Showing posts with label ಕವನ. Show all posts
Showing posts with label ಕವನ. Show all posts

Friday, 21 December 2012

ಕನಸು-ಕವನ

ಕನಸು-ಕವನ


ಕನಸುಗಳೂ ಹಾಗೇನೆ....
ಕವನಗಳೂ ಹಾಗೇನೆ...

ಮೆತ್ತನೆಯ ಕನಸುಗಳೂ ಅಂತೆಯೇ
ಒತ್ತರಿಸಿ ಬರುವ ಕವನಗಂತೆ....
ಬಂದರೆ ಬರುತ್ತಲೇ ಇರುತ್ತವೆ...

ಬತ್ತಿಸಿದ ಕವನಗಳೂ ಅಂತೆಯೇ
ಬುಡಕತ್ತರಿಸಿದ ಕನಸುಗಳಂತೆ....
ಸತ್ತರೆ ಸತ್ತೇ ಹೋಗುತ್ತವೆ....

"ಅವೇನೋ ಮತ್ತೆ ಬರುತ್ತವೆ"
ಹಾಗೆಂದು- ಅವುಗಳನ್ನ
ಒತ್ತಟ್ಟಿಗಿರಿಸಿದರೆ ಮತ್ತಿಲ್ಲ..



ಗೀಚಿದವರು : ರತ್ನಾಕರ ಶೆಟ್ಟಿ 


Monday, 2 January 2012

ಪ್ರೀತಿ

ಪ್ರೀತಿ


ಎರಡು ನಿಮಿಷದ ನೋಟದ ನಂತರ;
ನಿನ್ನ ಕಣ್ಣು ನಿನ್ನ ಹಿಡಿತದಲ್ಲಿರದೆ;
ಆಕೆಯ ಸೌಂದರ್ಯದೆಡೆಗೆ ವಾಲೀ;
ಹೃದಯವು ಆಕೆಯ ನಾಮ ಜಪಿಸುತ್ತ;
ಮನಸ್ಸು ಆಕೆಯನ್ನೇ ಬಯಸಿದರೆ;
ಮನದಲ್ಲಿ ಮೂಡುವ ಆ ಭಾವನೆ;
ಅದು ಪ್ರೀತಿಎಂಬುವುದೊಂದು ಕಲ್ಪನೆ .

ಈ ಪ್ರೀತಿಯೆಂಬ ವ್ಯಮೊಹದಲ್ಲಿ;
ಮರೆತು ನಿನ್ನ ವಿದ್ಯಾಭ್ಯಾಸವನ್ನು; 
ಹದಿಹರೆಯದ ಈ ವಯಸ್ಸಿನಲ್ಲೇ;
ನಿನ್ನ ಭವಿಷ್ಯವನ್ನೇಕೆ ಕೊಲ್ಲುತೀ...?!!!
ನಿಜವಾದ ಪ್ರೀತಿ ನಿನ್ನ ಕಣ್ಣೆದುರೇ ಇದೆ,
ಅದ ನೀ ಮರೆತಿರಬಹುದು;
ಆದರೆ ನಿನ್ನ ತಾಯಿಗದು ನೆನಪಿದೆ. 

