಮಾಡಿ,ಅದೂ ಅವ್ಳ ಮೆಸೇಜ್ ನೋಡಿ ಪುನೀತನಾದೆ!! ಆತುರದಿಂದ ಮೆಸೇಜ್ ಓಪನ್ ಮಾಡ್ದೇ!!..
“ಸಾರಿ ಡಿಯರ್ ತುಂಬಾ ದಿನದಿಂದ ಮೆಸೇಜ್ ಮಾಡ್ದೇ ಹರ್ಟ್ ಮಾಡ್ದೇ ಸಾರಿ!,ಈವತ್ತು ಮಾರ್ನಿಂಗ್ 10 ಗಂಟೇಗೆ ಪಾರ್ಕ್ ಗೆ ಬರ್ತೀಯಾ ಅದೇ ಸೇಮ್ ಪಾರ್ಕ್ ಯಾವಾಗ್ಲೂ ಮೀಟ್ ಆಗ್ತಿದ್ದ ಪಾರ್ಕ್!! ಹಾಂ ಪ್ಲೀಸ್  ಫೇವರೇಟ್ ಬ್ಲೂ ಷರ್ಟನ್ನೇ ಹಾಕೊಂಡು ಬಾ..ಮಿಸ್ ಮಾಡ್ಬೇಡಾ ಸೀ ಯೂ!.”
ಖುಷೀಲೀ ಮೊಬೈಲ್ ಎಸೀದೇ ಇದ್ದದ್ದು ಪುಣ್ಯ!! ನೀಲಿ ನನ್ ಫೇವರೇಟ್ ಯಾಕಂದ್ರೇ ನಿನ್ ಕಣ್ಣಿನ ಕಾರಣದಿಂದ ಅಂತ ಹೇಳ್ಬೇಕು ಅನ್ದ್ ಕೊಂಡೆ..ಆದ್ರೇ ಆ ಟೈಮಲ್ಲಿ ಮಾತು ಬೇಡಾ ಆಗಿತ್ತು…
ಹಾಂ! ಟೈಂ!! ನಾನ್ ಎದ್ದ ಶುಭ ಮಹೂರ್ತ ನೋಡ್ದೆ!! 9am!!
ಬಾಂಬ್ ಬಿದ್ಹಾಗೆ ಅನ್ನಿಸ್ತು!! ಟೈಂ ಬಾಂಬ್ ಅಂದ್ರೇ ಇದೇ ಇರ್ಬೇಕು ಅಂತ ಅನ್ನಿಸ್ತು!! ಒಳ್ಳೇ ಬಾಲಕ್ಕೇ ಬೆಂಕಿ ಬಿದ್ದ ಹನುಮನ ತರ ಓಡಾಡ್ತಾ ಮಾಮೂಲಿ ಕೆಲ್ಸಕ್ಕೆ ಶುರು ಇಟ್ಟೆ!
9.30am!!  ಸ್ನಾನ ಮುಗ್ಸಿ ಷರ್ಟ್ ಬೇಟೇಗೆ ಹೊರ್ಟೆ! ಮೆಸೇಜ್ ನೆನಪಾಯ್ತು!
ಬ್ಲೂಷರ್ಟ್!!!
ಗೋದ್ರೇಜ್ ನ ಬಾಗಿಲು ಮುರಿಯೋ ತರಾ ಓಪನ್ ಮಾಡಿ,ಬೇರೆಲ್ಲಾ ಷರ್ಟ್ ನಾ ಎಸೀತಾ ಹುಡುಕ್ತಾ ಇದ್ದೆ!ಆದ್ರೆ ಷರ್ಟ್ ಸಿಗ್ತಾನೇ ಇಲ್ಲ!!  ಯಕ್ಷಗಾನದ ಮಹಿಷಾಸುರನ ಹಾಗೆ ಬೊಬ್ಬೆ ಇಡ್ತಾ ಅಮ್ಮನನ್ನ ಕೂಗ್ದೆ!. “ ಅಮ್ಮ ನನ್ ಬ್ಲೂ ಷರ್ಟ್ ಎಲ್ಲಿ?” ಅದ್ಕೇ ಅವ್ಳು “ ಆ ಷರ್ಟ್ ನಾ ಹಾಕೋಳ್ದೆ ತಿಂಗ್ಳಾಯ್ತು ಅದ್ಕೇ ವಾಷ್ ಗೆ ಹಾಕಿದೀನಿ, ಈ ವೈಟ್ ಷರ್ಟ್ ನಾ ಹಾಕೋ ಕಂದಾ ಚೆನ್ನಾಗಿ ಕಾಣುತ್ತೇ”.
ತಲೆ ತಿರ್ಗೋಕೆ ಶುರು ಆಯ್ತು!! ಎಲ್ಲಿತ್ತೋ ದೂರ್ವಾಸನ ಕೋಪ! ಸಿಕ್ಕಾಪಟ್ಟೆ ಬೈದು ಬಿಟ್ಟೆ! ನನ್ ಕೇಳ್ದೇ ಷರ್ಟ್ ನಾ ವಾಷ್ ಗೆ ಹಾಕಿದ್ದು ಯಾಕೆ?......! ಹಾಗೇ ಹಿಗೇ!!
9.45! ಇನ್ನು ತಡ ಮಾಡಿದ್ರೇ ಆಗಲ್ಲ ಅಂತ ಅಮ್ಮ ಐರನ್ ಮಾಡಿ ಇಟ್ಟಿದ್ದಾ ವೈಟ್ ಷರ್ಟ್ ನೇ ಹಾಕೊಂಡು ಓಟಕಿತ್ತೇ..ತಿಂಡಿ ತಿಂದು ಹೋಗು ಅಂತ ಅಮ್ಮ ಹೇಳಿದ್ದು ಆ ಕಿವಿಯಿಂದ ಕೇಳಿ ಈ ಕಿವಿಯಿಂದ ಹೊರ್ಟು ಹೋಯ್ತು!
10.15! ಮೊದ್ಲೇ ಬ್ಲೂ ಷರ್ಟ್ ಹಾಕಿಲ್ಲಾ,15 ನಿಮಿಷ ಲೇಟ್ ಬೇರೆ! ಅವಳ ಕೈಲಿ ಬೈಸಿ ಕೊಳ್ಳೋದು ಗ್ಯಾರಂಟಿ ಅಂತ ಅಂದ್ಕೊಂಡ್ರೂ ಅವಳ ಬೈಗುಳ ನಂಗೆ ಪ್ರೀತಿ ಅಂತ ಸಮಾಧಾನ ಪಟ್ಕೊಂಡೆ! ಮೊಬೈಲ್ ನ ಸೈಲೆಂಟ್ ಮೋಡ್ ನಿಂದ ಚೇಂಜ್ ಮಾಡ್ದೇ ಖುಷೀಲೀ!!
ಆಕಾಶ ಎಲ್ಲಾ ಕಪ್ಪಾಯ್ತು! ಥೂ ಈ ಮಳೆ ಯಾವಾಗ್ಲೂ ಬರ್ಬೋದು ಅಂತ ಬೈಕೊಂಡು ಪಾರ್ಕ್ ಗೆ ಎಂಟ್ರಿ ಕೊಟ್ಟೆ!!
ಎದುರಲ್ಲೇ ಒಬ್ಬ ಬ್ಲೂ ಷರ್ಟ ಹುಡ್ಗ ಪಾಸ್ ಆದ! ಅವನ್ನ ಹಿಡ್ದು ಷರ್ಟ್ ಕಿತ್ಕೊಂಡು ನಾನ್ ಹಾಕ್ಲಾ ಅಂತ ಬಂದ ಯೋಚನೆಗೆ ಬ್ರೇಕ್ ಕೊಡ್ತಾ ಮುಂದೆ ಹೆಜ್ಜೆ ಇಟ್ಟೆ.!
ಯಾರೋ ಕಿರುಚಿದ ಹಾಗೆ ಕೇಳಿಸ್ತು! ಯಾರಪ್ಪಾ ಅಂತ ನೋಡಿದ್ರೇ ಬ್ಲೂ ಷರ್ಟ್ ಹುಡ್ಗಂಗೆ ಮತ್ತೊಬ್ಬ ಮಾತಾಡೋಕೂ ಅವಕಾಶ ಕೊಡ್ದೆ  ಚೆನ್ನಾಗಿ ತದಕ್ತಾ ಇದ್ದ.!
ಲವ್ ಸೀನ್ ಇರ್ಬೇಕಾದಲ್ಲಿ ಆ್ಯಕ್ಷನ್ ಸೀನ್ ಯಾಕಪ್ಪಾ ಅಂತಾ ಗೊಣಗ್ತಾ ಹತ್ರ ಹೋಗಿ ಅವನನ್ನ ಕೇಳ್ದೆ “ಯಾಕ್ ಅವನ್ಗೆ ಚಚ್ತಾ ಇದ್ದಿಯಾ?.” ಅದ್ಕೇ ಅವ್ನು “ನೋಡಿ ಸಾರ್ ನನ್ ಗರ್ಲ್ ಫ್ರೆಂಡಿಗೆ ಸುಮ್ನೆ ಮೆಸೇಜ್ ಮಾಡಿ ತೊಂದ್ರೇ ಕೊಡ್ತಾನೆ, ಅದ್ಕೇ ಬ್ಲೂ ಷರ್ಟ್ ಹಾಕೊಂಡು ಬಾ ಅಂತ ಮೆಸೇಜ್ ಮಾಡೋಕೆ ಇವ್ಳಿಗೆ ಹೇಳ್ದೆ ಇನ್ಮುಂದೆ ತಂಟೆಗೆ ಬರ್ಬಾರ್ದು” ಅಂತ ಹೇಳಿ ಹೊರ್ಟು ಹೋದ!
ಮತ್ತೊಂದು ಸಿಡಿಲು ಎಲ್ಲೋ ಹತ್ರಾನೇ ಬಿತ್ತು!! ಆ ಬ್ಲೂ ಷರ್ಟ್ ಹುಡ್ಗನ್ನ ಎತ್ತಿ ಹಿಡ್ದೆ!. ಮುಖಾ ಎಲ್ಲಾ ಪೆಟ್ಟು ತಿಂದು ನೀಲಿ ಕಟ್ಟಿತ್ತು!!
ನಂಗೇ ತಿಳಿಯದಾ ಹಾಗೆ ನನ್ ಕಣ್ಣಿಂದ ನೀರು ಇಳಿಯೋಕೆ ಷುರು ಆಯ್ತು.! ಅವ್ನು ಕೇಳ್ದ “ ಅಲ್ಲಾ ಅವ್ನು ಕಾರಣ ಇಲ್ದೇ ನಂಗೆ ಹೊಡ್ದ ನೀವ್ಯಾಕೆ ಅಳ್ತಾ ಇದ್ದೀರಾ?”.
ಅದ್ಕೆ ನಾನು ನಡ್ಗೋ ಧ್ವನೀಲೀ “ಅವನು ನಿಂಗೆ ಹೊಡ್ದ, ಆದ್ರೆ ಅವ್ಳು ನನ್ನ ಕೊಂದೇ ಬಿಟ್ಲು” ಅಂತ   ಹೇಳಿ ತಿರುಗಿ ನೋಡ್ದೆ ಹೊರಟೆ!
ನನ್ ಕಣ್ಣೀರಿಗೆ ಕಂಪೆನಿ ಇರ್ಲಿ ಅಂತ ಮಳೇ ಬೇರೆ ಸುರೀತು!
ಅಷ್ಟರಲ್ಲೇ ಮತ್ತೇ ಅದೇ ಹಾಡನ್ನ ಹಾಳು ಮೊಬೈಲ್ ಹೊಡ್ಕೊಳ್ಳೋಕೆ ಶುರು ಮಾಡಿತು!! “ನೀಲೆ ನೀಲೆ ಅಂಬರ್ ಸೇ”
ರಿಸೀವ್ ಮಾಡ್ದೇ, ಆ ಕಡೆಯಿಂದ ಅಮ್ಮ  “ಅಲ್ವೋ ಮನೇಗೆ ಬಾರೋ ಬೆಳಗ್ಗೆ ಏನೂ ತಿಂದಿಲ್ಲ,ಮಳೆ ಸುರೀತಾ ಇದೆ ಕೊಡೇನೂ ಬಿಟ್ಟು ಹೋಗಿದೀಯಾ ಬೇಗ ಬಾರೋ”!
ಕಪ್ಪು ಮೋಡ ಕರಗಿ ನೀಲಿ ಆಕಾಶದಿಂದ ಬಿದ್ದ ಮಳೆ ಹನಿಯೊಂದು ನನ್ನ ಕಣ್ಣೀರಿನ ಜೊತೆ ಸೇರಿ ನೆಲಕ್ಕೆ ಬಿದ್ದು ತನ್ನ ನೀಲಿ ಬಣ್ಣವನ್ನ ಕಳಚಿಕೊಂಡಿತು!!!!!!!!.......