                                            - ರಂಜಿತಾ ಹೆಗ್ಡೆ.ಆರ್ 
 

ನೋವು

ನೋವು
ತನ್ನ ನೋವು ತನಗೇ ಅದು ಅರ್ಥವಾಗುವುದು. ನೋವು... ಅದನ್ನ ಹೋಲಿಸಲಾಗದು.
 ಜೀವನವೆಂಬ ಪಯಣದಲ್ಲಿ,
ತಮ್ಮವರಿಂದ ದೂರವಾದಲ್ಲಿ,
ಅನುಭವಿಸುವಂತಹ ನೋವು,
ಅನುಭವಿಸಿದವರಿಗೇ ಅದರ ಅರಿವು.
ಹಲವು ಸಮಯಗಳುರುಳಿದ ನಂತರ,
ತನ್ನವರನ್ನು ಸಿಕ್ಕಿ ಮತ್ತೆ ದೂರವಾಗುವಾಗ ,
ಆಕೆಯು ಮನದಲ್ಲಿ ಪಡುವ ವ್ಯಸನ,
ಉಂಟುಮಾಡುವುದು ಮನಸ್ಸಿನ ದಹನ .
ತನ್ನ ಜೀವನದ ಕೊನೆಗಾಲದಲ್ಲಿ,
ಇದ್ದೊರ್ವ ಮಗನನ್ನು ಕಳೆದುಕೊಂಡಲ್ಲಿ,
ಆ ತಾಯಿಯು ಪಡುವಂತಹ ಅಳಲು,
ಅದನ್ನು ಆಕೆಯೇ ಬಲ್ಲಳು .
ಭುವಿಯಲ್ಲಿ ಮಗುವಾಗಿ ಜನ್ಮ ತಾಳಿದಲ್ಲಿ,
ಹೆತ್ತವರ ಮೊಗವನ್ನೇ ನೋಡದಲ್ಲಿ,
ಆಕೆಯ ಜೀವನವೇ ಒಂದು ದುರಂತ,
ಆಕೆಗೇ ಗೊತ್ತು ಆ ನೂವೇನಂತ.
ಹೆಣ್ಣೆಂದು ತನ್ನವರಿಂದ ಶೋಷಿತಳಾದಲ್ಲಿ,
ಶೈಶವದಲ್ಲೇ ದುಃಖಅನುಭವಿತಳಾದಲ್ಲಿ,
ಅವಳು ಪಡುವಂತಹ ಆಂತರಿಕ ಶೋಕ,
ಅವಳಿಗೇ ತಿಳಿದಿಹುದು ಆಕೆಯ ದುಃಖ.
ಪ್ರಿಯ ಪ್ರಾಣಿಯ ದೇಹಾಂತ್ಯವಾದಲ್ಲಿ ,
ತನ್ನ ಕಂಬನಿಯು ಪರರಿಗೆ ಹಾಸ್ಯವಾದಲ್ಲಿ,
ಅವಳು ಪಡುವಂತಹ ವೈರಾಗ್ಯ,
ತರುವುದು ಅವಳಲ್ಲಿ ನೈಜ್ಯ ನೈಚ್ಯ .

                                                            - ರಂಜಿತಾ ಹೆಗ್ಡೆ.ಆರ್

Sunday, 18 December 2011

ಕರುಳ ಕೂಗು


ಕರುಳ ಕೂಗು

ಕದ ತಟ್ಟಿ ಕರೆಯಿತು

ಕರುಳ ಬಳ್ಳಿ....
ಮನ ಮುಟ್ಟಿ ನಗಿಸಿತು
ಪ್ರೀತಿಯಲ್ಲಿ .......


ಮುನಿಸೇಥಕೆ ಮಗುವೆ
ನಿನಗೆ ನನ್ನಲ್ಲಿ ..
ಮುನಿಸು ತೊರೆದು ಬಾ
ನಗೆ ಚೆಲ್ಲಿ
...


ಬರೆದವರು :- ಸಂಜಯ್ ರಾವ್.

Tuesday, 1 November 2011

ಹೆಣ್ಣು ಸತ್ತಲ್ಲಿ ...

ಹೆಣ್ಣು ಸತ್ತಲ್ಲಿ ...