ಕಥೆಗಾರ : ಶಿವಾನಂದನ ರಾವ್.

Tuesday, 4 October 2011

ಮನದ ಮೂಲೆಯಿಂದ...

ಮನದ ಮೂಲೆಯಿಂದ...
ದಿನಾಂಕ : 5/10/2010

ಏಕೋ ಮನ ಕಲ್ಲೆಸೆದ ಕೊಳದಂತೆ ರಾಡಿಯಾಗಿದೆ.ಎಂದೂ ಇಲ್ಲದ್ದು ಇಂದೇ ಹೀಗೇಕಾಯಿತು. ಈ ವಿಷಯದಲ್ಲಿ ಯಾವತ್ತೂ ಮೌನ ಮುರಿಯದ ನಾನು ಇಂದು ಏಕೆ ಅಂತಹ ಮಾತುಗಳ್ನಾಡಿದೆ ಎಂದೇ ಗೊತ್ತಾಗುತ್ತಿಲ್ಲ. ಬಹುಶಃ ನನ್ನೊಳಗೆ ಹುದುಗಿದ್ದ ಭಾವನೆಗಳಿಗೆ ಇಂದು ಮಾತಿನ ರೂಪ ದೊರಯಿತು ಎನಿಸುತಿದೆ. ಆದರೂ ಅವಳ ಮನ ನೋಯಿಸುವ ಹಕ್ಕು ನನಗ್ಯಾರು ಕೊಟ್ಟೋರು....?? ಅವಳ ಮಾತು ಹಿಡಿಸದಿದ್ದರೆ ಸುಮ್ಮನೆ ವಿಷಯ ಬದಲಾಯಿಸಬಹುದಿತ್ತಲ್ಲ...!!! ವಾದ ಮಾಡಿದ್ದಾದರೂ ಏಕೆ?? 


         ವಾಸ್ತವದಲ್ಲಿ ನಡೆದ ವಿಷಯವಿಷ್ಟು - "ಅವರಿಬ್ಬರು ಪ್ರೀತಿಸಿದ್ದರು, ನೂರಾರು ಕನಸುಗಳನ್ನು ಕಂಡಿದ್ದರು... ಆದರೆ ಈ ಪ್ರೀತಿ ಬಹುಕಾಲ ಸಾಗಲಿಲ್ಲ... ಇದ್ದಕ್ಕಿದ್ದಂತೆ ಒಂದು ದಿನ ಅವನು ಅವಳನ್ನು ಅವಳ ಪ್ರೀತಿಯನ್ನು ಬಿಟ್ಟು ದೂರದ ಮುಂಬೈಗೆ ಹೋದ. ಮೊನ್ನೆ ಅವನಿಗಲ್ಲಿ ಮದುವೆಯಾಯಿತು ಎಂದು ತಿಳಿಯಿತು".ವಿಷಯ ತಿಳಿದಾಗ ಕುಗ್ಗಿಹೋದಳು. ಅವಳ ಅಕ್ಕ ಕೂರಿಸಿ ಸಮಾಧಾನ ಹೇಳಿದಳು. ಏನೂ ಹೇಳಲು ತೋಚದ ನಾನು ಮೌನದ ಮುಸುಕು ಹೊದ್ದು ಕುಳಿತೆ. "ಆದದ್ದು ಆಯಿತು ಮರೆತುಬಿಡು ಅವನನ್ನ" ಎಂದಳು ಅಕ್ಕ. ಅಕ್ಕ ಒಳ ಹೋದಾಗ ನಮ್ಮಬ್ಬರ ನಡುವಿನ ಮೌನ ಮುರಿಯುವ ಸಲುವಾಗಿ ಹಾಗೂ ಅವಳ ಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಒಳ ಹೋಗಿ ಅವಳ ಪ್ರೀತಿಯ ಪಿಂಕಿಯನ್ನು ಎತ್ತಿಕೊಂಡು ಬಂದು ನೋಡಿದರೆ ಅವಳ ಪತ್ತೆಯೇ ಇಲ್ಲ. ಮನದಲ್ಲಿ ಏನೇನೋ ಕೆಟ್ಟ ಕಲ್ಪನೆಗಳು ಹಾದು ಹೋದವು. ಹಾಗೆಲ್ಲ ಆಗಿರಲಿಕ್ಕಿಲ್ಲ ಎಂದು ನನಗೆ ನಾನೇ ಸಮಾಧಾನಿಸಿಕೊಂಡು ಅವರ ತೋಟದಲ್ಲಿ ಹುಡುಕಲು ಹೊರಟೆ. ನನ್ನ ಭಯ ನಿಜವಾಗಿತ್ತು. ಬಾವಿಯ ಕಟ್ಟೆ ಹತ್ತಿ ನಿಂತಿದ್ದಳು. ಕೆಳಗಿಳಿಸಿ -"ಏನು ಮಾಡುತ್ತಿದ್ದಿ, ಬಾ ಮನೆಗೆ" ಎಂದೆ. "ಅವನು ನನ್ನ ತುಂಬಾ ಪ್ರೀತಿಸುತ್ತಾನೆ ಕಣೆ.... ನನಗಾಗಿ ಎಲ್ಲವನ್ನೂ ಎಲ್ಲರನ್ನು ಬಿಟ್ಟು ಬರುತ್ತಾನೆ ನೋಡುತ್ತಿರು...." ಎಂದಳು. ಆ ಕ್ಷಣಕ್ಕೆ ನನಗೆ "ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸ್ಸು" ಎಂಬ ಕವಿಯೋಬ್ಬರ ಕವನದ ಸಾಲುಗಳು ನೆನಪಾದವು.

ವಾಸ್ತವ ಕಣ್ಣೆದುರೇ ನಿಂತಿದ್ದರೂ ಅದನ್ನು ಒಪ್ಪಲು ಅವಳ ಮನ ಸಿದ್ಧವಿರಲಿಲ್ಲವೆನಿಸುತ್ತೆ. ಮತ್ತೆ ಮತ್ತೆ ಅದನ್ನೇ ಹೇಳುತ್ತಿದ್ದಳು. "ಸರಿ, ಈಗ ಮನೆಗೆ ಹೋಗೋಣ ಬಾ" ಎಂದು ಕೈ ಹಿಡಿದು ಮನೆಯ ದಾರಿ ಹಿಡಿದೆ. "ಕೈ ಬಿಡು ನಾನೇ ಬರುತ್ತೇನೆ" ಎಂದಳು. ಯಾಕೋ ಮನ ಒಪ್ಪಲಿಲ್ಲ. ಆದರೂ ಕೈ ಬಿಟ್ಟು ತಿರುಗಿ ನೋಡುತ್ತಾ ಮುಂದೆ ಹೆಜ್ಜೆ ಹಾಕುತ್ತಿದ್ದೆ. ನನ್ನ ಹಿಂದೆ ಅವಳು ಬರುತ್ತಿದ್ದರಿಂದ ಧೈರ್ಯ ಬಂದು ಮುಂದೆ ನಡೆದೆ. ನನ್ನ ತಲೆ ನಿಷ್ಕ್ರಿಯವಾಗುತ್ತಿದೆ ಎಂದೆನಿಸಿತು.

ನನ್ನ ಅವಳ ಸ್ನೇಹ ೧೦ ವರುಷದಿಂದ ನಿರಂತರವಾಗಿ ಸಾಗಿ ಬಂದಿತ್ತು. ಎಲ್ಲ ಸಿಹಿಕಹಿ ಸಂಗತಿಗಳನ್ನು ಹಂಚಿಕೊಂಡ್ದಿದ್ದೆವು. ಯಾವತ್ತೂ ಬದುಕಿನ ಬಗ್ಗೆ ಬೇಸರ ಮೂಡಿರಲಿಲ್ಲ. ಆದರೆ ಇಂದು ನನ್ನ ಕಣ್ಣೆದುರೇ ಅವಳು ಸಾವನ್ನು ಬಯಸಿದಾಗ ಮೊಟ್ಟ ಮೊದಲ ಬಾರಿಗೆ ಅದರ ಬಗ್ಗೆ ಬೇಸರ ಮೂಡಿತು. ಹೀಗೆ ಸ್ವಲ್ಪ ದೂರ ಸಾಗಿದ್ದೆ. ಏನೋ ಅನುಮಾನ ಉಂಟಾಗಿ ತಿರುಗಿ ನೋಡಿದರೆ ಮತ್ತೆ ಕಟ್ಟೆ ಹತ್ತಿದ್ದಳು. ನನಗೆ ನನ್ನ ಬಗ್ಗೆಯೇ ಕೋಪ ಉಕ್ಕಿತು. ಇನ್ನೇನು ಹಾರಲು ತಯಾರಾಗಿ ನಿಂತಿದ್ದಳು. ಎದೆ ಬಡಿತ ಹೆಚ್ಚಾದಂತಾಯಿತು. ಓಡಿ ಹೋಗಿ ಹಿಡಿದೆಳೆದೆ. ಸಿಟ್ಟು ನೆತ್ತಿಗೇರಿತ್ತು. ಕೋಪದ ಬರದಲ್ಲಿ ಕೆನ್ನೆಗೆ ನಾಲ್ಕು ಬಿಗಿದು ಕೇಳಿದೆ "ಪ್ರೀತಿಸುತ್ತಾನಾ...??? ಕರೆದರೆ ಓಡೋಡಿ ಬರುತ್ತಾನೆ ಅಲ್ವಾ....??? ಕರಿ ನೋಡೋಣ ಬರಲಿ ಅವನು...!! ಅವ Romeo... ನೀ ಅವನ Juliet... ದೂರಾದ ಪ್ರೇಮಿಗಾಗಿ ನಿನ್ನ ಆತ್ಮಾರ್ಪಣೆ ಅಲ್ವ...???".

ಮಾತಾಡಲಿಲ್ಲ ಅವಳು. ಸುಮ್ಮನೆ ಅಳುತ್ತಿದ್ದಳು. ಇವಳ ಕೆಲಸ ನನ್ನಲ್ಲಿ ಅನುಕಂಪ ಮೂಡಿಸುವ ಬದಲು ಸಿಟ್ಟು ತರಿಸಿತ್ತು. ಎಂತಹ ಬೆಲೆ ತೆತ್ತರೂ ಸಿಗದ ಜೀವನವನ್ನು ಪ್ರೀತಿ ದೂರಾದದ್ದಕ್ಕೆ ಬಲಿಕೊಡ ಹೊರಟಿದ್ದಳು. ಇತ್ತಿಚ್ಚೆಗೆ ಇದು ಹೆಚ್ಚಾಗಿ ನಡೆಯುವ ಸಂಗತಿ. ಪ್ರೀತಿ ಪ್ರೇಮ ಎಂಬ ಹುಚ್ಚು ಆವೇಶದ ಭರದಲ್ಲಿ ತಮ್ಮ ಭವಿಷ್ಯವನ್ನು ಹಿಂದೆ ಮುಂದೆ ಯೋಚಿಸದೆ ಬಲಿ ಕೊಟ್ಟು ಬಿಡುತ್ತಾರೆ.
ಏನು ಹೇಳಿದರೆ ಇವಳಿಗೆ ಅರ್ಥವಾದೀತು ಎಂದು ಚಿಂತಿಸುವಂತಾಯಿತು. ಕೊನೆಗೆ "ನಿನಗೆ ನಿನ್ನ ಪ್ರೀತಿ ದಕ್ಕಲಿಲ್ಲವೆಂದು, ನೀನು ಸತ್ತು ನಿನ್ನ ತಂದೆ ತಾಯಿ ಅವರ ಪ್ರಿಯ ಮಗಳ ಪ್ರೀತಿಯಿಂದ ವಂಚಿತರಾಗುವಂತೆ ಮಾಡಬೇಡ..." ಎಂದೆ. ಮೌನ ದೇವಿಯ ಆಸರೆ ಪಡೆದಿದ್ದಳು. ಕತ್ತಲಾದ್ದರಿಂದ ಅವಳನ್ನು ಅವಳ ಮನೆಗೆ ಬಿಟ್ಟು ಓಲ್ಲದ ಮನಸ್ಸಿನಿಂದ ನಾನು ನನ್ನ ಮನೆಯ ದಾರಿ ಹಿಡಿದೆ...