ಆಕೆಯು ಸ್ವಭಾವತಹ ಅತೀ ಮೃದು ,
ಮೃದುತ್ವವೆ ಆಕೆಯ ಮನಸ್ಸು .
ಆಕೆಯ ನಗುವಿನಲ್ಲಿ ಅಡಗಿಹುದು ಅಳು.
ಸ್ನೇಹ, ಶಾಂತಿ, ಸಹನೆಯ ಸಂಕೇತ ಅವಳು.
ಪ್ರೀತಿ, ಮಮತೆ, ಕರುಣೆಯ ಸಾಗರವೂ ಹೌದು .
ನಿನ್ನ ಪ್ರತಿ ಹೆಜ್ಜೆ, ನಿನ್ನ ಪ್ರತಿ ಉಸಿರು ,
ನಿನ್ನ ಪ್ರತಿ ಮಾತು, ನಿನ್ನ ಪ್ರತಿ ವಿಜಯ,
ಅದು ಆಕೆ ನಿನಗೆ ನೀಡಿದ ಭಿಕ್ಷೆ.
ಆಕೆ ಇಲ್ಲದೆ ಊಹಿಸಲಾರದು ನಿನ್ನ  ಜೀವನ .
ಆಕೆಯ ಗರ್ಭದಿಂದಲೇ ಹೊಸ  ಜನನ .
ಆಕೆಯೇ ಹೆಣ್ಣು ...
ಹೆಣ್ಣು ಹೆತ್ತಲ್ಲಿ ಸಂತಸ ಪಡು ,
ಅವಳ ಆಕಾಂಕ್ಷೆಗಳಿಗೆ ನೀನು ಸ್ಪೂರ್ತಿ ನೀಡು.
ಅವಳ ಉಸಿರ ನಿಲ್ಲಿಸುವ ಮುನ್ನ ನೀ ಯೋಚಿಸು;
ಒಂದು ಬಾರಿ ಸರಿಯಾಗಿ ಯೋಚಿಸು.
ಅವಳಂತೆ ನಿನ್ನ ತಾಯಿಯು ಕೂಡಾ ,
 ಜನಿಸಿ ಅಥವಾ ಜನಿಸುವ ಮುನ್ನ ಮೃತ ಪಟ್ಟಿದ್ದಲಿ ,
ನಿನ್ನ ಅಸ್ತಿತ್ವವಿರುತಿತ್ತೆಲ್ಲಿ ?!!!
ಪ್ರತಿ ಹೆಣ್ಣು ಹೀಗೆ ಸತ್ತಲ್ಲಿ ,
ಮುಂದಿನ ಪೀಡಿಯ ಅಸ್ತಿತ್ವವೆಲ್ಲಿ?!!!


"ದಯವಿಟ್ಟು ಹೆಣ್ಣೆಂದು ಕೊಲ್ಲುವವರಲ್ಲಿ ನೀವೊಬ್ಬರಾಗಬೇಡಿ."


ಗೀಚಿದವರು :- ರಂಜಿತಾ ಹೆಗ್ಡೆ .ಆರ್ 
(R.R.Hegde)
31/10/2011 
 


Tuesday, 4 October 2011

ಅದ್ಭುತ ಪ್ರಕೃತಿ

ಅದ್ಭುತ ಪ್ರಕೃತಿ 



ಪ್ರಕೃತಿಯ ಕಾರಣದಿಂದ ಸುರಿಯುವ ಮಳೆಗೆ,
ಧರೆ ಮುಟ್ಟುವ ಪ್ರತಿಯೊಂದು ಹನಿಗೆ,
ಮರ-ಗಿಡ-ಭುವಿಯ ಅದ್ಭುತ ಸ್ಪಂದನ,
ಇದುವೇ ಪ್ರಕೃತಿಗೆ ಹೊಂದಿರುವವುಗಳ ಮಧ್ಯೆ ಇರುವ ಭಂದನ.




ಆಗಸದಿಂದ ಉದುರುವ ಪ್ರತಿ ಹನಿ ಮಳೆಗೂ,
ಮರದಲ್ಲಿ ಚಿಗುರುವ ಪ್ರತಿ ಎಳೆ ಎಳೆಗೂ,
ಇರುವಂತಹ  ಜನ್ಮ ಜನ್ಮದ ಭಂದನ,
ಇದುವೇ ಪ್ರಕೃತಿ ಸ್ಪಂದನದ ಚಂದನ .




ಧರೆಯ ಕಡೆ ಸಾಗುವ ಸೂರ್ಯ ರಶ್ಮಿಯು,
ಧರೆಯಲ್ಲಿ ತಲೆಯೆತ್ತಿ ನಿಂತ ಮರದ, ಕೆಲವು ..
ಚಿಗುರೆಲೆಗಳ ದಾಟಿ ನೆಲ ಮುಟ್ಟುವ ಅಂದವ ,
ಹೊಗಳಲು ಪದ ಸಾಲದೆನ್ನುವ ಅದ ನೋಡಿ ಸವಿದವ .