ದಿನಾಂಕ :6/10/2010
ಬೆಳಗ್ಗೆ ೬.೧೫ರ ಹೊತ್ತಿಗೆ phone ಸದ್ದಾಯಿತು. Receive ಮಾಡಿದಾಗ ಅವಳ ಅಕ್ಕ ಬೇಗ ಬರುತ್ತಿಯಾ ಎಂದಳು. ಬೇಗ ಹೊರಟು ಅವಳ ಮನೆ ತಲುಪಿದಾಗ ನಿಶ್ಚಿಂತೆಯಿಂದ ಮಲಗಿದ್ದಳು. ನಿನ್ನೆ ನಾ ತಡೆದಿದ್ದೆ, ಆದರೆ ಇಂದು....!!! ಏಕೋ ಕಾಲುಗಳು ನಡುಗಿದಂತಾಗಿ ಕುಸಿದು ಕುಳಿತೆ.......
      
ಗೀಚಿದ್ದು : ನಿಕೇತ        

Sunday, 19 June 2011

ಚಂದ್ರ!

 ಚಂದ್ರ ತಂಪಾ ಅಥ್ವಾ ಉರೀನಾ? ಅವ್ಳ ಹತ್ರ ಈ ಪ್ರಶ್ನೇನ ಕಡಿಮೆ ಅಂದ್ರೂ 100 ಸಲ ಕೇಳಿದ್ದೆ! ಅದ್ಕೆ ಅವ್ಳು ' ಸೈನ್ಸ್ ಸ್ಟೂಡೆಂಟ್ ಆಗಿ ಮತ್ತೆ ಮತ್ತೆ ಈ ಪ್ರಶ್ನೇನ ಕೇಳೋಕೆ ನಾಚ್ಕೆ ಆಗಲ್ವಾ.. scientific ಆಗಿ ಚಂದ್ರ ತಂಪು ಅಂತಾ ಪ್ರೂವ್ ಆಗಿದೆ ಮತ್ಯಾಕೆ ಕೇಳ್ತಿಯಾ??"
 

ಆಗೆಲ್ಲಾ ನಂಗೆ ಅನ್ಸೋದು ಈ ಸೈನ್ಸ್ ಅನ್ನೋದು ಫೀಲಿಂಗ್ಸ್‍ನ ನುಂಗಿ ಹಾಕುತ್ತೆ ಅಂತ!
 

ಯಾಕಂದ್ರೆ ಅವ್ಳಿಗೆ ನಾನು ಹೇಳೋದು ತುಂಬಾ ಇತ್ತು! ನಂಗೆ ಚಂದ್ರನಿಗಿಂತ ಅವ್ಳೇ ತಂಪು, ಅವ್ಳಿಲ್ದೇ ಇದ್ರೆ ಚಂದ್ರನೂ ವಿರಹದ ಬಿಸಿ ನೀಡ್ತಾನೆ, ಹೀಗೇ.....
ಆದ್ರೆ ಇದನ್ನೆಲ್ಲಾ ಕೇಳೋಕೆ ಅವ್ಳು ರೆಡಿ ಇದ್ರೆ ತಾನೆ?! ಅವ್ಳು ಪಕ್ಕಾ ಸೈನ್ಸ್ ಸ್ಟೂಡೆಂಟ್!
 

ಮೊದಲ ಮಳೆಗೆ ನಾನು ನೆನಿತಾ ಇದ್ರೆ ಅವ್ಳು ಎಷ್ಟು c.m ಮಳೆ ಬಿತ್ತು ಅಂತ ಗೆಸ್ ಮಾಡ್ತಾ ಇದ್ಳು!!
 

ನಾನು ಹುಣ್ಣಿಮೆ ಚಂದ್ರನ ನೋಡಿ ಕಣ್ತುಂಬಿಸಿಕೊಳ್ತಾ ಇದ್ರೆ ಅವ್ಳು ಚಂದ್ರನಲ್ಲಿ ಕಲೆ ಹುಡುಕಿ ಅದ್ಕೆ ಸೈಂಟಿಫಿಕ್ ರೀಸನ್ ಕೊಡ್ತಾ ಇದ್ಲು!
 

ಆಗೆಲ್ಲಾ ಅನ್ನಿಸ್ತಾ ಇತ್ತು ನಾವಿಬ್ರೂ ಹೇಗೆ ಒಬ್ರನ್ನೊಬ್ರು ಇಷ್ಟಾಪಟ್ವಿ ಅಂತ!
ಬಹುಷ opposite poles attracts each other ಅನ್ನೋ scientific definition follow ಮಾಡ್ತಾ ಇದ್ದೇವೆ ಅಂತ ಅದ್ಕೊಂಡು ಸಮಾದಾನ ಪಡ್ತಾ ಇದ್ದೆ!
 

ಆವತ್ತು ಎಕ್ಸಾಮ್ಸ್ ನ ಹಿಂದಿನ ರಾತ್ರಿ..
 

ಪಿಸಿಕ್ಸ್ ಓದ್ತಾ ಇದ್ದೆ! ಬ್ಲಾಕ್ ಹೋಲ್ ಅನ್ನೋ ಟಾಪಿಕ್! ಬ್ಲಾಕ್ ಹೋಲ್ ಅಂದ್ರೆ ಕೃಷ್ಣ ರಂದ್ರ! ಕೃಷ್ಣ ?!
ಹೌದು ಕಳ್ಳ ಕೃಷ್ಣ ನೆನಪಾದ!
ಅವ್ನ ರಾದೆಯ ಪ್ರೀತಿ ನೆನಪಾಯ್ತು!
ಏಕೋ ಏನೋ ತಲೇಲಿ ಚಿಕ್ಕ ಪ್ರೀತಿಯ ಕಥೆ ಮಾಡಿತ್ತು!
ನೋಟ್ಸ್ ನಾ ಕೊನೇ ಪೇಜ್ ಓಪನ ಮಾಡಿ ಬರೆಯೋಕೆ ಶುರು ಮಾಡ್ದೆ!

"ಅದೆಲ್ಲಾ ಪುಣ್ಯ ಭೂಮಿ! ಕೃಷ್ಣನ ಪಾದ ಸ್ಪರ್ಷ ಪಡೆದ ನೆಲ!
ಅಂದು ಗೋಪಿಕೆಯರೆಲ್ಲಾ ಕೃಷ್ಣನ ಸುತ್ತ ನೆರೆದಿದ್ರು...
ಅದರ್ಲ್ಲಿ ಒಬ್ಳು ಕೇಳಿದ್ಲು "ನಮ್ಮ ಕೃಷ್ಣ ಸುರಸುಂದರಾಂಗ ಆದ್ರೆ ಅವ್ನ ಬಣ್ಣ ಮಾತ್ರ ಕಪ್ಪು ಯಾಕೆ?"
ರಾದೆ ನಕ್ಕು ಹೇಳಿದ್ಲು "ಪ್ರಪಂಚಕ್ಕೆಲ್ಲಾ ಬಣ್ಣ, ಬೆಳಕು ಕೊಡೋನು ಕೃಷ್ಣ ಅವ್ನಲ್ಲೇ ಕೋಟಿ ಸೂರ್ಯ ಚಂದ್ರರು ಇದ್ದಾರೆ! ದೀಪದ ಅಡಿ ಯಾವಾಗಲೂ ಕಪ್ಪು ಹಾಗಾಗಿ ಕೃಷ್ಣನ ಬಣ್ಣ ಕಪ್ಪು" ಅಂತ.
ಆಗ ಆ ಗೋಪಿಕೆ ಸುಮ್ಮನಾಗಲಿಲ್ಲ. ಮತ್ತೆ ಕೇಳಿದ್ಲು "ಹಾಗಾದ್ರೆ ರಾದ ಯಾಕೆ ಬಿಳಿ?" ಈ ಬಾರಿ ಕೃಷ್ಣನೇ ಉತ್ತರಿಸಿದ "ನನ್ನಲ್ಲಿ ಕೋಟಿ ಸೂರ್ಯ ಚಂದ್ರರು ಅಡಗಿರಬಹುದು ಆದ್ರೆ ರಾಧೆ ಈ ಕೃಷ್ಣನನ್ನೇ ಹೃದಯದಲ್ಲಿ ಬಂಧಿಸಿದ್ದಾಳೆ, ಹಾಗಾಗಿ ನನ್ನಲ್ಲಿರುವ ಬೆಳಕೇ ಅವಳಿಗೆ ಬಿಳುಪನ್ನು ನೀಡಿದೆ!!"
ರಾಧೆಯೊಳಗೆ ಕೃಷ್ಣ, ಕೃಷ್ಣನೊಳಗೆ ರಾಧೆ! ಇದೊಂಡು ಎಂದೂ ಮುಗಿಯದ ಪ್ರೇಮ ಕಥೆ!"
 

ಇಷ್ಟು ಬರೆದು ಮತ್ತೆ ಅದನ್ನ ಓದಿದೆ ಏಕೋ ಖುಷಿಯಾಯ್ತು! ಖುಷಿಯಾದಾಗಲೆಲ್ಲಾ ನೆನಪಾಗೋದು ಅವ್ಳು!!
 

ಅವ್ಳಿಗೆ ಕಾಲ್ ಮಾಡ್ದೆ.. ನನ್ನ ಕಥೆನಾ ಹೇಳ್ತಾ ಹೋದೆ!
 

ಅವ್ಲ ಕಡೆಯಿಂದ ರೆಸ್ಪಾನ್ಸೇ ಇಲ್ಲ್! ಕಾಲ್ ಕಟ್ ಆಯ್ತು!
 

ಒಂದು ಹತ್ತು ನಿಮಿಷದ ನಂತ್ರ ಅವ್ಳದ್ದೇ ಮೆಸೇಜ್ ಬಂತು.
"ಇಲ್ಲಿವರ್ಗೂ ಎಲ್ಲಾನೂ ತಡ್ಕೊಂಡೆ ಆದ್ರೆ ಇಲ್ಲು ನನ್ ಕೈಲಿ ಆಗಲ್ಲ. ನಾಳೆ ಎಕ್ಸಾಮ್ ಇದೆ ಏನೋ ಡೌಟ್ ಕೇಳ್ತಿಯಾ ಅಂತ ಕಾಲ್ ರಿಸೀವ್ ಮಾಡಿದ್ರೆ ಒಳ್ಳೇ ಪುರಾಣದ ಕಥೆ ಹೇಳ್ತೀಯಲ್ಲಾ ನಿಂಗೆ ಏನು ಹೇಳ್ಬೇಕು? ಮಳೆ ಬಂಡ್ರೆ ಹುಚ್ಚನ ತರ ನೆನಿತೀಯಾ.. ಚಂದ್ರ ವಿರಹದ ಬಿಸಿ ನೀಡ್ತಾನೆ ಅಂತೀಯಾ! ಯಾವತ್ತಾದ್ರೂ ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡಿದ್ದೀಯಾ?
ಸಾರಿ ನಂಗಿನ್ನೂ ತಡೆಯೋಕಾಗ್ತಿಲ್ಲ, ಹೇಳ್ಬಿಡ್ತೀನಿ! ನಂದೂ ನಿಂದೂ opposite thinking so ನಾವಿಬ್ರೂ ಬೇರೆಯಾಗೋದ್ರಲ್ಲೆ ಅರ್ಥ ಇದೆ. I need to BREAK UP! Bye"
 

ಆ ಮೆಸೇಜ್ ನಾ 10 ಬಾರಿ ಓದಿದೆ. ಏನೂ ಅನ್ನಿಸ್ಲಿಲ್ಲ!!
 