ನೀಲ ಮೇಘವ ಕೆಂಪಾಗಿಸಿ ಆ ಬೆಂಕಿಯ ಚೆಂಡು,
ಭುವಿಯಿಂದ ಕಣ್ಮರೆಯಾಗಲು ಸಿದ್ದವಾದಾಗ , ಹಕ್ಕಿಗಳ..
ಸವಿ ಗಾನದೊಂದಿಗೆ ತಂಗಾಳಿಯಿಂದ ಕೂಡಿದ ಸಂಜೆಯ ಸೊಬಗು.
ನೀಡುವುದು ಅಲ್ಲಿ ನೆರೆದಿರುವವರ ಮನಸ್ಸಿಗೆ ಸೊಗಸು.


ಗೀಚಿದ್ದು :-ರಂಜಿತಾ ಹೆಗ್ಡೆ .ಆರ್ 
         (೧೮/೦೪/೨೦೧೧)




Wednesday, 21 September 2011

ಮುಂಜಾನೆಯ ಸೃಷ್ಟಿ


ಅಂದು ನಾ ನಿನ್ನ ಬರಮಾಡಿಕೊಳ್ಳುವ
ತವಕದಲ್ಲಿ ತನು
ಮನ-ಮನೆಗಳ ಬಾಗಿಲು
ಮುರಕೊಂಡೆ.....
ಇಂದೆನ್ನ ಮನೆಗೆ ಬಾಗಿಲಿಲ್ಲ...
ಮೊರೆವ ಗಾಡಾಂಧಕಾರದ
ಕಾಣದ ಕಾನನನೆಡೆಯಲ್ಲಿ
ಒಂಟಿಮನೆಯೆನ್ನದು...
ಕೊರೆವ ಚಳಿಯಲ್ಲಿ
ಸುರಿವ ಬರಮಳೆಗೆ...
ಮುರುಕಲು ಮನೆಯ
ಅದ್ಯಾವುದೋ ಅಂಚಲ್ಲಿ
ಕೊರಕಲು ಕಲ್ಲಮೇಲೆ
ಕೊಕ್ಕರಗಾಲಲ್ಲಿ ಕೂತಿರುವೆ...
ಮನ-ಮನೆಗಳಿಗೆ ಹಂಚಿಲ್ಲ...

ಅಂದೊಮ್ಮೆ ಹೇಳಿದ್ದಿ ನೀ
'ಇನ್ನೂ ಕಾಲ ಮಿಂಚಿಲ್ಲ'
ಹುಂ.. ಇಂದದಕೆ ಅರ್ಥವಿಲ್ಲ...
ಕನಸುಗಳೆಲ್ಲ ವ್ಯರ್ಥ...
ಇಂದು ಈಗಿರುವುದು
ನಡುಗಿಸುವ ಮಿಂಚು ಮಾತ್ರ
ಎನ್ನೆದೆಯ ಗೂಡನ್ನೆ
ಅಡರಿಸುವ..ಬಡಬಡಿಸುವ
ಗುಡುಗುಗಳು ಮಾತ್ರ

ಪ್ರಶ್ನೆಗಳೊಂದಷ್ಟಕ್ಕೆ
ಎಲ್ಲಿಯೂ ಇಲ್ಲದ ಉತ್ತರ..
ಕೇಳಿಕೊಳ್ಳುವುದು...
ಹೇಳಿಕೊಳ್ಳುವುದು...
ನಾ ಯಾರ ಹತ್ತಿರ..?

ಅದೊಂದು ಗೋಡೆಯ
ಮೇಲೊಂದು ಮಿಣುಕು
ಬೆಳಕು ಮೂಡುತ್ತಿದೆಯೇ?!
ವಿಚಿತ್ರ...ಮಿಂಚು
ಮಿಂಚಿದ ಮೇಲೂ
ಮಿಣುಕಿನಾ ಆಸೆಯೇ...?!

ಹಾಳಾದ ಮನಸ್ಸು...
ಅದೂ ನನ್ನದೇ.. ಆದರೂ
ನಾ ಹೇಳಿದಂತಿಲ್ಲ..
ಬೇಡವೆಂದರೂ ಕನಸ
ಕಟ್ಟುತ್ತಿದೆ...