ಹೊರಗೆ ಬಂದೆ, ಹುಣ್ಣಿಮೆ ಚಂದ್ರ ನಗ್ತಾ ಇದ್ದ...
ಅವನ ದಿಟ್ಟಿಸಿ ನೋಡ್ದೆ.. ಯಾಕೋ ಎಲ್ಲಾ ನೆನಪಾಯ್ತು! ಆ ವರೆಗೂ ಏನೂ ಅನ್ನಿಸದೇ ಇದ್ದ ನಂಗೆ ಹೃದಯಾನ ಹಿಂಡಿದ ಹಾಗಾಯ್ತು!
 

ಆದ್ರೂ ಏನೋ ತಂಪಾಯ್ತು! ಎದುರಲ್ಲಿ ಚಂದ್ರ ಮತ್ತೆ ನಂಗೆ ತಂಪು ಅನುಭವ!! ಅದೇನು ಅಂತ ನೋಡಿದ್ರೆ ಕಣ್ಣಿಂದ ಹನಿಯೊಂದು ಇಳಿದು ಮುಖಾನ ತಂಪು ಮಾಡಿತ್ತು!
 

ಚಂದ್ರ ತಂಪಾ ಉರಿನಾ ಅನ್ನೋ ನನ್ನ ಪ್ರಶ್ನೆಗೂ ಉತ್ತರ ಸಿಕ್ಕಿತ್ತು!
 

ಆ ಉತ್ತರ scientific ಆಗಿತ್ತು ಅನ್ನೋದು ಅಷ್ಟೇ ಸತ್ಯ ಆಗಿತ್ತು!!!!
                                                              written by : Shiv Rao

Friday, 15 April 2011

ಕೆಂಪು

ಅದೇಕೋ ಕೆಂಪು ಅಂದ್ರೇ ತುಂಬಾ ಇಷ್ಟ..! ಹೃದಯಾನೂ ಕೆಂಪಂತೆ ಅದ್ಕೇ ಏನೋ!! ಹಾ! ಕೆಂಪು ಕೆಂಪು ಆಗಿರೋ ಆಕಾಶಕ್ಕೆ ಮುಂಜಾನೆ ಸೂರ್ಯ ತಾನೇ ಕಾರಣ??! ಅಂತಹುದೇ ಒಂದು ಮುಂಜಾನೆ! ಎದ್ದೆ! ಮೆಸೇಜ್ ನೋಡ್ದೆ. ಮುಖ ತೊಳ್ದು ಪೇಪರ್ ಮುಂದೆ ಕೂತೆ!

ಯಾವತ್ತೂ ಬರೀ ಕ್ರಿಕೆಟ್ ಕಾಲಂ ಓದ್ತಾ ಇದ್ದವ್ನ ಕಣ್ಣಿಗೆ ಆ ಕಾಲಂ ಯಾಕೆ ಬಿತ್ತೋ!? 8 ವರ್ಷದ ಹುಡ್ಗ ಪಾಪ! ಅರ್ಜಂಟ್ ಆಗಿ 0 –ve ಬ್ಲಡ್ ಬೇಕಿತ್ತಂತೆ! ಅವ್ನ ಮುಖ ನೋಡೀನೇ ಪಾಪ ಅನ್ನಿಸ್ತು. 

ಮೂಡ್ ಔಟ್ ಆಯ್ತು! ಪೇಪರ್ ಎಸ್ದೆ!

ಆಗ ನೆನ್ಪಾದ್ಳು ನಾಚಿದಾಗ ಕೆಂಪು ಕೆಂಪು ಆಗೋ ಆ ಹುಡ್ಗಿ!! ಅವ್ಳಿಗೆ ಏನಾದ್ರೂ ಹೇಳ್ಬೇಕು. ನಾಚಿದಾಗ ತುಂಬಾ ಚೆನ್ನಾಗಿ ಕಾಣ್ತೀಯಾ ಅಂತ ಹೀಗೆ. ಖಾಲಿ ಪೇಪರ್ ತಗೊಂಡೆ. ಅದೇನ್ ಅನ್ನಿಸ್ತೋ ಕಪ್ಪು ನೀಲಿ ಕಲರ್ ಪೆನ್ ಯಾವ್ದೂ ಹಿಡಿಸ್ಲಿಲ್ಲ! ಕೆಂಪು ಷಾಯಿ ಪೆನ್ನು ಇರ್ಲಿಲ್ಲ. ಮೊದ್ಲೇ ಹೇಳ್ದೆ ನಂಗೆ ಕೆಂಪಂದ್ರೆ ಇಷ್ಟ. ಏನಾದ್ರೂ ಆಗ್ಲಿ ಅಂತ ಶೇವಿಂಗ್ ಬ್ಲೇಡ್ ಹಿಡ್ಕೊಂಡೆ ಅದ್ರಿಂದ ಕೈಗೆ ಒಂದು ಗೀರು ಹಾಕ್ದೆ. ಬಂದದ್ದು ಅದೇ ನನ್ನ ಪ್ರೀತಿಯ ಕೆಂಪು!
 
ಏನ್ ಅನ್ನಿಸ್ತೋ ಅದನ್ನೆಲ್ಲಾ ಬರ್ದೆ! ಖುಷಿ ಆಯ್ತು! ಕೈಗೆ ಬ್ಯಾಂಡೇಜ್ ಹಾಕಿ ಆ ಲೆಟರ್‍ನ ಅವ್ಳಿಗೆ ಕೊಡ್ಲೇ ಬೇಕು ಅಂತ ಡಿಸೈಡ್ ಮಾಡಿ ಕಾಲೇಜ್‍ಗೆ ಹೊರಟೆ. ಯಾರ್ದೋ ಮನೆಯ ಗುಲಾಬಿ ಕದ್ದೆ, ಲೆಟರ್‍ಗೆ ಕಂಪೆನಿ ಇರ್ಲಿ ಅಂತ.