ಮುರಿದ ಬಾಗಿಲ ಸಂದಿನೆಡೆಯಲ್ಲಿ
ಕಾಣುವ ಒಂಟಿಮರದ
ಗೀಜಗನ ಗೂಡು ಅದಕೂ
ಕಾಣಿಸುತ್ತಿದೆ...
ಕನಸ ಪೋಣಿಸುತ್ತಿದೆ...
ಹುಚ್ಚು..ಮುರಿದ ಬಾಗಿಲ
ಯಾರು ತಟ್ಟುತ್ತಾರೆ?
ಅಲ್ಲ..ಅದು ಮಿಣುಕು
ಅಣಕಿಸುತ್ತಿರುವುದಲ್ಲ...
ಹಾಗಾದರೆ..ಅದು??!
ಹೌದು.. ಮನದನ್ನನಿಲ್ಲದ
ಮನೆಗೋಡೆ ನಿಲ್ಲದೆ
ಬಿರುಕು ಬಿಡುತಿಹುದು...

ಕನಸುಗಳು ನೆಲಕಚ್ಚಿ
ಬೆಂದುಹೋಗುವಾ ಸಮಯ
ಬೆಳಕ ನೋಡಿರದ ಮನಕೆ
ನೀ ನಂದು ಹಚ್ಚಿದ್ದ ಹಣತೆ
ನಂದಿಹೋಗುವುದೇ ಗೆಳೆಯಾ?

                                ಹೊಸತನದಿಂದ

Sunday, 15 May 2011

ಜೀವನ-ಪಾವನ

ಮನದಲಿ ಹಿತ ಬಯಸುವ ಬಾವನೆ...
ಕಲ್ಮಶದ ಅರ್ಥವೇ ತಿಳಿಯದ ಚಿಂತನೆ..
ಒಡೆದ ಹೃದಯದ ಪ್ರತಿ ಚೂರುಗಳಲೂ...
ಕೇವಲ ಒಳಿತೇ ಅವಿತಿರುವ ಮನಸು...
ಇದನರಿತಿರುವ ಜೀವದ ಜೀವನ...
ನಿಜಕೂ ಅದು ಎಂದೆಂದಿಗೂ ಪಾವನ.

ಕಣ್ಣಿಂದ ಉರುಳಿದ ಪ್ರತಿ ಬಿಂದು...
ಮೊಳಕೆಯೊಡೆದು ಪುಷ್ಪವೃಷ್ಟಿ ಸುರಿಸಿದಾಗ...
ಬಾಳಲ್ಲಿ ಕತ್ತಲು ಕವಿದ ಕಷ್ಟದ ಕರಿಮೋಡ...
ಸಿಡಿದು ಸಂತಸವೆಂಬ ವರ್ಷದ ಮೂಲವಾದಾಗ..
ಅಂಥಹ ಪ್ರತಿ ಒಂದು ಜೀವನ...
ನಿಜಕೂ ಅದು ಎಂದೆಂದಿಗೂ ಪಾವನ.

ಹೆತ್ತವರ ಆಸರೆಯ ನೆರಲಲಿ ಬೆಳೆದು...
ನಂತರ ಹೆತ್ತವರಿಗೆ ಆಸರೆಯಾಗಿ ನಿಂತು..
ಅವರ ಮಗುವಾದರೂ, ಅವರ ಮ್ಮುಪ್ಪಿನಲಿ..
ಮಗುವಂತೆ ಪ್ರೀತಿಸಿ ಅವರನು ಪಾಲಿಸಿದಲಿ...
ಅಂತಹ ಪ್ರತಿಯೊಂದು ಜೀವನ...
ನಿಜಕೂ ಅದು ಎಂದೆಂದಿಗೂ ಪಾವನ.

ಕೇವಲ ಅಂಕೆಗಾಗಿ ಓದಿ ಮರೆಯದೆ..
ಕಲಿಯುವ ವಿದ್ಯೆಯ ಅರ್ಥಮಾಡಿ ಅರಿತು...
ಜಾನ ಸಂಪಾದಿಸುವ ಅರ್ಹತೆಯೊಂದಿಗೆ...
ಬಯಸಿದವರಿಗೆ ನೀಡುವ ಮನಸಿದ್ದಲ್ಲಿ...
ಅಂತಹ ಪ್ರತಿಯೊಂದು ಜೀವನ....
ನಿಜಕೂ ಅದು ಎಂದೆಂದಿಗೂ ಪಾವನ.

                   ಗೀಚಿದ್ದು :~ ರಂಜಿತಾ ಹೆಗ್ಡೆ. ಆರ್