ಆದದ್ದು ಆಗ್ಲಿ ಅಂತ ಅಂದ್ಕೊಂಡು ಬಹಳ ಕಷ್ಟಪಟ್ಟು ಐ ಲವ್ ಯು ಹೇಳಿ ರೋಸ್ ಕೊಟ್ಟೆ!

ಈ ಬಾರೀನೂ ಅವ್ಳು ಕೆಂಪಾದ್ಳು!!! ನಾಚಿಕೆಯಿಂದ ಅಲ್ಲ! ಕೋಪದಿಂದ!! ಆ ಲೆಟರ್‍ನ ಕೆಂಪು ಅಕ್ಷರಕ್ಕಿಂತ, ನಾನು ಕೊಟ್ಟ ಗುಲಾಬಿಗಿಂತ ಕೆಂಪಾದ್ಳು! ನಾನ್ ಹೇಳಿದ್ದ ಐ ಲವ್ ಯು ಒಂದನ್ನು ಬಿಟ್ಟು ಉಳಿದ ಲೆಟರ್, ರೋಸ್ ಅನ್ನು ವಾಪಾಸು ಮಾಡಿದ್ಳು!! ಅರ್ಥಾಥ್ ಮುಖಕ್ಕೆ ಎಸೆದ್ಳು!!!

ಬಹಳ ಕಷ್ಟದಲ್ಲಿ ಬಂಕ್ ಮಾಡ್ದೇ ಬಯೋಲಾಜಿ ಲ್ಯಾಬ್‍ಗೆ ಹೋದೆ! ನನ್ ಹಣೆಬರಹಕ್ಕೆ ಅಲ್ಲೂ ಬ್ಲಡ್!!! ಎಲ್ರೂ ತಮ್ಮ ತಮ್ಮ ಬ್ಲಡ್ ಗ್ರೂಪ್ ಚೆಕ್ ಮಾಡ್ಕೋಬೇಕು ಅಂತ ಹೇಳಿದ್ರು ನಮ್ ಲೆಕ್ಚರರ್!!

ಈ ದಿನ ಎರಡ್ನೇ ಸಾರಿ ಬೇಕಂತ್ಲೇ ಕೈ ಕೊಯ್ಕೊಂಡೆ!!

ಎಲ್ರೂ ನನ್ ಬ್ಲಡ್ದನ್ನೇ ನೋಡೋವ್ರು! ನಮ್ ಬಯೋ ಲೆಕ್ಚರರ್ ಬಂದು ನಿಂದು 0 –ve ಬ್ಲಡ್ ಗ್ರೂಪ್ ತುಂಬಾ ಕಡಿಮೆ ಇರೋ ಬ್ಲಡ್ ಗ್ರೂಪ್ ಅಂತೆಲ್ಲಾ ಅಂದ್ರು!!
ಎಲ್ಲಾದ್ರಲ್ಲೂ –ve ಆಗಿರೋ ನಂಗೆ ಇದ್ರಲ್ಲೂ –ve ಅಂದಾಗ ಆಶ್ಚರ್ಯ ಆಗ್ಲಿಲ್ಲ!! 0 –ve ನೆನಪಾಯ್ತು!! ಅದೇ ೮ ವರ್ಷದ ಹುಡ್ಗ! ಹೇಳ್ದೇ ಕೇಳ್ದೇ ಲ್ಯಾಬ್ ಬಿಟ್ಟು ಲೈಬ್ರೆರಿಗೆ ಹೋಗಿ ಪೇಪರ್ ಓದಿ ಅವ್ನು ಇರೋ ಹಾಸ್ಪಿಟಲ್ ಅಡ್ರೆಸ್ ತಿಳ್ಕೊಂಡು ಅಲ್ಲಿಗೇ ಹೋದೆ!

ಅವ್ನ ವಾರ್ಡ್ ನಂ ತಿಳ್ಕೊಂಡು ಅವ್ನ ಟ್ರೀಟ್ ಮಾಡ್ತಾ ಇದ್ದ ಡಾಕ್ಟರ್‍ನ ಮೀಟ್ ಮಾಡಿ ನಂದೂ 0 –ve ನಾನು ಬ್ಲಡ್ ಕೊಡ್ತೇನೆ ಅಂತ ಅಂದೆ!
ಆದ್ರೆ ಆ ಡಾಕ್ಟರ್ ಅವ್ರ ಮಾಮೂಲಿ ಡೈಲಾಗ್ ಬಿಟ್ರು!!!!
“You Are too late, Patient is no more!!” ಅಂತ!!

ಅಲ್ಲೇ ಒಂದ್ಸಲ ಭೂಮಿ ಕುಸಿದ ಹಾಗೆ ಅನ್ನಿಸ್ತು!!
ಆ ಡಾಕ್ಟರ್ ನನ್ನ ಅವ್ನ ಡೆಡ್ ಬಾಡಿ ಹತ್ರ ಕರ್ಕೊಂಡು ಹೋದ್ರು!!

ನಂಗೆ ಅವ್ನ ಮುಖ ನೋಡೋ ಧೈರ್ಯ ಇರ್ಲಿಲ್ಲ!! ಅವ್ನ ಕಾಲ ಬಳಿ ಕುಸಿದು ಕೂತೆ! ಅದೇ ನನ್ನ ಕೆಂಪು ಹುಡುಗಿ ಎಸ್ದ ಗುಲಾಬೀನ ಅವ್ನ ಕಾಲ ಬಳಿ ಇಟ್ಟೆ! “ ನನ್ನ ಕ್ಷಮಿಸು” ಅಂತ ಅಂದೆ!

ನನ್ನ ಕಣ್ಣೀರಿನೊಂದಿಗೆ ನನ್ನ ಕೈಯ ಗಾಯದಿಂದ ತೊಟ್ಟಿಕ್ಕುತ್ತಿದ್ದ ರಕ್ತ ಕಲೆತು ಅವನ ಕಾಲಿಲ್ಲಾ ಕೆಂಪಾಯ್ತು!!

ಅದೇ ನನ್ನ ಪ್ರೀತಿಯ ಕೆಂಪು ಬಣ್ಣ!!!!!!!

                                                          ಗೀಚಿದ್ದು : Shivanandan Rao